ಹಾವೇರಿ: ವಿಜಯದಶಮಿಯ ಪ್ರಯುಕ್ತ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶಸ್ವಾಮೀಯ ಕಾರ್ಣೀಕೋತ್ಸವ ನಡೆಯಿತು. ದೇವರಗುಡ್ಡದ ಗ್ರಾಮದ ಹೊರವಲಯದಲ್ಲಿರುವ ಕರಿಯಾಲ ದಲ್ಲಿ 21 ಅಡಿ ಬಿಲ್ಲನ್ನೇರಿ ಗೊರವಯ್ಯ ನಾಗಪ್ಪ “ಯರಿ ದೊರೆ ಅಕ್ಕತಲೆ, ದೈವ ದರ್ಬಾರ ಅಕ್ಕತಲೆ ಪರಾಕ್.” ಅನ್ನೋ ದೈವವಾಣಿ ಗೊರವಯ್ಯ ಸ್ವಾಮಿ ನುಡಿದಿದ್ದಾರೆ.
Advertisement
ರೈತರ ಬೆಳೆಗಳು ಉತ್ತಮ ಫಸಲು ಬಂದು, ರೈತರ ಬದುಕು ಸಮೃದ್ಧ ಆಗುತ್ತದೆ. ಭೂಮಿಗೆ ಉತ್ತಮ ಬೆಲೆ ಸಿಗುತ್ತದೆ. ರೈತರು ಉತ್ತಮ ಫಸಲು ಪಡೆಯುತ್ತಾರೆ. ರೋಗ ರುಜಿನಗಳು ಬರದಂತೆ, ಕೊರೊನಾ ಮೂರನೇ ಅಲೆ ಬರದಂತೆ ಜನರ ಮೇಲೆ ದೈವ ಕೃಪೆ ಇರುತ್ತದೆ ಎಂದು ಕಾರ್ಣಿಕ ದೈವ ವಾಣಿಯನ್ನು ಮಾಲತೇಶ ದೇವರ ಪ್ರಧಾನ ಅರ್ಚಕ ಸಂತೋಷ ಭಟ್ಟ ಗುರೂಜಿ ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಮಳೆಯ ಆರ್ಭಟ- ಸೂರಿಲ್ಲದೇ ಬೀದಿಗೆ ಬಿದ್ದ ಕುಟುಂಬಗಳು
Advertisement
Advertisement
ರಾಜಕೀಯವಾಗಿ ಸಹ ವಿಶ್ಲೇಷಣೆ ಮಾಡಲಾಗಿದೆ. ಪಕ್ಷೇತರರ ಸಹಕಾರದಿಂದ ಮುಂದಿನ ರಾಜಕೀಯ ಭವಿಷ್ಯ ಇರುತ್ತದೆ. ದೇವರಿಗೆ ಪ್ರೀತಿಯಾದಂತಹ ಆಡಳಿತವನ್ನು ಮುಂದಿನ ಸರ್ಕಾರಗಳು ಕೊಡುತ್ತವೆ ಎಂದು ರಾಜಕೀಯವಾಗಿ ಸಂತೋಷ ಭಟ್ ಗುರೂಜಿ ಹೇಳಿದ್ದಾರೆ. ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಚಾಮುಂಡಿಬೆಟ್ಟದಿಂದ ಅರಮನೆಗೆ ಮೆರವಣಿಗೆಯಲ್ಲಿ ಬರಲಿದೆ ಅಂಬಾರಿ ಉತ್ಸವ ಮೂರ್ತಿ
Advertisement