ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟವರು ಕಾರ್ಬೆವ್ಯಾಕ್ಸ್ ಅನ್ನು ಬೂಸ್ಟರ್‌ಡೋಸ್ ಆಗಿ ಬಳಸಬಹುದು ಎಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ತಿಳಿಸಿದೆ.
ಏಪ್ರಿಲ್ ಅಂತ್ಯದ ವೇಳೆ ಕಾರ್ಬೆವ್ಯಾಕ್ಸ್ ಅನ್ನು 5 ರಿಂದ 15 ವರ್ಷದೊಳಗಿನ ಮಕ್ಕಳಿಗೆ ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಕ ಅಧಿಕಾರ ನೀಡಿತ್ತು. ಬಳಿಕ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿತ್ತು. ಇದನ್ನೂ ಓದಿ: ಐವರು ಟಾಪ್ ನಾಯಕರು ಕಾಂಗ್ರೆಸ್‌ಗೆ ಗುಡ್‌ಬೈ – ಕಮಲಕ್ಕೆ ಹಾಯ್
Advertisement
Advertisement
ಭಾರತೀಯ ಜೈವಿಕ ತಂತ್ರಜ್ಞಾನ ಹಾಗೂ ಜೈವಿಕ ಔಷಧಿ ಕಂಪನಿ ಬಯೋಲಾಜಿಕಲ್ ಇ ತಯಾರಿಸಿರುವ ಲಸಿಕೆಯ ಬೆಲೆಯನ್ನು ಮೇ ತಿಂಗಳಿನಲ್ಲಿ ಇಳಿಸಿತ್ತು. ಖಾಸಗಿ ಲಸಿಕಾ ಕೇಂದ್ರಗಳಿಗೆ ಸರಕು ಹಾಗೂ ಸೇವಾ ತೆರಿಗೆಯನ್ನು ಒಳಗೊಂಡಂತೆ ಕಾರ್ಬೆವ್ಯಾಕ್ಸ್‌ನ ಬೆಲೆ 840 ರಿಂದ 250 ರೂ.ಗೆ ಇಳಿಸಲಾಗಿತ್ತು. ಇದನ್ನೂ ಓದಿ: ಕೋವಿಡ್ ಪ್ರಕರಣ ಹೆಚ್ಚಳ – ಕರ್ನಾಟಕ ಸೇರಿದಂತೆ 5 ರಾಜ್ಯಗಳಿಗೆ ಕೇಂದ್ರದಿಂದ ಪತ್ರ
Advertisement
ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ಪ್ರಾರಂಭವಾದಾಗ, ಕಾರ್ಬೆವಾಕ್ಸ್ ಲಸಿಕೆಯನ್ನು ಬಳಸಲಾಯಿತು. ಮತ್ತು ಸರ್ಕಾರದ ಲಸಿಕಾ ಕಾರ್ಯಕ್ರಮಕ್ಕಾಗಿ ಅದರ ಬೆಲೆಯನ್ನು 145 ರೂ.ಗೆ ನಿಗದಿಪಡಿಸಿತು.