ಗಾಯಗೊಂಡಿದ್ದ ನಕ್ಸಲ್ ಕಮಾಂಡರ್‌ನನ್ನು 12 ಕಿ.ಮೀ ಹೊತ್ತು ಆಸ್ಪತ್ರೆ ದಾಖಲಿಸಿದ ಪೊಲೀಸ್ರು

Public TV
1 Min Read
naxal final

ರಾಯ್ಪುರ್: ಗಾಯಗೊಂಡಿದ್ದ ನಕ್ಸಲ್ ಕಮಾಂಡರ್ ನನ್ನು ಪೊಲೀಸರ ತಂಡವೊಂದು 12 ಕಿ.ಮೀ ಹೊತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಘಟನೆ ಛತ್ತೀಸ್‍ಗಢದ ದಾಂತೇವಾಡದಲ್ಲಿ ನಡೆದಿದೆ.

ಮಡ್ಕಮ್ ಹಿಡ್ಮಾ ಗಾಯಗೊಂಡಿರುವ ಕಮಾಂಡರ್. ಈತ ಮಲಂಗಿರ್ ಪ್ರದೇಶದ ಸಮಿತಿಯ ಸದಸ್ಯನಾಗಿದ್ದು, ಈತನ ತಲೆಗೆ ಸರ್ಕಾರ 5 ಲಕ್ಷ ಘೋಷಣೆ ಮಾಡಲಾಗಿತ್ತು. ಈತ 12 ದಿನಗಳ ಹಿಂದೆ ಜಿಲ್ಲಾ ಮೀಸಲು ಪಡೆಯ ಗುಂಪು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಆಳವಾದ ಹೊಂಡಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ಅಲ್ಲದೆ ಈತನ ಜೊತೆಗಿದ್ದ ಇತರರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

maoist final

ಆಳವಾದ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದ ಮಾವೋವಾದಿ ಹೇಗೋ ಅದರಿಂದ ಮೇಲಕ್ಕೆ ಬಂದು ಪಕ್ಕದ ಗ್ರಾಮದ ಮನೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದನು. ಈ ವಿಚಾರ ಪೊಲೀಸ್ ತಂಡಕ್ಕೆ ಮಾಹಿತಿ ಲಭಿಸಿದ್ದು, ಕೂಡಲೇ ಸುಕ್ಮಾ ಜಿಲ್ಲೆಯ ನಗಲ್ ಗುಂಡಕ್ಕೆ ದೌಡಾಯಿಸಿ ಆತನನ್ನು ವಿಚಾರಿಸಿದ್ದಾರೆ. ನಂತರ ತಾತ್ಕಾಲಿಕ ಮಂಚ ತಯಾರಿಸಿ ಅದರಲ್ಲಿ ಆತನನ್ನು ಕುಳ್ಳಿರಿಸಿಕೊಂಡು ಸುಮಾರು 12 ಕಿ.ಮೀ ಹೊತ್ತು ಕಾಡಿನ ಮಖಾಂತರ ತಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದಾಂತೇವಾಡ ಪೊಲೀಸ್ ಅಧೀಕ್ಷಕ ಅಭಿಷೇಕ್ ಪಲ್ಲಾವ್ ವಿವರಿಸಿದ್ದಾರೆ.

ಮಡ್ಕಮ್ ಕಳೆದ 2008ರಿಂದ ಮಲಂಗೀರ್ ಪ್ರದೇಶದಲ್ಲಿ ಸಕ್ರಿಯವಾಗಿದ್ದನು. ಅಲ್ಲದೆ ಐಇಡಿ ಸ್ಫೋಟಕಗಳನ್ನು ಬಳಸುವಲ್ಲಿ ನಿಪುಣನಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *