ಲಂಡನ್: ಮುಂಭಾಗದಲ್ಲಿ ಒಂದು ಚಕ್ರವೇ ಇಲ್ಲದ ಕಾರ್ ಓಡಿಸುತ್ತಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಇಂಗ್ಲೆಂಡಿನ ಲಂಕಾಶೈರ್‍ನಲ್ಲಿ ನಡೆದಿದೆ.
ಮಾರ್ಚ್ 18ರಂದು ಇಲ್ಲಿನ ನಾರ್ತ್ ಪ್ರೆಸ್ಟನ್ ಹಾಗು ಬ್ಲಾಕ್‍ಪೂಲ್ ನಡುವೆ ಇರುವ ಎಮ್55 ಹೆದ್ದಾರಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಈ ಕಾರನ್ನ ತಡೆದಿದ್ದರು. ಕಾರ್‍ಗೆ ಮುಂಭಾಗದಲ್ಲಿ ಒಂದು ಚಕ್ರ ಇಲ್ಲದೆ ರಸ್ತೆ ಮೇಲೆ ವಾಲಿಕೊಂಡು ಹೋಗುತ್ತಿದ್ದುದನ್ನ ಅಧಿಕಾರಿಗಳು ನೋಡಿದ್ದರು. ಈ ಬಗ್ಗೆ ಇತರೆ ಚಾಲಕರಿಂದ ಪೊಲೀಸರಿಗೆ ಸಾಕಷ್ಟು ದೂರುಗಳು ಸಹ ಬಂದಿದ್ದವು ಎಂದು ವರದಿಯಾಗಿದೆ.
Advertisement
ಲಂಕಶೈರ್ ರಸ್ತೆ ಪೊಲೀಸರು ಟ್ವಿಟ್ಟರ್ ನಲ್ಲಿ ಕಾರಿನ ಫೋಟೋಗಳನ್ನ ಹಾಕಿದ್ದು, ಚಾಲಕನಿಗೆ ಸಮಸ್ಯೆ ಏನು ಅನ್ನೋದೇ ಗೊತ್ತಿರಲಿಲ್ಲ. ಹಲವಾರು ಉಲ್ಲಂಘನೆಗಳ ಆರೋಪದ ಮೇಲೆ ಈಗ ಚಾಲಕ ಕೋರ್ಟ್ ನಲ್ಲಿದ್ದಾನೆ ಎಂದು ಹೇಳಿದ್ದಾರೆ.
Advertisement
ಇಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ ಚಾಲಕ ಈ ಹಿಂದೆಯೂ ಟೈರ್ ಸಮಸ್ಯೆ ಎದುರಿಸಿದ್ದ. ಕಾರಿನ ಎಡಬದಿಯಲ್ಲಿರುವುದು ಟೆಂಪೊರರಿ ಟೈಂ ಸೇವರ್. ಇಂತಹ ಟೈರ್‍ಗಳನ್ನ ತಾತ್ಕಾಲಿಕವಾಗಿ ಮಾತ್ರ ಬಳಸಬಹುದು. ಗಂಟೆಗೆ 50 ಮೈಲಿಗೂ ಹೆಚ್ಚಿನ ವೇಗಕ್ಕೆ ಬಳಸುವಂತಿಲ್ಲ.
Advertisement
ಕಾರನ್ನ ಈ ಹಿಂದೆಯೂ ನೋಡಿದ್ದೆವು. ಚಾಲಕ ಸಿಕ್ಕಿಬಿದ್ದ ನಂತರ ಸಾಕ್ಷಿಗಾಗಿ ಫೋಟೋಗಳನ್ನ ತೆಗೆದೆವು ಎಂದು ಕಾರಿನ ಚಿತ್ರಗಳನ್ನ ತೆಗೆದ ಟಾಮ್ ಡೇವಿಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
Advertisement
This vehicle was stopped by our TacOps colleagues #HU24 on the M55 after a report from concerned members of the public. The driver was unaware what the problem was ???? They are now aware a day in court is coming for numerous offences ???? #T3TacOps @NWmwaypolice pic.twitter.com/ySpvr1Spzz
— Lancs Road Police (@LancsRoadPolice) March 18, 2018