ನವದೆಹಲಿ: ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ಪ್ರಸ್ತಾಪಿಸಿದ್ದ ಲೈಂಗಿಕ ಕಿರುಕುಳ ಸಂತ್ರಸ್ತರ ಬಗ್ಗೆ ಮಾಹಿತಿ ಕೋರಿ ಕಾಂಗ್ರೆಸ್ (Congress) ಸಂಸದ ರಾಹುಲ್ ಗಾಂಧಿ (Rahul Gandhi) ನೋಟಿಸ್ ನೀಡಲು ಹೋದಾಗ ದೆಹಲಿ ಪೊಲೀಸರು 3 ಗಂಟೆಗಳ ಕಾಲ ಕಾದ ಘಟನೆ ನಡೆದಿದೆ.
ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ (Bharat Jodo Yatra) ವೇಳೆ ಲೈಂಗಿಕ ಕಿರುಕುಳದ ಸಂತ್ರಸ್ತರ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು (Delhi Police), ನಿಮ್ಮನ್ನು ಸಂಪರ್ಕಿಸಿದ ಸಂತ್ರಸ್ತರ ಬಗ್ಗೆ ಮಾಹಿತಿ ನೀಡಿ, ನಾವು ಅವರಿಗೆ ಭದ್ರತೆಯನ್ನು ನೀಡುತ್ತೇವೆ ಎನ್ನುವ ನೋಟಿಸ್ ನೀಡಲು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. 3 ಗಂಟೆಗಳ ಕಾಲ ಕಾಯುತ್ತಿದ್ದರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿದೆ.
Advertisement
Advertisement
ಇದಾದ ಬಳಿಕ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ನೋಟಿಸ್ ನೀಡಿದ್ದರು. ಆ ವೇಳೆಯೂ ಒಂದೂವರೆ ಗಂಟೆಗಳ ನಂತರ ಸ್ವತಃ ರಾಹುಲ್ ಗಾಂಧಿ ಅವರೇ ನೋಟಿಸ್ ಅನ್ನು ಪಡೆದರು.
Advertisement
ಘಟನೆಯೇನು?: ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಹುಡುಗಿಯೊಬ್ಬಳು ಬಂದು ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಳು. ಈ ವೇಳೆ ಪೊಲೀಸರಿಗೆ ಕರೆ ಮಾಡಲೇ ಎಂದು ಕೇಳಿದ್ದಕ್ಕೆ, ಪೊಲೀಸರಿಗೆ ಕರೆ ಮಾಡಬೇಡಿ, ಆಗ ನನಗೆ ಅವಮಾನವಾಗುತ್ತದೆ ಎಂದು ಹೇಳಿದ್ದಳು ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಹಿತಿ ಕೋರಿ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಉರಿಗೌಡ, ನಂಜೇಗೌಡ ಟಿಪ್ಪುವನ್ನ ಕೊಂದಿರೋದು ಸತ್ಯ – ಸಿ.ಟಿ ರವಿ
Advertisement
ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದೆ. ಅದಾನಿ – ಹಿಂಡೆನ್ ಬರ್ಗ್ ಕುರಿತು ರಾಹುಲ್ ಗಾಂಧಿ ಅವರು ಕೇಳುವ ಪ್ರಶ್ನೆಯಿಂದ ಸರ್ಕಾರ ತಲ್ಲಣಗೊಂಡಿದೆ. ಅದಕ್ಕಾಗಿ ಭಾರತ್ ಜೋಡೋ ಯಾತ್ರೆ ಮುಗಿದ 45 ದಿನಗಳ ನಂತರ ದೆಹಲಿ ಪೊಲೀಸರು ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ಹಿಂಸಾಚಾರದ ಬಗ್ಗೆ ಮಾತನಾಡಿ, ಮಹಿಳೆಯ ವಿವರವನ್ನು ಕೇಳಿದ್ದಾರೆ ಎಂದು ಕಿಡಿಕಾರಿದ್ದಾರೆ. ನೋಟಿಸ್‍ಗೆ ಕಾನೂನು ಪ್ರಕಾರ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ. ಇದನ್ನೂ ಓದಿ: ನಾನು ಪೂಜಾರಿ ಅಷ್ಟೇ, ಜನ ಹೇಳಿದ್ದು ದೇವರಿಗೆ ತಲುಪಿಸುತ್ತೇನೆ: ಡಿಕೆಶಿ