ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ಸಾರ್ವಜನಿಕ ಆರೋಗ್ಯ ತಜ್ಞರ ವರದಿಯಲ್ಲಿ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಕೊರೊನಾ ಪರಿಣಾಮದ ಬಗ್ಗೆ ಸ್ಫೋಟಕ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
Advertisement
ಕೊರೊನಾ ಮೂರನೇ ಅಲೆ ಮಕ್ಕಳಿಗೆ ಕಂಟಕವಾಗುವ ಸಾಧ್ಯತೆ ಇದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಸೋಂಕು ಅಟ್ಯಾಕ್ ಆಗುತ್ತದೆ ಎಂದು ವರದಿ ನೀಡಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿತರಾದ, ಮಕ್ಕಳ ಸಂಖ್ಯೆಗಿಂತಲೂ ಈ ಬಾರಿ ಏಳು ಪಟ್ಟು ಹೆಚ್ಚಾಗುವ ಬಗ್ಗೆ ಸಂಶೋಧನೆಯಲ್ಲಿ ತಜ್ಞರು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಾಳೆಯಿಂದ ಎರಡನೇ ಹಂತದ ಶಾಲೆಗಳು ಆರಂಭ
Advertisement
Advertisement
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಸಾಂಕ್ರಾಮಿಕ ಖಾಯಿಲೆಗಳ ತಜ್ಞ ಡಾ. ಗಿರಿಧರ್ ಬಾಬು, ಎರಡನೇ ಅಲೆಗಿಂತ ಮೂರನೇ ಅಲೆಯ ತೀವ್ರತೆ, ಮೂರರಿಂದ ಹತ್ತುಪಟ್ಟು ಹೆಚ್ಚಾಗಬಹುದು. ಮೂರನೇ ಅಲೆಯನ್ನು ತಡೆಯಲು ಲಸಿಕಾ ಅಭಿಯಾನವನ್ನು ತ್ವರಿತಗೊಳಿಸಬೇಕು. ಲಸಿಕೆ ನೀಡುವುದರಿಂದ, ಸಕ್ರಿಯ ಪ್ರಕರಣಗಳು ಕಡಿಮೆಯಾಗಲಿವೆ. ಆಸ್ಪತ್ರೆಗಳಲ್ಲಿ ಐಸಿಯು, ಆಮ್ಲಜನಕ ಅಗತ್ಯವೂ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಧ್ಯಾಹ್ನ ತಡೆರಹಿತ ವೋಲ್ವೊ ಬಸ್ ವ್ಯವಸ್ಥೆ
Advertisement