ನವದೆಹಲಿ: ಬೂಸ್ಟರ್ ಅಥಾವ ಮುನ್ನೆಚ್ಚರಿಕೆ ಡೋಸ್ ಪಡೆಯಲು ಕೊವಿನ್ ಆ್ಯಪ್‍ನಲ್ಲಿ ಮತ್ತೆ ನೋಂದಾಯಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
Advertisement
ಏಪ್ರಿಲ್ 10 ರಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕೆ ಡೋಸ್ ಪಡೆಯಲು ಶಿಫಾರಸ್ಸು ಮಾಡಿದ ಬಳಿಕ ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಈ ಹೇಳಿಕೆ ನೀಡಿದ್ದಾರೆ. ಮೂರನೇ ಅಲೆಯ ಬಳಿಕ ಕೇಂದ್ರ ಸರ್ಕಾರವೂ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಹೋರಾಟಗಾರಿಗೆ ಮತ್ತು 60 ವರ್ಷ ಮೇಲ್ಪಟ್ಟ, ಅಪಾಯದ ಅಂಚಿನಲ್ಲಿರುವ ವೃದ್ಧರಿಗೆ ಮುನ್ನೆಚ್ಚರಿಕೆ ಡೋಸ್ ಹೆಸರಿನಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. ಈಗ ನಾಲ್ಕನೇ ಅಲೆಯ ಭೀತಿ ಎದುರಾಗಿರುವ ಹಿನ್ನಲೆ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಏಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದು – ಆರೋಗ್ಯ ಇಲಾಖೆ
Advertisement
➡️Orientation of States/UTs on Administration of Precaution Dose to 18-59 years old population at Private CVCs.https://t.co/AEsyZXIeNZ pic.twitter.com/ByxErTmEGA
— Ministry of Health (@MoHFW_INDIA) April 9, 2022
Advertisement
Advertisement
ಖಾಸಗಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಪಡೆಯುವ ಜನರು ಸರ್ಕಾರ ನಿಗಧಿಪಡಿಸಿರುವ ವ್ಯಾಕ್ಸಿನ್ ಬೆಲೆಯ ಮೇಲೆ 150 ವರೆಗೂ ಸೇವಾ ಶುಲ್ಕ ನೀಡಬಹುದು. ಅದಕ್ಕಿಂತ ಹೆಚ್ಚಿನ ಹಣವನ್ನು ಆಸ್ಪತ್ರೆಗಳು ಕೇಳುವಂತಿಲ್ಲ ಎಂದು ಆರೋಗ್ಯ ಇಲಾಖೆ ಇದೇ ಸಂದರ್ಭದಲ್ಲಿ ತಿಳಿಸಿದ್ದು, ಮೊದಲ ಮತ್ತು ಎರಡನೇ ಬಾರಿ ತೆಗೆದುಕೊಂಡ ವ್ಯಾಕ್ಸಿನ್ ಅನ್ನೆ ಮೂರನೇ ಡೋಸ್‍ನಲ್ಲಿ ಪಡೆಯಬೇಕು. ವ್ಯಾಕ್ಸಿನ್ ಕಂಪನಿಗಳನ್ನು ಬದಲಿಸಬಾರದು ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ತವರಿಗೇ ಲಗ್ಗೆಯಿಟ್ಟ XE ಕೊರೊನಾ ರೂಪಾಂತರಿ