ನವದೆಹಲಿ: ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಭಾರತದ ಹಲವು ವಿಮಾನಯಾನ ಕಂಪನಿಗಳು ವಿದೇಶಗಳಿಗೆ ನೀಡುವ ಸೇವೆಯನ್ನು ಬಲವಂತವಾಗಿ ರದ್ದುಗೊಳಿಸಿದೆ.
ಏರ್ ಇಂಡಿಯಾ ಮಾರ್ಚ್ 16 ರಿಂದ ಏಪ್ರಿಲ್ 30ರವರೆಗೆ ನೇಪಾಳದ ಕಠ್ಮಂಡು, ದುಬೈ, ಸೌದಿ ಅರೆಬಿಯಾದ ರಾಜಧಾನಿ ರಿಯಾದ್, ದಮ್ಮಂ, ಜೆಡ್ಡಾ, ಕತಾರ್ ರಾಜಧಾನಿ ದೋಹಾ, ಓಮನ್ ರಾಜಧಾನಿ ಮಸ್ಕತ್‍ಗೆ ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ ಹೋಗುವ ವಿಮಾನ ಸೇವೆಯನ್ನು ರದ್ದುಮಾಡಿದೆ.
Advertisement
Advertisement
ಏರ್ ಇಂಡಿಯಾ ಈಗಾಗಲೇ ಸ್ಪೇನ್ ಮ್ಯಾಡ್ರಿಡ್, ಫ್ರಾನ್ಸಿನ ಪ್ಯಾರಿಸ್, ಜರ್ಮನಿಯ ಫ್ರಂಕ್‍ಫರ್ಟ್, ಇಸ್ರೇಲಿನ ಟೆಲ್ ಎವಿವ್, ಇಟಲಿಯ ರೋಮ್ ಮತ್ತು ಮಿಲನ್, ದಕ್ಷಿಣ ಕೊರಿಯದ ಇಂಚಿಯಾನ್, ಕುವೈತ್, ಕೊಲೊಂಬೋಗೆ ಏಪ್ರಿಲ್ 30ರವರೆಗೆ ವಿಮಾನ ಸೇವೆಯನ್ನು ರದ್ದು ಮಾಡಿದೆ.
Advertisement
ಆರಂಭದಲ್ಲಿ ಭಾರತ ಯುರೋಪ್, ಇಂಗ್ಲೆಂಡ್ ಮತ್ತು ಟರ್ಕಿ ದೇಶದ ಪ್ರಯಾಣಿಕರಿಗೆ ನಿರ್ಬಂಧ ಹೇರಿತ್ತು. ಇದರಿಂದಾಗಿ ಹಲವು ಮಾರ್ಗಗಳು ಬಂದ್ ಆಗಿತ್ತು. ಭಾರತ ಸರ್ಕಾರ ತಾತ್ಕಾಲಿಕವಾಗಿ ಏಪ್ರಿಲ್ 15ರವರೆಗೆ ವಿಶ್ವಸಂಸ್ಥೆ, ರಾಯಭಾರ ಸೇವೆಯಲ್ಲಿ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಹೊರತು ಪಡಿಸಿ ಬೇರೆ ಯಾರಿಗೂ ವೀಸಾ ನೀಡುವುದಿಲ್ಲ ಎಂಬ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಈಗ ವಿಮಾನಯಾನ ಕಂಪನಿಗಳು ಸೇವೆಯನ್ನು ರದ್ದುಗೊಳಿಸುತ್ತಿವೆ.
Advertisement
ರದ್ದುಗೊಂಡ ವಾಯುಮಾರ್ಗಗಳು
ಹಾಂಕಾಂಗಿನಿಂದ ಭಾರತಕ್ಕೆ ಬರುವ ಕ್ಯಾಥೆಡ್ರಾಗನ್ ಸೇವೆ ಜೊತೆ ಬ್ಯಾಂಕಾಕ್, ಸಿಂಗಾಪುರ, ದೋಹಾ, ಕೊಲಂಬೋಗೆ ಸಂಚರಿಸುವ ಇಂಡಿಗೋ ವಿಮಾನ ಸೇವೆ ರದ್ದಾಗಿದೆ.
ಕೊಲಂಬೋಗೆ ಸಂಚರಿಸುವ ಗೋ ಏರ್, ಬ್ಯಾಂಕಾಂಕ್‍ನಿಂದ ಭಾರತಕ್ಕೆ ಬರುವ ಥಾಯ್ ಏರ್‍ವೇಸ್, ಮಲೇಷ್ಯಾ ಏರ್ ಲೈನ್ಸ್, ಕೌಲಾಲಂಪುರ್, ಸಿಂಗಾಪುರಕ್ಕೆ ಕೊಚ್ಚಿಯಿಂದ ಪ್ರಯಾಣಿಸುವ ಏರ್ ಇಂಡಿಯಾ ಎಕ್ಸ್ ಪ್ರೆಸ್, ರಿಯಾದಿಗೆ ಹೋಗುವ ಸೌದಿ ಅರೆಬಿಯಾ ಏರ್‍ಲೈನ್ಸ್, ಆಡಿಸ್ ಅಬಾಬಾದಿಂದ ಬರುವ ಇಥಿಯೋಪಿಯನ್ ಏರ್‍ಲೈನ್ಸ್ ಸೇವೆ ರದ್ದುಗೊಂಡಿದೆ.
ಕುವೈತ್‍ನಿಂದ ಬರುವ ಕುವೈತ್ ಏರ್‍ವೇಸ್, ಜರ್ಮನಿಯಿಂದ ಫ್ರಂಕ್‍ಫರ್ಟ್ ನಿಂದ ಹೊರಡುವ ಲುಫ್ತಾನ್ಸ ಏರ್‍ಲೈನ್ಸ್, ಮಸ್ಕತ್ ನಿಂದ ಹೊರಡುವ ಓಮನ್ ಏರ್, ಪ್ಯಾರಿಸ್‍ನಿಂದ ಬರುವ ಏರ್ ಫ್ರಾನ್ಸ್, ಬ್ಯಾಂಕಾಕ್‍ಗೆ ಸಂಪರ್ಕ ಕಲ್ಪಿಸುವ ಥಾಯ್ ಏರ್, ಬಹ್ರೇನ್ ದೇಶದಿಂದ ಬರುವ ಗಲ್ಫ್ ಏರ್, ಯುಎಇ ಶಾರ್ಜಾದಿಂದ ಬರುವ ಏರ್ ಅರೇಬಿಯಾ, ಲಂಡನ್‍ನಿಂದ ಹೊರಡುವ ಬ್ರಿಟಿಷ್ ಏರ್‍ವೇಸ್, ದುಬೈನಿಂದ ಬರುವ ಎಮಿರೇಟ್ಸ್ ವಿಮಾನ ಸೇವೆಗಳು ರದ್ದಾಗಿದೆ.