ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ರಸ್ತೆ ಬದಿ ಸುರಿಯಲಾಗಿದ್ದ ಲೋಡ್ಗಟ್ಟಲೇ ಕೊತ್ತಂಬರಿ ಸೊಪ್ಪಿಗಾಗಿ ಜನ ಮುಗಿಬಿದಿದ್ದರು.
Advertisement
ಬೆಳ್ಳಂ ಬೆಳಗ್ಗೆ ದೊಡ್ಡಬಳ್ಳಾಪುರ ನೆಲಮಂಗಲ ಮಾರ್ಗದ ಕೋಡಿ ಪಾಳ್ಯ ಬಳಿ ರಸ್ತೆ ಬದಿ ಸರಿಸುಮಾರು 2-3 ಲೋಡ್ ನಷ್ಟು ಕೊತ್ತಂಬರಿ ಸೊಪ್ಪನ್ನು ಸುರಿದು ಹೋಗಿದ್ದಾರೆ. ಇದನ್ನು ಕಂಡ ದಾರಿ ಹೋಕರು ನನಗೆ ಒಂದು, ನನಗೆ ಒಂದು ಅಂತ ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನು ಹೊತ್ತೊಯ್ದಿದ್ದಾರೆ. ಆದರೆ ಇಲ್ಲಿ ಕೊತ್ತಂಬರಿ ಸೊಪ್ಪು ಸುರಿದು ಹೋದವರು ಯಾರು ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ:ಧರ್ಮಸ್ಥಳಕ್ಕೆ ಭೇಟಿಕೊಟ್ಟ BB ವಿನ್ನರ್ ಮಂಜು
Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಡಿಪಾಳ್ಯ ಬಳಿ ಸುರಿಯಲಾಗಿದ್ದ ಕೊತ್ತಂಬರಿ ಸೊಪ್ಪಿಗೆ ಮುಗಿಬಿದ್ದ ಜನರು#BengaluruRural #Doddaballapur #KannadaNews pic.twitter.com/FpfqapLjGg
— PublicTV (@publictvnews) August 24, 2021
Advertisement
ರೈತರು ಮಾರುಕಟ್ಟೆಗೆ ತಂದು ರೇಟ್ ಇಲ್ಲ ಅಂತ ಸುರಿದು ಹೋಗಿರಬಹುದು ಎನ್ನಲಾಗಿದೆ. ಆದರೆ ರಸ್ತೆ ಬದಿ ಸುರಿದು ಹೋಗುವುದಕ್ಕಿಂತ ಕಡಿಮೆ ರೇಟ್‍ಗಾದರೂ ಜನರಿಗೆ ಮಾರಾಟ ಮಾಡಿ 4 ಕಾಸು ಸಂಪಾದಿಬಹುದಾಗಿತ್ತಲ್ವಾ ಎನ್ನುವುದು ಕೆಲವರ ಪ್ರಶ್ನೆಯಾಗಿದೆ. ಬೆಳ್ಳಂಬೆಳಗ್ಗೆ ಕೊತ್ತಂಬರಿ ಸೊಪ್ಪು ಸಿಕ್ಕಿದ್ದೇ ಜನ ಹೊತ್ತೊಯ್ದಿದ್ದಾರೆ. ಇನ್ನೂ ಕೊತ್ತಂಬರಿ ಸಹ ಉತ್ತಮ ಗುಣಮಟ್ಟದಿಂದಲೇ ಕೂಡಿದೆ. ಇದನ್ನೂ ಓದಿ:ಕೊತ್ತಂಬರಿ ಸೊಪ್ಪು ಖರೀದಿಸದ್ದಕ್ಕೆ ಚಾಕು ಇರಿದ ವ್ಯಾಪಾರಿ
Advertisement