ಮೈಸೂರು: ಹೊಸ ಫಾಸ್ಟ್ ಫುಡ್ ಸೆಂಟರ್ ನ ಉದ್ಘಾಟನೆಗೆ ಬಂದು ನಮ್ಮನ್ನು ಹರಸಿ ಎಂದು ಪರಿಚಯದ ಪೊಲೀಸ್ ಪೇದೆಗೆ ಫೇಸ್‍ಬುಕ್ ಮೂಲಕ ಆಹ್ವಾನ ನೀಡಿದ ಮಹಿಳೆಯೊಬ್ಬರಿಗೆ ಅಸಭ್ಯವಾಗಿ ಕೊಟ್ಟ ಪ್ರತಿಕ್ರಿಯೆಯಿಂದ ಪೇದೆಯ ಮಾನ ಹರಾಜಾಗುತ್ತಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.
ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇದೆ ರಾಜು ಎಂಬವರೇ ಮಹಿಳೆಗೆ ಅಸಭ್ಯ ಮೆಸೇಜ್ ಮಾಡಿದ ಪೇದೆ. ಈ ಕುರಿತು ಪೇದೆ ರಾಜು ವಿರುದ್ಧ ಮಹಿಳೆ ಲಕ್ಷ್ಮೀಪುರಂಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಿಳೆ, ನಾನು ಪರಿಚಯವಿದ್ದ ಕಾರಣ ಅವರಿಗೆ ಆಹ್ವಾನ ನೀಡಿದೆ. ಆದರೆ ರಾಜು ಅವರು ದುರುದ್ದೇಶದಿಂದ ಈ ರೀತಿ ಕಮೆಂಟ್ ಮಾಡಿದ್ದಾರೆ. ಈ ಕುರಿತ ದಾಖಲೆಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement
Advertisement
ನಡೆದಿದ್ದೇನು: ಮೈಸೂರಿನ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಮಹಿಳೆಯೊಬ್ಬರು ಹೊಸದಾಗಿ ಫಾಸ್ಟ್ ಫುಡ್ ಹೋಟೆಲ್ ಆರಂಭಿಸಿದ್ದಾರೆ. ಆಗ ತಮಗೆ ಪರಿಚಯವಿದ್ದ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಪೇದೆ ರಾಜು ಅವರಿಗೆ ಹೋಟೆಲ್‍ನ ಉದ್ಘಾಟನೆಗೆ ಬನ್ನಿ ಎಂದು ಫೇಸ್ ಬುಕ್ ನಲ್ಲಿ ಮೆಸೇಜ್ ಕಳಿಸಿ ಆಹ್ವಾನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೇದೆ ರಾಜು, ಹೀಗೆ ಸುಂದರವಾದ ಹುಡುಗಿ ಕರೆದರೆ ಯಾರು ಹೋಟೆಲ್‍ಗೆ ಬರೋಲ್ಲ ಹೇಳು? ಹೋಟೆಲ್ ಗೆ ಮೊದಲು ಬಂದವರಿಗೆ ತಿಂಡಿ, ಊಟ ಫ್ರೀನಾ? ಎಂದು ಗೃಹಿಣಿಗೆ ಅಸಭ್ಯವಾಗಿ ರಿಪ್ಲೈ ಮಾಡಿದ್ದಾರೆ.
Advertisement
ಇದಕ್ಕೆ ಮರು ಉತ್ತರ ನೀಡಿರುವ ಗೃಹಿಣಿ ನಿಮ್ಮ ತಂಗಿಯೆಂದು ಹೋಟೆಲ್ ಗೆ ಬನ್ನಿ ಎಂದು ಪ್ರತಿಕ್ರಿಯಿಸಿದ್ದಾರೆ. ಫೇಸ್ ಬುಕ್ ನಲ್ಲಿ ಈ ಮೇಸೆಜ್ ನೋಡಿದ ಗೃಹಿಣಿ ಸಹೋದರ ಹಾಗೂ ಪೋಷಕರು ಗೃಹಿಣಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದೆಲ್ಲದರಿಂದ ಮನನೊಂದ ಗೃಹಿಣಿ ಪೇದೆ ರಾಜು ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.