ಹಾವೇರಿ: ಮನೆ ಮುಂದೆ ನಿಲ್ಲಿಸಿದ್ದ ಟಾಟಾ ಮ್ಯಾಜಿಕ್ ವಾಹನದಲ್ಲಿ ಅವಿತಿದ್ದ ನಾಗರಹಾವೊಂದು ಕೆಲಕಾಲ ವಾಹನದ ಮಾಲೀಕರು ಮತ್ತು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಿಸಿದ್ದ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ನಾಗಪ್ಪ ಮಣ್ಣೂರ ಎಂಬವರ ಮನೆಯ ಮುಂದೆ ನಿಲ್ಲಿಸಿದ್ದ ವಾಹನದಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಅವಿತು ಕುಳಿತಿತ್ತು. ವಾಹನದಲ್ಲಿ ಕುಳಿತಿದ್ದ ಹಾವನ್ನ ಗಮನಿಸಿದ ಮಾಲೀಕರು ಮತ್ತು ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾಗಿದ್ರು. ನಂತರ ವಾಹನದಿಂದ ಹಾವನ್ನ ಹೊರಗೆಳೆದು ಹೊಡೆದು ಸಾಯಿಸಲು ನಿರ್ಧರಿಸಿದ್ರು. ಆದ್ರೆ ಗ್ರಾಮದ ಕೆಲವರು ಹಾವು ಹಿಡಿಯೋದ್ರಲ್ಲಿ ಪಳಗಿರೋ ಹಾವೇರಿ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕಾನ್ಸ್ ಸ್ಟೇಬಲ್ ರಮೇಶ್ ಹರಿಜನಗೆ ಮಾಹಿತಿ ಮುಟ್ಟಿಸಿದ್ರು.
Advertisement
Advertisement
ಕೂಡಲೇ ಸ್ಥಳಕ್ಕೆ ಧಾವಿಸಿದ ಕಾನ್ಸ್ ಸ್ಟೇಬಲ್ ರಮೇಶ್, ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ವಾಹನದಲ್ಲಿ ಅವಿತು ಕುಳಿತಿದ್ದ ಹಾವನ್ನ ಹಿಡಿದುಕೊಂಡು ನಂತರ ಕಾಡಿಗೆ ಬಿಡೋದಾಗಿ ಹೋದ್ರು.
Advertisement
ರಮೇಶ್ ಕೈಗೆ ಸಿಕ್ಕ ನಗರಹಾವು ಬದುಕಿದೆಯಾ ಬಡಜೀವವೆ ಅಂತಾ ನಿಟ್ಟಿಸಿರು ಬಿಟ್ಟಿತು. ಗ್ರಾಮಸ್ಥರಂತೂ ಹಾವು ಸೆರೆಹಿಡಿದಿದ್ದು ಕಂಡು ಆತಂಕವನ್ನ ದೂರ ಮಾಡಿಕೊಂಡ್ರು.