LatestNational

ಸಂವಿಧಾನ ಪ್ರತಿ ಹರಿಯಲು ಯತ್ನಿಸಿದ ಪಿಡಿಪಿ ಸಂಸದ – ಸಂಸತ್‍ನಿಂದ ಹೊರ ಹಾಕಿದ ಮಾರ್ಷಲ್ಸ್

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನವನ್ನು ಕಲ್ಪಿಸುವ 370ನೇ ವಿಧಿಯನ್ನು ರದ್ದು ಮಾಡುತ್ತಿರುವುದಾಗಿ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ ಸಂದರ್ಭದಲ್ಲಿ ಕೆಲ ವಿರೋಧಿ ಪಕ್ಷದ ನಾಯಕರು ಗದ್ದಲವನ್ನು ಸೃಷ್ಟಿ ಮಾಡಿದ್ದರು. ಪರಿಣಾಮ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು.

ಈ ಸಂದರ್ಭದಲ್ಲಿ ಅಮಿತ್ ಶಾ ಅವರು ಜಮ್ಮು ಕಾಶ್ಮೀರದ ವಿಚಾರದ ಸಂಬಂಧಿಸಿದ ಅಂಶಗಳ ಪ್ರಸ್ತಾವನೆಯನ್ನು ಓದುವುದನ್ನು ಮುಂದುವರಿಸಿದ್ದರು. ಈ ವೇಳೆ ಜಮ್ಮು ಕಾಶ್ಮೀರದ ಪಿಡಿಪಿ ಪಕ್ಷದ ಸಜಿರ್ ಸಂಸತ್ ಸದಸ್ಯರದ ಎಂಎಂ ಫಯಾಜ್ ಅವರು ಭಾರೀ ಪ್ರಮಾಣದಲ್ಲಿ ಸದನದಲ್ಲಿ ಗದ್ದಲ ಸೃಷ್ಟಿ ಮಾಡಲು ಯತ್ನಿಸಿದ್ದರು. ಆ ಮೂಲಕ ಅಮಿತ್ ಶಾ ಮಾತಿಗೆ ಅಡ್ಡಿ ಪಡಿಸುವ ಪ್ರಯತ್ನವನ್ನು ನಡೆಸಿದರು. ಒಂದು ಹಂತ ಮುಂದೇ ಹೋಗಿ ಸಂವಿಧಾನದ ಪತ್ರಿಯನ್ನು ಹರಿಯಲು ಯತ್ನಿಸಿದ್ದರು. ಇದರಿಂದ ಅಸಮಾಧಾನಗೊಂಡ ಸ್ಪೀಕರ್, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು, ಸಂಸದರನ್ನು ಸದನದಿಂದ ಹೊರ ಹೋಗಲು ಸೂಚಿಸಿದರು.

ಸ್ಪೀಕರ್ ಸೂಚನೆಯಂತೆ ಮಾರ್ಷಲ್‍ಗಳು ಸದನ ಸದಸ್ಯರನ್ನು ಹೊರ ಹಾಕುವ ಪ್ರಯತ್ನದಲ್ಲಿ ಅವರು ಧರಿಸಿದ್ದ ಅಂಗಿ ಪೂರ್ತಿಯಾಗಿ ಹರಿದುಹೋಗಿತ್ತು. ಸದನದಿಂದ ಹೊರ ಬಂದ ಸದಸ್ಯರು ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರ ನಿರ್ಧಾರದ ಮೇಲೆ ಕಾಂಗ್ರೆಸ್, ಸೇರಿದಂತೆ ಕೆಲ ವಿಪಕ್ಷಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದವು. ಜಮ್ಮು ಕಾಶ್ಮೀರಕ್ಕೆ ಪ್ರತೇಕ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ನ್ನು ರದ್ದು ಮಾಡಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧಾರದ ವಿರುದ್ಧ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವದಲ್ಲಿ ಇದು ಅತ್ಯಂತ ಕರಾಳ ದಿನ ಎಂದು ಆರೋಪ ಮಾಡಿದ್ದಾರೆ.

Leave a Reply

Your email address will not be published. Required fields are marked *

Back to top button