– ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲೂ ಬಿಗಿ ಭದ್ರತೆ
ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನಿನ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿ ಹರಿಯಾಣ ಗಡಿ ಶಂಭು ಗಡಿಯಲ್ಲಿ (Shambhu Border) ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಗಡಿಯಲ್ಲಿ ಭಾನುವಾರ (ಇಂದು) ದೆಹಲಿ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಾ ನಿರತ ರೈತರ (Farmers) ಮೇಲೆ ಪೊಲೀಸರು ಅಶ್ರುವಾಯು ದಾಳಿ ನಡೆಸಿದರು. ಶುಕ್ರವಾರ ದೆಹಲಿ ಗಡಿ ಪ್ರವೇಶಕ್ಕೆ ತಡೆ ಬಿದ್ದ ಹಿನ್ನಲೆ ಸರ್ಕಾರದ ಜೊತೆಗಿನ ಮಾತುಕತೆಗೆ ರೈತ ಮುಖಂಡರು ಒಂದು ದಿನದ ಸಮಯ ನೀಡಿದ್ದರು. ಪ್ರಧಾನಿ ಮೋದಿ (PM Modi) ಸರ್ಕಾರದಿಂದ ಮಾತುಕತೆಗೆ ಯಾವುದೇ ಆಹ್ವಾನ ಬಾರದ ಹಿನ್ನಲೆ ರೈತರು ಇಂದು ಮತ್ತೆ ದೆಹಲಿ ಗಡಿ ಪ್ರವೇಶಕ್ಕೆ ಯತ್ನಿಸಿದರು. ಆದರೆ ಹರಿಯಾಣ ಪೊಲೀಸರು (Haryana Police) ರೈತರನ್ನು ತಡೆದರು, ಇದೇ ಕಾರಣಕ್ಕೆ ವಾಗ್ವಾದವೂ ಏರ್ಪಟ್ಟಿತು. ಇದನ್ನೂ ಓದಿ: ದೇಶ ತೊರೆಯುತ್ತಿದ್ದ ಸಿರಿಯಾ ಅಧ್ಯಕ್ಷನಿದ್ದ ವಿಮಾನ ಕಣ್ಮರೆ – ಕ್ಷಿಪಣಿ ದಾಳಿಗೆ ಪತನ?
ದೆಹಲಿ ಪ್ರವೇಶಕ್ಕೆ ಪೊಲೀಸರು ಗುರುತಿನ ಚೀಟಿ ಕೇಳುತ್ತಿದ್ದಾರೆ. ಆದರೆ ದೆಹಲಿಗೆ ಹೋಗಲು ಅವಕಾಶ ನೀಡುತ್ತೇವೆ ಎಂಬ ಗ್ಯಾರಂಟಿ ನೀಡುತ್ತಿಲ್ಲ, ದೆಹಲಿಗೆ ಹೋಗಲು ಅನುಮತಿ ಇಲ್ಲ ಎನ್ನುತ್ತಾರೆ, ಹಾಗಾದರೆ ಗುರುತಿನ ಚೀಟಿ ಏಕೆ ಕೊಡಬೇಕು? ಪ್ರವೇಶಕ್ಕೆ ಅನುಮತಿ ಕೊಡುವುದಾದರೆ ಗುರುತಿನ ಚೀಟಿ ನೀಡುತ್ತೇವೆ ಎಂದು ಪ್ರತಿಭಟನಾನಿರತ ರೈತರೊಬ್ಬರು ಹೇಳಿದರು. ರೈತರು ಗುಂಪು ಗುಂಪಾಗಿ ಚಲಿಸುತ್ತಿದ್ದಾರೆಯೇ ಹೊರತು 101 ರೈತರ ಯೋಜಿತ ಗುಂಪಿನಂತೆ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಗುರುತಿನ ಪರಿಶೀಲನೆಯ ನಂತರವೇ ರೈತರಿಗೆ ಮುಂದುವರಿಯಲು ಅವಕಾಶ ನೀಡಲಾಗುವುದು ಎಂದು ಹಿ ರಿಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಇದನ್ನು ನಿರಾಕರಿಸಿದ ರೈತರು, ಪೊಲೀಸರಿಗೆ ಯಾವುದೇ ಪಟ್ಟಿ ನೀಡಿಲ್ಲ ಎಂದು ಹೇಳಿದರು. ದೆಹಲಿಯತ್ತ ಸಾಗಲು ರೈತರ ಹೊಸ ಪ್ರಯತ್ನ ಮಾಡುವ ದೃಷ್ಟಿಯಿಂದ, ಪಂಜಾಬ್-ಹರಿಯಾಣ ಗಡಿಯಲ್ಲಿ (Haryana Punjab Border) ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ಕೇಸ್ – ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಖುಲಾಸೆ
ರೈತರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ತಡೆಯುವ ಸೆಕ್ಷನ್ 163 (ಹಿಂದೆ ಸೆಕ್ಷನ್ 144) ಅಡಿಯಲ್ಲಿ ನಿಷೇಧಾಜ್ಞೆಗಳು ಸಹ ಗಡಿಯಲ್ಲಿ ಜಾರಿಯಲ್ಲಿವೆ. ಶಂಭು ಹೊರತುಪಡಿಸಿ, ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯನ್ನು ಬಿಗಿಯಾದ ನಾಲ್ಕು ಪದರಗಳ ಭದ್ರತೆಯಲ್ಲಿ ಮುಚ್ಚಲಾಗಿದೆ, 13 ತುಕಡಿಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕೆನಡಾ| ಸೆಕ್ಯೂರಿಟಿಯಾಗಿ ಕೆಲಸ ಮಾಡ್ತಿದ್ದ ಭಾರತೀಯ ವಿದ್ಯಾರ್ಥಿಯನ್ನ ಗುಂಡಿಕ್ಕಿ ಹತ್ಯೆ – ಇಬ್ಬರು ಶಂಕಿತರ ಬಂಧನ