Districts
ಗಣೇಶೋತ್ಸವದ ಬಂದೋಬಸ್ತ್ ಜೊತೆಗೆ ಸ್ಟೇಜ್ ಮೇಲೆ ಹಾಡಿ ರಂಜಿಸಿದ ಪೊಲೀಸ್- ವಿಡಿಯೋ ವೈರಲ್

ಮೈಸೂರು: ಗಣೇಶೋತ್ಸವದ ಬಂದೋಬಸ್ತ್ ಕೆಲಸದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಸಮವಸ್ತ್ರದಲ್ಲೇ ಚಲನಚಿತ್ರ ಗೀತೆ ಹಾಡುವುದರ ಜೊತೆಗೆ ವೇದಿಕೆಯ ಮೇಲೆ ನರ್ತಿಸುವ ಮೂಲಕ ಸಾರ್ವಜನಿಕರಿಗೆ ಸಖತ್ ಮನರಂಜನೆ ನೀಡಿದ್ದಾರೆ.
ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಕಳೆದ ರಾತ್ರಿ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಅರ್ಕೇಸ್ಟ್ರಾದಲ್ಲಿ ಕರ್ತವ್ಯದಲ್ಲಿದ್ದ ಪೇದೆಯೊಬ್ಬರು ಹಾಡಿ, ಕುಣಿದಿದ್ದಾರೆ.
ಹಂಚ್ಯಾ ಗ್ರಾಮದ ಯುವಕರ ಜೊತೆ ಬೆರೆತು “ಯಾರೇ ನೀನು ರೋಜಾ ಹೂವೇ, ಯಾರೇ ನೀನು ಮಲ್ಲಿಗೆ ಹೂವೇ, ಹೇಳೆ ಓ ಚೆಲುವೆ” ಹಾಡು ಹೇಳುವುದರ ಜೊತೆಗೆ ಯುವಕರ ಜೊತೆಗೆ ಹೆಜ್ಜೆ ಹಾಕಿ ಸಾರ್ವಜನಿಕರನ್ನು ರಂಜಿಸಿದ್ದಾರೆ.
ಪೇದೆಯ ಹಾಡು, ಕುಣಿತ ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಫುಲ್ ವೈರಲ್ ಆಗಿದೆ.
https://www.youtube.com/watch?v=Vo_M83sNCiA&feature=youtu.be
