ಶಾಲೆಯ ಸೂಚನೆ – ಮಾಸ್ಕ್ ಧರಿಸಿ, ಸ್ಯಾನಿಟೈಜರ್‌ನೊಂದಿಗೆ ಬಂದ ವಿದ್ಯಾರ್ಥಿಗಳು

Public TV
1 Min Read
CKB 5

ಚಿಕ್ಕಬಳ್ಳಾಪುರ: ಕೊರೊನಾ ಆತಂಕ ಎಲ್ಲರನ್ನ ಭಯಭೀತಿಗೊಳಿಸಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಬಳ್ಳಾಪುರ ನಗರದ ಖಾಸಗಿ ಶಾಲೆಯೊಂದು ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಹಾಗೂ ಸ್ಯಾನಿಟೈಜರ್‌ ತೆಗೆದುಕೊಂಡು ಶಾಲೆಗೆ ಬರುವಂತೆ ಸೂಚನೆ ನೀಡಿದೆ.

ನಗರದ ಗುಡ್ ಶೆಫರ್ಡ್ ಖಾಸಗಿ ಶಾಲಾ ಆಡಳಿತ ಮಂಡಳಿ ಈ ಸೂಚನೆ ನೀಡಿದ್ದು, ಶಾಲೆಯ ಬಹುತೇಕ ವಿದ್ಯಾರ್ಥಿಗಳು ಇಂದು ಮುಖಕ್ಕೆ ಮಾಸ್ಕ್ ಧರಿಸಿ, ಸ್ಯಾನಿಟೈಜರ್‌ನೊಂದಿಗೆ ಶಾಲೆಗೆ ಆಗಮಿಸಿದ್ದಾರೆ. ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ಈ ಶಾಲೆಯಲ್ಲಿ ಸರಿಸುಮಾರು 480 ವಿದ್ಯಾರ್ಥಿಗಳಿದ್ದು, ಎಲ್ಲಾ ಬಹುತೇಕ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಸ್ಯಾನಿಟೈಜರ್‌ ತೆಗೆದುಕೊಂಡು ಬಂದಿದ್ದಾರೆ.

CKB 1 1

ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನ ಕೈಗೊಂಡಿದ್ದೇವೆ. ದೇಶದ ಇತರೆ ಕಡೆ ಕೂಡ ಕೊರೊನಾ ವೈರಸ್ ಹಬ್ಬಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳಿಗೆ ಈ ಸೋಂಕು ತಗಲದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಂಡಿದ್ದೇವೆ. ವಿದ್ಯಾರ್ಥಿಗಳು ಹೆಚ್ಚಿನ ಸಮಯ ಮನೆಗಿಂತ ಶಾಲೆಯಲ್ಲಿ ಕಳೆಯುವುದರಿಂದ ಅವರು ನಮ್ಮ ಮಕ್ಕಳಂತೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸೋದು ನಮ್ಮ ಕರ್ತವ್ಯ ಎಂದು ಶಿಕ್ಷಕಿ ವಿಜಯಲಕ್ಷ್ಮಿ ಹೇಳಿದರು.

CKB 3 1

ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕ್ ಸ್ಯಾನಿಟೈಜರ್ ಖಾಲಿ:
ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ತರಲು ಶಾಲಾ ಆಡಳಿತ ಮಂಡಳಿ ಸೂಚಿಸಿದ್ದ ಹಿನ್ನೆಲೆ, ನಗರದ ಎಲ್ಲಾ ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಗಳು ಖಾಲಿಯಾಗಿವೆ. ಬುಧವರಾದಿಂದ ಧಿಡೀರ್ ಅಂತ ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗೆ ತುಂಬಾ ಡಿಮ್ಯಾಂಡ್ ಬಂದಿದ್ದು, ಪ್ರಮುಖವಾಗಿ ಈ ಶಾಲೆಯ ಮಕ್ಕಳು ಮಾಸ್ಕ್ ಹಾಗೂ ಸ್ಯಾನಿಟೈಜರ್ ಗಾಗಿ ಮೆಡಿಕಲ್ ಶಾಪ್‍ಗಳಿಗೆ ಮುಗಿಬಿದ್ದಿದ್ದಾರೆ.

CKB 2 1

ಬಹುತೇಕ ಮೆಡಿಕಲ್ ಶಾಪ್‍ಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಲಭ್ಯವಿಲ್ಲ. ನಾರ್ಮಲ್ 5 ರೂಪಾಯಿಯ ಮಾಸ್ಕ್ 15-20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಸ್ಯಾನಿಟೈಜರ್ ಸಹ ಎಂಆರ್‌ಪಿಗಿಂತ 5-10 ರೂಪಾಯಿ ಹೆಚ್ಚಿಗೆ ಮಾರಾಟ ಮಾಡಲಾಗುತ್ತಿದೆ. ಮೆಡಿಕಲ್ ಶಾಪ್ ಮಾಲೀಕರು ಸಹ ಮಾಸ್ಕ್ ಹಾಗೂ ಸ್ಯಾನಿಟೈಜರ್ ಆರ್ಡರ್ ಮಾಡೋಕೆ ಮುಂದಾಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *