ಲಕ್ನೋ: ಹೆಲ್ಮೆಟ್ ಧರಿಸಿಲ್ಲ ಎಂದು ಪೊಲೀಸ್ ಅಧಿಕಾರಿ ದಂಡ ವಿಧಿಸಿದ್ದಕ್ಕೆ ಉತ್ತರಪ್ರದೇಶದ ಫಿರೋಜಾಬಾದ್‍ನ ವಿದ್ಯುತ್ ಇಲಾಖೆಯ ಸಿಬ್ಬಂದಿ ಒಬ್ಬರು ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ವಿದ್ಯುತ್ ಇಲಾಖೆಯ ಸಿಬ್ಬಂದಿಯಾದ ಶ್ರೀನಿವಾಸ್ ಮಂಗಳವಾರ ಸಂಜೆ ಹೆಲ್ಮೆಟ್ ಧರಿಸದೇ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಪೊಲೀಸ್ ಅಧಿಕಾರಿ ಆತನನ್ನು ತಡೆದು 500 ರೂ. ದಂಡ ಹಾಕಿದ್ದಾರೆ. ದಂಡ ಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಪೊಲೀಸರು 6 ಲಕ್ಷ ರೂ.ವರೆಗೂ ಬಿಲ್ ಕಟ್ಟಲಿಲ್ಲ ಎಂದು ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ್ದಾರೆ.
Advertisement
Advertisement
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ್, ಈ ಪೊಲೀಸ್ ಠಾಣೆ 6 ಲಕ್ಷ ರೂ.ವರೆಗೂ ಬಿಲ್ ಪಾವತಿ ಮಾಡಿಲ್ಲ. ಆದರೆ ಪೊಲೀಸರು ಟ್ರಾಫಿಕ್ ನಿಯಮ ಕಲಿಸಿಕೊಡಲು ಪ್ರಯತ್ನಿಸುತ್ತಾರೆ. ಅವರು ಸಹ ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು. ಮಂಗಳವಾರ ನಾನು ಸ್ಥಳೀಯ ಏರಿಯಾದಲ್ಲಿ ಕೆಲಸವಿದ್ದ ಕಾರಣ ಹೆಲ್ಮೆಟ್ ಧರಿಸಿರಲಿಲ್ಲ. ನಾನು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ನನ್ನ ಮಾತು ಕೇಳಲಿಲ್ಲ. ಹಾಗಾಗಿ ನಾನು ಈ ರೀತಿ ಮಾಡುವ ಮೂಲಕ ಪೊಲೀಸರಿಗೆ ಬುದ್ದಿ ಕಲಿಸಿದ್ದೇನೆ ಎಂದು ಹೇಳಿ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
Advertisement
ಬಿಲ್ ಬಗ್ಗೆ ಪೊಲೀಸ್ ಠಾಣೆಗೆ ಹಲವು ಬಾರಿ ನೆನಪಿಸಿದ್ದೆವು. ಅಲ್ಲದೆ ವಿದ್ಯುತ್ ಬಾಕಿ ಹಣವನ್ನು ಪಾವತಿಸಿ ಎಂದು ಹಲವು ಬಾರಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲದೆ ಹಲವು ತಿಂಗಳಿನಿಂದ ವಿದ್ಯುತ್ ಇಲಾಖೆಯ ಸಿಬ್ಬಂದಿಗೆ ಸಂಬಳ ಕೂಡ ಸಿಗುತ್ತಿಲ್ಲ ಎಂದು ದಕ್ಷಿಣಾಂಚಲ್ ವಿದ್ಯುತ್ ವಿತ್ರಾನ್ ನಿಗಮ ಲಿಮಿಟೆಡ್(ಡಿವಿವಿಎನ್‍ಎಲ್) ಉಪವಿಭಾಗೀಯ ಅಧಿಕಾರಿ ಹೇಳಿದ್ದಾರೆ.
ಲೈನ್‍ಪಾರ್ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ಶ್ರೀನಿವಾಸ್ ಅವರನ್ನು ಪ್ರಶ್ನಿಸಿದ್ದರು. ಪೊಲೀಸರ ಪ್ರಶ್ನೆಗೆ ಶ್ರೀನಿವಾಸ್ ಮಾತ್ರವಲ್ಲದೆ ವಿದ್ಯುತ್ ಇಲಾಖೆಯ ಇತರ ಅಧಿಕಾರಿಗಳು ಕೂಡ ಕೋಪಗೊಂಡಿದ್ದಾರೆ. ಅಲ್ಲದೆ ಶ್ರೀನಿವಾಸ್ ಮೇಲಾಧಿಕಾರಿಯನ್ನು ಸಂಪರ್ಕಿಸದೇ ವಿದ್ಯುತ್ ಕಡಿತಗೊಳಿಸಿದ್ದಾರೆ ಎಂದು ಉಪವಿಭಾಗೀಯ ಅಧಿಕಾರಿ ತಿಳಿಸಿದ್ದಾರೆ.