ಬೆಂಗಳೂರು: ಕೊರೊನಾ ಭೀತಿ ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದೆ. ನಿತ್ಯ ನೂರಾರು ಮನೆಗಳಿಗೆ ಹೋಗಿ ಆರ್ಡರ್ ಕೊಟ್ಟು ಬರುವ ಡೆಲಿವರಿ ಬಾಯ್‍ಗಳಲ್ಲಿ ಆತಂಕ ಶುರುವಾಗಿದ್ದು, ಬೆಂಗಳೂರು ಬಿಟ್ಟು ತಮ್ಮ ಊರುಗಳತ್ತ ತೆರಳಿದ್ದಾರೆ.
ಮನೆ ಮನೆಗಳಿಗೆ ಫುಡ್ ಆರ್ಡರ್ ಕೊಟ್ಟು ಬರುವ ಸಮಯದಲ್ಲಿ ಎಲ್ಲಿ ಸೋಂಕು ನಮಗೆ ಹರಡುತ್ತೋ ಎನ್ನುವ ಭಯದಿಂದ ಬೆಂಗಳೂರು ತೊರೆದಿದ್ದಾರೆ. ನಿತ್ಯ ನೂರಾರು ಡೆಲಿವರಿ ಬಾಯ್‍ಗಳು ಅಪಾರ್ಟ್‌ಮೆಂಟ್, ಮನೆ ಇತರೆ ಜಣದಟ್ಟಣೆ ಸ್ಥಳಗಳಿಗೆ ಹೋಗಿ ಆರ್ಡರ್ ಕೊಟ್ಟು ಬರುತ್ತಾರೆ.
Advertisement
Advertisement
ಈಗಾಗಲೇ ಹೋಟೆಲ್‍ಗಳಲ್ಲಿ ವ್ಯಾಪಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಆನ್‍ಲೈನ್‍ನಲ್ಲಿಯೂ ಫುಡ್ ಆರ್ಡರ್ ಮಾಡುತ್ತಿದ್ದಾರೆ. ಒಂದೆಡೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಗ್ರಾಹಕರಿಗೆ ಆರ್ಡರ್ ತಲುಪಿಸುವ ಫುಡ್ ಡೆಲವರಿ ಬಾಯ್‍ಗಳ ಸಂಖ್ಯೆ ಕಡಿಮೆಯಾಗುತ್ತಿದೆ.
Advertisement
ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡಿದರೆ ಡೆಲಿವರಿ ಬಾಯ್‍ಗಳು ಬಾಕ್ಸ್ ಅನ್ನು ಗ್ರಾಹಕರ ಕೈಗೆ ಕೊಡುವ ಬದಲು ಮನೆಯ ಡೋರ್ ಬಳಿಯೇ ಇಟ್ಟು ಹೋಗುತ್ತಾರೆ. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಗ್ರಾಹಕರ ಕೈಗೆ ಫುಡ್ ಬಾಕ್ಸ್ ನೀಡದಿರಲು ಡೆಲಿವರಿ ಬಾಯ್ಸ್ ನಿರ್ಧರಿಸಿದ್ದಾರೆ. ಈಗಾಗಲೇ ಸ್ವಿಗ್ಗಿ ಕಂಪನಿಯಿಂದ ಗ್ರಾಹಕರ ಕೈಗೆ ಪಾರ್ಸೆಲ್ ಬಾಕ್ಸ್ ನೀಡದಂತೆ ತನ್ನ ಸಿಬ್ಬಂದಿಗೆ ಸೂಚಿಸಿದೆ.