ಮುಂಬೈ: 19 ವರ್ಷದ ಐಐಟಿ ವಿದ್ಯಾರ್ಥಿನಿಯ (IIT Student) ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ಪೊಲೀಸ್ ಕಾನ್‌ಸ್ಟೇಬಲ್ (Police Constable) ಒಬ್ಬನನ್ನ ಅಮಾನತುಗೊಳಿಸಿರುವ ಘಟನೆ ಮುಂಬೈನ (Mumbai) ಸಂಪದ ಪಾಮ್ ಬೀಚ್ ಬಳಿ ನಡೆದಿದೆ.
Advertisement
ಪೊಲೀಸ್ ಕಾನ್‌ಸ್ಟೇಬಲ್ ಕುಡಿತ ಮತ್ತಿನಲ್ಲಿ ವಿದ್ಯಾರ್ಥಿನಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಆಕೆಯನ್ನು ಬೈಕ್‌ನಲ್ಲಿ ಕೂರುವಂತೆ ಒತ್ತಾಯಿಸಿದ್ದಾನೆ ಎಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊವೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಸದ್ಯ ಪೊಲೀಸ್ ಕಾನ್ಸ್ಸ್ಟೇಬಲ್‌ನನ್ನ ಅಮಾನತುಗೊಳಿಸಿದ್ದು, ನವಿ ಮುಂಬೈ ಪೊಲೀಸ್ ಆಯಕ್ತ ಮಿಲಿಂದ್ ಭರಾಂಬೆ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ ನಡುವೆ ಮೈಮರೆತ ಪ್ರೇಮಿಗಳು – ರಸ್ತೆ ಬ್ಲಾಕ್‍ಮಾಡಿ ನೋಡ್ಕೊಂಡು ನಿಂತಿದ್ದವರ ಮೇಲೆ ಲಾಠಿಚಾರ್ಜ್
Advertisement
Advertisement
ನಡೆದಿದ್ದೇನು?
ಸಂತ್ರಸ್ತೆಯು ಶುಕ್ರವಾರ ಬೆಳಗ್ಗಿನ ಜಾವ 3:15ರ ವೇಳೆಗೆ ಸಂಪದ ಪಾಮ್ ಬೀಚ್ ರಸ್ತೆಯಲ್ಲಿರುವ ಭೂಮಿರಾಜ್ ಕೋಸ್ಟರಿಕಾ ಬಿಲ್ಡಿಂಗ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ಇದ್ದಳು. ಈ ವೇಳೆ ಅಲ್ಲಿಗೆ ಕಾನ್‌ಸ್ಟೇಬಲ್ ದೀಪಕ್ ರಾಥೋಡ್ ತನ್ನ ಬೈಕ್ ನಿಲ್ಲಿಸಿ, ಇಬ್ಬರೂ ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದಾನೆ. ಬಳಿಕ ಆಕೆಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಯನ್ನು ತನ್ನ ಬೈಕ್‌ನಲ್ಲಿ ಕೂರುವಂತೆ ಒತ್ತಾಯಿಸಿದ್ದಾನೆ. ಇದರಿಂದ ಕೋಪಗೊಂಡು ಆಕೆ ಮತ್ತು ಅವಳ ಸ್ನೇಹಿತ ಜೋರಾಗಿ ಗಲಾಟೆ ಮಾಡಿದಾಗ ಪೊಲೀಸ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಆಧುನಿಕ ಭಾರತದ ಪಿತಾಮಹ ದೇಶಕ್ಕಾಗಿ ಏನ್ ಮಾಡಿದ್ದಾರೆ – ನಿತೀಶ್ ಕುಮಾರ್ ಪ್ರಶ್ನೆ
Advertisement
ಈ ಬಗ್ಗೆ ಸಂಪದ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ನಿರಾಕರಿಸಿದ್ದಾರೆ. ನಂತರ ಆಕೆ ಪೊವೈ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಥೋಡ್ ವಿರುದ್ಧ ಐಪಿಸಿ (IPC) ಸೆಕ್ಷನ್ 354 (ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.