ಚಿಕ್ಕಮಗಳೂರು: ಉರಗಗಳ ಸಂತತಿಯಲ್ಲೇ ಅಪರೂಪದ ಮೋಸ್ಟ್ ಡೆಂಜರ್ ಕೋರಲ್ ಸ್ನೇಕ್ (Coral Snake) ಕಳಸದ (Kalasa) ಕಲ್ಮಕ್ಕಿ ಗ್ರಾಮದಲ್ಲಿ ಪತ್ತೆಯಾಗಿದೆ.
ದೇಹದ ಮೇಲೆ ಕಪ್ಪು, ಕೆಳಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿರುವ ಈ ಹಾವನ್ನು, ಮಲೆನಾಡಲ್ಲಿ ರಕ್ತಕನ್ನಡಿ ಹಾವು, ಹಪ್ಪಟೆ, ಹವಳದ ಹಾವು ಎಂದು ಕರೆಯುತ್ತಾರೆ. ಕಳಸದ ಉರಗತಜ್ಞ ರಿಜ್ವಾನ್ ಎಂಬವರ ಮನೆ ಅಂಗಳದಲ್ಲಿ ಈ ಹಾವು ಕಾಣಿಸಿಕೊಂಡಿದೆ.
Advertisement
Advertisement
ಈ ಹಾವು ಕಡಿದರೆ ಸಾಯೋದು ಕಡಿಮೆ, ಆದರೆ ದೇಹಕ್ಕೆ ನಾನಾ ಸಮಸ್ಯೆಗಳನ್ನು ತಂದು ಒಡ್ಡುತ್ತದೆ. ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹ ಸೇರುವು ಕಡಿಮೆ. ವಿಷ ದೇಹ ಸೇರಿದರೆ ಹಲವಾರು ಸಮಸ್ಯೆಗಳು ಎದುರಾಗಲಿವೆ ಎಂದು ಉರಗ ತಜ್ಞ ರಿಜ್ವಾನ್ ತಿಳಿಸಿದ್ದಾರೆ.
Advertisement
Advertisement
ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಾತ್ರ ಈ ಅಪರೂಪದ ಹಾವುಗಳು ಕಾಣಸಿಗುತ್ತವೆ. ಇವು ನಿಶಾಚಾರಿಯಾಗಿದ್ದು, ರಾತ್ರಿ ವೇಳೆ ಹೆಚ್ಚಾಗಿ ಚಟುವಟಿಕೆಯಿಂದ ಇರುತ್ತವೆ. ಪತ್ತೆಯಾದ ಹಾವನ್ನು ರಿಜ್ವಾನ್ ರಕ್ಷಿಸಿದ್ದಾರೆ.