– ಪಬ್ಲಿಕ್ ಹೀರೋ ವಿಶು ಶೆಟ್ಟಿ ತಂಡದ ಸಹಾಯ
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಡಿ ಗ್ರೂಪ್ ಸಿಬ್ಬಂದಿ ಹಾಗೂ ಇತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ 105 ಆಹಾರ ವಸ್ತುಗಳ ಕಿಟ್ ವಿತರಿಸಲಾಯಿತು.
ಸರಕಾರಿ ಆಸ್ಪತ್ರೆಯ ಕೆಲಸವಾದರೂ ಇವರು ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವುದರಿಂದ ಇವರ ವೇತನ ಬಹಳ ಕಡಿಮೆ. ಕೆಲವು ಸಿಬ್ಬಂದಿಯ ಜೀವನ ನಿರ್ವಹಣೆ ಕೊರೊನಾ ಸಮಸ್ಯೆಯಿಂದ ಇನ್ನಷ್ಟು ಬಿಗಡಾಯಿಸಿದೆ. ಈ ಬಗ್ಗೆ ಸಮಾಜ ಸೇವಕ, ಪಬ್ಲಿಕ್ ಹೀರೋ ವಿಶು ಶೆಟ್ಟಿಯವರಿಗೆ ಮಾಹಿತಿ ಸಿಕ್ಕಿದೆ.
Advertisement
Advertisement
ವಿಶು ಶೆಟ್ಟಿಯವರಿಗೆ ತಿಳಿದ ಕೂಡಲೇ ತಮ್ಮ ಮಿತ್ರರಾದ ಡೊನಾಲ್ಡ್ ಸಾಲ್ದಾನರ ಗಮನಕ್ಕೆ ತಂದಿದ್ದಾರೆ. ತುರ್ತಾಗಿ ಸ್ಪಂದಿಸಿದ ಡೊನಾಲ್ಡ್ ಸಾಲ್ದಾನರವರು ನಾಗರಿಕ ಆರೋಗ್ಯ ವೇದಿಕೆ ಮತ್ತು ಎಸ್‍ವಿಪಿ ಫೌಂಡೇಶನ್ ಮುಖಾಂತರ 55 ಆಹಾರದ ಕಿಟ್ ನೀಡಿದ್ದಾರೆ. ಉಳಿದ 50 ಆಹಾರದ ಕಿಟ್ ವಿಶು ಶೆಟ್ಟಿಯವರು ನೀಡಿ ಸಹಕರಿಸಿದರು.
Advertisement
ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸೇವೆ ಅಮೂಲ್ಯದ್ದಾಗಿದೆ. ಅವರು ಅಸಹಾಯಕ ಪರಿಸ್ಥಿತಿಯಲ್ಲಿ ಇರುವುದಕ್ಕೆ ವಿಶು ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಶ್ರಮಿಸುವ ವ್ಯಕ್ತಿಗೆ ಅಸಹಾಯಕತೆ ಬರಬಾರದು. ಸರ್ಕಾರ ಅವರ ಆರ್ಥಿಕ ಮತ್ತು ಮನೆಯ ಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಬೇಕು ಎಂದು ವಿಶು ಶೆಟ್ಟಿ ಪಬ್ಲಿಕ್ ಟಿವಿ ಮೂಲಕ ಒತ್ತಾಯಿಸಿದ್ದಾರೆ.