LatestMain PostNational

ಮಳೆಯಿಂದ ರಸ್ತೆಯೆಲ್ಲಾ ಜಲಾವೃತ – ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಪೊಲೀಸ್ ಹಾಗೂ ಪತ್ನಿ ಡ್ರೈನೇಜ್ ಗುಂಡಿಗೆ

ಲಕ್ನೋ: ಮಳೆ ನೀರಿನಿಂದ ಜಲಾವೃತವಾದ ರಸ್ತೆಗಳಲ್ಲಿ ಚಲಿಸುವುದು ಎಷ್ಟು ಅಪಾಯಕಾರಿ ಎಂಬುದು ಈ ಘಟನೆಯೇ ಸಾಕ್ಷಿ. ದಾರಿಯೇ ಕಾಣದ ರಸ್ತೆಯಲ್ಲಿ ಪ್ರಯಣಿಸುತ್ತಿದ್ದ ಪೊಲೀಸ್ ಹಾಗೂ ಪತ್ನಿ ಸ್ಕೂಟರ್ ಸಮೇತವಾಗಿ ತೆರೆದ ಚರಂಡಿಗೆ ಬಿದ್ದಿದ್ದಾರೆ.

ನೀರಿನಿಂದ ಜಲಾವೃತವಾಗಿ ರಸ್ತೆಯೇ ಕಾಣದ ದಾರಿಯಲ್ಲಿ ಸಾಗುತ್ತಿದ್ದ ದಂಪತಿ ಸ್ಕೂಟರ್ ಸಮೇತವಾಗಿ ಡ್ರೈನೇಜ್ ಗುಂಡಿಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಘಟನೆಯಿಂದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಾಬೂಲ್ ಗುರುದ್ವಾರ ದಾಳಿ: 3 ಗಂಟೆಗಳ ಕಾಲ ದೇವಾಲಯ ರಕ್ಷಿಸಲು ಹೋರಾಡಿದ ತಾಲಿಬಾನ್

ಡ್ರೈನೇಜ್‌ಗೆ ಬಿದ್ದ ದಂಪತಿಯನ್ನು ಸ್ಥಳೀಯರು ತಕ್ಷಣವೇ ರಕ್ಷಿಸಲು ಧಾವಿಸಿದ್ದಾರೆ. ದಂಪತಿ ಗುಂಡಿಗೆ ಬೀಳುವ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಯುಪಿಯ ಸ್ಮಾರ್ಟ್ ಸಿಟಿ ಅಲಿಗಢ, ಇದಕ್ಕೆ ಯಾರಿಗೆ ಧನ್ಯವಾದ ಹೇಳಬೇಕು? ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳ ನಡುವೆ, ಅಗ್ನಿವೀರರಿಗೆ ಆನಂದ್ ಮಹೀಂದ್ರಾ ಕೊಟ್ರು ಬಿಗ್ ಆಫರ್

ಘಟನೆ ಬಗ್ಗೆ ವಿವರಿಸಿದ ಪೊಲೀಸ್ ಅಧಿಕಾರಿ ದಯಾನಂದ್ ಸಿಂಗ್, ನಾವು ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದೆವು. ಮಳೆ ನೀರಿನಿಂದ ರಸ್ತೆ ತುಂಬಿದ್ದು, ನಮ್ಮ ಎದುರು ಚರಂಡಿ ಇದ್ದ ವಿಷಯ ತಿಳಿದಿರಲಿಲ್ಲ. ಹೀಗಾಗಿ ಸ್ಕೂಟರ್ ಸಮೇತ ಚರಂಡಿಯಲ್ಲಿ ಬಿದ್ದೆವು, ನಮಗೆ ಸ್ವಲ್ಪ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button