ತುಮಕೂರು: ಪೊಲೀಸ್ ಮುಖ್ಯಪೇದೆಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಘಟನೆ ತೂಮಕೂರಿನಲ್ಲಿ ನಡೆದಿದೆ.
ನಗರದ ಜಯನಗರ ಠಾಣೆಯ ಮುಖ್ಯ ಪೇದೆ ಮೋಹನ್ ಅತ್ಯಾಚಾರ ನಡೆಸಿದ ಆರೋಪಿ. ಈ ಸಂಬಂಧ ಪೋಕ್ಸೋ ಅಡಿ ಕೇಸ್ ದಾಖಲಾಗಿದೆ. ಮುಖ್ಯ ಪೇದೆಯನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಎಸ್‍ಪಿ ದಿವ್ಯಾ ಗೋಪಿನಾಥ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಖಚಿತಪಡಿಸಿದ್ದಾರೆ.
ವ್ಯಕ್ತಿಯೊಬ್ಬರ ಮನೆಗೆ ಊಟ ಮಾಡಲು ಹೋದ ಪೇದೆ ಮೋಹನ್ ಆತನ ಪತ್ನಿಯೊಂದಿಗೆ ಸಂಬಂಧ ಬೆಳೆಸಿದ್ದ. ಕಳೆದ 6 ವರ್ಷಗಳಿಂದ ಈ ಅನೈತಿಕ ಸಂಬಂಧ ನಡೆದುಕೊಂಡು ಬಂದಿದೆ. ಇವರ ಅನೈತಿಕ ಸಂಬಂಧ ಗೊತ್ತಾಗಿ ಆ ವ್ಯಕ್ತಿ ಪತ್ನಿಯನ್ನು ಬಿಟ್ಟು ದೂರ ಉಳಿದಿದ್ರು.
ಮಹಿಳೆಗೆ 15 ವರ್ಷದ ಮಗಳು ಕೂಡಾ ಇದ್ದು, ಪೇದೆ ಮೋಹನ್ ಆಕೆಯ ಮೇಲೂ ಕೂಡ ಅತ್ಯಾಚಾರ ನಡೆಸಿದ್ದಾನೆ. ಇದು ತಾಯಿಗೆ ಗೊತ್ತಾದಾಗ ಮನೆಗೆ ಬರದಂತೆ ಮೋಹನ್‍ಗೆ ತಾಕೀತು ಮಾಡಿದ್ದರು. ಆಗ ಇಬ್ಬರ ನಡುವೆ ಜಗಳ ನಡೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.