ಕಲಬುರಗಿ: ಜಿಲ್ಲೆಯ ಖಡಕ್ ರೊಟ್ಟಿ ಎಲ್ಲೆಡೆ ಫೇಮಸ್. ಆದರೆ ಕೊರೊನಾ ಲಾಕ್‍ಡೌನ್ ಆಗಿದ್ದರಿಂದ ಇದನ್ನು ನಂಬಿದವರು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ.
ಕಲಬುರಗಿಯಲ್ಲಿ ಸಿದ್ಧವಾದ ಖಡಕ್ ರೊಟ್ಟಿಗಳು ಬೆಂಗಳೂರು ಸೇರಿದಂತೆ ದೂರ ದೂರದ ಮಹಾನಗರಗಳಿಗೆ ಸರಬರಾಜಾಗುತ್ತವೆ. ಆದ್ರೆ ಎಲ್ಲೆಡೆ ಲಾಕ್‍ಡೌನ್ ಇರೋದರಿಂದ ಯಾರೂ ಸಹ ರೊಟ್ಟಿ ಖರೀದಿಸುತ್ತಿಲ್ಲ. ಲಾಕ್‍ಡೌನ್ ಘೋಷಣೆಗೂ ಮುನ್ನ ರೆಡಿಯಾಗಿರೋ ಖಡಕ್ ರೊಟ್ಟಿಗಳು ಸಹ ಮಾರಾಟವಾಗದೇ ಉಳಿದಿವೆ. ಈಗಾಗಿ ಇದನ್ನೇ ನಂಬಿದ ರೊಟ್ಟಿ ಕೇಂದ್ರದ ಮಾಲೀಕರು ಕಂಗಾಲಾಗಿದ್ದಾರೆ.
Advertisement
Advertisement
ಏಪ್ರಿಲ್-ಮೇ ತಿಂಗಳು ಬಂದ್ರೆ ಸಾಕು ಮದುವೆ ಸೀಜನ್. ಈ ದಿನಗಳಲ್ಲಿ ಖಡಕ್ ರೊಟ್ಟಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರ್ತಿತ್ತು. ಆದ್ರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಭೆ ಸಮಾರಂಭಗಳಿಗೆ ಸರ್ಕಾರ ನಿರ್ಬಂಧ ಹೇರಿದೆ. ಹೀಗಾಗಿ ಈ ಹಿಂದೆ ರೊಟ್ಟಿಗೆ ಆರ್ಡರ್ ನೀಡಿದ್ದ ಜನ ಸಹ ರೊಟ್ಟಿ ಖರೀದಿಸುತ್ತಿಲ್ಲ. ಇನ್ನು ಹೋಟೆಲ್ ಹಾಗೂ ದಾಬಾಗಳಿಗೆ ಸರಬರಾಜು ಮಾಡಬೇಕು ಅಂದ್ರೆ ಅವು ಸಹ ಆರಂಭವಾಗಿಲ್ಲ. ಹೀಗಾಗಿ ಸಿದ್ಧಪಡಿಸಿದ್ದ ರೊಟ್ಟಿಗಳನ್ನು ಏನ್ ಮಾಡಬೇಕು ಅನ್ನೋ ಚಿಂತೆಯಲಿ ಮಾಲೀಕರಿದ್ದಾರೆ
Advertisement
Advertisement
ರಾಜ್ಯ ಸರ್ಕಾರ ಲಾಕ್‍ಡೌನ್ ಸಂಕಷ್ಟದಲ್ಲಿರೋ ಆಟೋ/ಕ್ಯಾಬ್ ಚಾಲಕರು ಸೇರಿ ಹಲವರಿಗೆ ನೆರವು ನೀಡಿದೆ. ರೊಟ್ಟಿ ಉದ್ಯಮದಂತಹ ಇನ್ನೂ ಹಲವರು ಸಂಕಷ್ಟದಲ್ಲಿದ್ದು ಅವರ ನೆರವಿಗೂ ಕೂಡ ನಿಲ್ಲಬೇಕಿದೆ.