ಚೆನ್ನೈ: ಸಾಮಾನ್ಯವಾಗಿ ಪೊಲೀಸರು ಬೈಕ್ ನಿಲ್ಲಿಸಿ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಾರೆ. ಆದರೆ ತಮಿಳುನಾಡಿನ ಪೊಲೀಸರು ಸ್ಪೋರ್ಟ್ಸ್ ಬೈಕ್‍ವೊಂದನ್ನು ನಿಲ್ಲಿಸಿ, ಅದರ ಮೇಲೆ ಕುಳಿತುಕೊಂಡು ವಿವಿಧ ರೀತಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಮುಂಬೈ ಮೂಲದ ಬೈಕರ್ ಮತ್ತು ಯೂಟ್ಯೂಬರ್ ತನ್ನ ಸ್ನೇಹಿತನೊಂದಿಗೆ ಊಟಿಯಿಂದ ಕೊಯಮತ್ತೂರಿನ ಆದಿಯೋಗಿ ಪ್ರತಿಮೆಯತ್ತ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಮಾರ್ಗ ಮಧ್ಯೆ ತಮಿಳುನಾಡು ಪೊಲೀಸರು ಬೈಕ್ ತಡೆದು ನಿಲ್ಲಿಸಿದ್ದಾರೆ.
Advertisement
Advertisement
ಮೊದಲಿಗೆ ಪೊಲೀಸ್ ಅಧಿಕಾರಿಗಳು ಸವಾರನ ಬಳಿ ಬೈಕ್ ದಾಖಲೆಗಳನ್ನು ಕೇಳಿದ್ದಾರೆ. ಬಳಿಕ ಬೈಕ್ ದಾಖಲಾತಿಯನ್ನು ಪರಿಶೀಲಿಸುತ್ತಿದ್ದಾಗ ಪೊಲೀಸರು ಆ ಬೈಕ್ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಆಗ ಸವಾರ, ತನ್ನ ಬೈಕ್ ಹೊಸದು. ಬಿಎಂಡಬ್ಲ್ಯು ಬೈಕ್ ಇದಾಗಿದ್ದು, ಇದರ ಬೆಲೆ 30 ಲಕ್ಷ ರೂ. ಎಂದು ಪೊಲೀಸರಿಗೆ ತಿಳಿಸಿದ್ದಾನೆ.
Advertisement
ಡಾಕ್ಯುಮೆಂಟ್ ಪರಿಶೀಲನೆ ಮುಗಿದ ನಂತರ, ಪೊಲೀಸರೊಬ್ಬರು ಬೈಕ್ ಜೊತೆಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬಹುದೇ ಎಂದು ಕೇಳಿದ್ದಾರೆ. ಇದಕ್ಕೆ ಸವಾರ ಒಪ್ಪಿಗೆ ಸೂಚಿಸಿ, ಬೈಕ್ ಮೇಲೆ ಹೇಗೆ ಕುಳಿತುಕೊಳ್ಳುವುದು ಎಂದು ಕೂಡ ಹೇಳಿಕೊಟ್ಟಿದ್ದಾನೆ. ನಂತರ ಪೊಲೀಸರು ಬೈಕ್ ಮೇಲೆ ಕುಳಿತುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ನಂತರ ಬೈಕ್ ಸವಾರ ಅಲ್ಲಿಂದ ಹೋಗಿದ್ದಾನೆ.
Advertisement
ಈ ವಿಡಿಯೋವನ್ನು “ರೈಡ್ ವಿಥ್ ಕೆಸಿ” ಎಂಬ ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ. ಜೊತೆಗೆ ಪೊಲೀಸರ ಜೊತೆ ನಡೆದ ಸಂಭಾಷಣೆಯನ್ನು ಸವಾರ ಬರೆದುಕೊಂಡಿದ್ದಾನೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.