– ಆಸ್ಪತ್ರೆಗೆ ಕರೆದೊಯ್ಯುವಾಗ ಬಾಲಕಿ ಬಳಿಯಿದ್ದದ್ದು 120 ರೂಪಾಯಿ ಮಾತ್ರ
ಭೋಪಾಲ್: ಮಧ್ಯ ಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ ಅತ್ಯಾಚಾರ ಸಂತ್ರಸ್ತೆಯಾದ ಬಾಲಕಿಯ ದೇಹ ರಕ್ತದ ಮಡುವಿನಿಂದ ಕೂಡಿತ್ತು, ಅರೆಬೆತ್ತಲಾಗಿ ಮೈಯೆಲ್ಲಾ ಗಾಯ ಮಾಡಿಕೊಂಡು ಸಹಾಯಕ್ಕಾಗಿ ಅಂಗಲಾಚಿದರೂ ಆಕೆಯ ನೆರವಿಗೆ ಬರಲಿಲ್ಲ ಎಂಬ ವಿಚಾರ ಸದ್ಯ ದೇಶಾದ್ಯಂತ ಚರ್ಚೆಯಾಗುತ್ತಿದೆ. ಅರೆಬೆತ್ತಲೆ ಸ್ಥಿತಿಯಲ್ಲಿ ಬಾಲಕಿ ರಸ್ತೆಯಲ್ಲಿ ನಡೆದಾಡುತ್ತಿದ್ದ ವೀಡಿಯೋ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.
ಇನ್ನೂ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಕುರಿತು ಉಜ್ಜಯಿನಿ ಪೊಲೀಸ್ ಮುಖ್ಯಸ್ಥ (Ujjain Police Chief) ಸಚಿನ್ ಶರ್ಮಾ ಸಮಗ್ರ ಮಾಹಿತಿ ನೀಡಿದ್ದಾರೆ. 15ರ ಬಾಲಕಿ ಅನುಭವಿಸಿದ ನರಕ ಯಾತನೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರೊಂದಿಗೆ ಬಾಲಕಿಗೆ ಯಾರೊಬ್ಬರೂ ಸಹಾಯ ಮಾಡಿಲ್ಲ ಎಂಬ ವಾದವನ್ನು ತಳ್ಳಿಹಾಕಿರುವ ಉಜ್ಜಯಿನಿ ಪೊಲೀಸರು ಸಹಾಯಹಸ್ತ ನೀಡಿದವರ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
Advertisement
Advertisement
ಸಂತ್ರಸ್ತೆ ಸ್ಥಿತಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಪೊಲೀಸರು:
ಅತ್ಯಾಚಾರ ಸಂತ್ರಸ್ತೆಯು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಸಾಕಷ್ಟು ಜನರನ್ನ ನೆರವಿಗೆ ಧಾವಿಸುವಂತೆ ಬೇಡಿಕೊಂಡಿದ್ದಾಳೆ. ಆಗ ಜನರು ಆಕೆಗೆ 50 ರೂ. ಅಥವಾ 100 ರೂ. ಕೊಟ್ಟು ತಮ್ಮ ಪಾಡಿಗೆ ಹೋಗಿದ್ದಾರೆ. ಆಕೆ ಬರುವ ಹಾದಿಯಲ್ಲಿ ಒಂದು ಟೋಲ್ ಬೂತ್ ಕೂಡಾ ಸಿಕ್ಕಿದೆ. ಈ ಟೋಲ್ ಬೂತ್‌ನ ಜನರು ಅರೆಬೆತ್ತಲಾಗಿದ್ದ ಬಾಲಕಿಗೆ ಹಣ ಹಾಗೂ ಬಟ್ಟೆಯನ್ನೂ ನೀಡಿದ್ದಾರೆ. ಕೊನೆಗೆ ಬಾಲಕಿ ಆಶ್ರಮವೊಂದಕ್ಕೆ ತಲುಪಿದ್ದಾಳೆ. ಅಲ್ಲಿ ಆಶ್ರಮದ ಪೂಜಾರಿ ಆಕೆಗೆ ಆಶ್ರಯ ನೀಡಿ, ಬಟ್ಟೆ ಕೊಟ್ಟು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಪೊಲೀಸರು ಆಶ್ರಮಕ್ಕೆ ಧಾವಿಸಿ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ಪ್ಲಾಟ್‍ಫಾರ್ಮ್ ಮೇಲೆ ರೈಲು ಏರಿದ ಪ್ರಕರಣಕ್ಕೆ ಟ್ವಿಸ್ಟ್ – ಕುಡಿದ ಮತ್ತಿನಲ್ಲಿ ಸಹಾಯಕನ ಎಡವಟ್ಟು
Advertisement
Advertisement
ರಸ್ತೆಯಲ್ಲಿ ಸಾಗುತ್ತಿದ್ದ ಬಾಲಕಿಗೆ ಸುಮಾರು 8 ಮಂದಿ ನೆರವಾಗಿದ್ದಾರೆ. ಬಹುತೇಕರು ಬಾಲಕಿಗೆ ಹಣ ನೀಡಿದ್ದಾರೆ. ಆದ್ರೆ ಆಕೆಗೆ ಆಶ್ರಯ ನೀಡಿದ್ದು ಮಾತ್ರ ಓರ್ವ ಪೂಜಾರಿ. ಅವರೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಬಾಲಕಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿಯೂ ನೆರವಾಗಿದ್ದಾರೆ. ಜನತೆಗೆ ನೆರವು ನೀಡಬೇಕೆಂಬ ಮನಸ್ಸು ಇತ್ತು. ಹೀಗಾಗಿ, ಹಣ ನೀಡಿದ್ದಾರೆ. ಆದೆ ಪೊಲೀಸರನ್ನು ಸಂಪರ್ಕಿಸುವ ಹಾಗೂ ಬಾಲಕಿಗೆ ವೈದ್ಯಕೀಯ ನೆರವು ಒದಗಿಸಲು ಮುಂದಾಗುವಷ್ಟು ಜನರು ಮನಸ್ಸು ಮಾಡಿಲ್ಲ. ಏಕೆಂದರೆ ಅವರು ಭಯಗೊಂಡಿರಬಹುದು ಅಥವಾ ತಮ್ಮ ಇತಿ ಮಿತಿಯಲ್ಲಿ ಸಹಾಯ ಮಾಡಿರಬಹುದು ಎಂದು ಸಚಿನ್ ಶರ್ಮಾ ಹೇಳಿದ್ದಾರೆ.
ಬಾಲಕಿಯನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಕೆಯ ಬಳಿ 120 ರೂ. ಹಣವಿತ್ತು ಎಂಬುದು ತಿಳಿದು ಬಂದಿದೆ. ಆದ್ರೆ ರಕ್ತದ ಮಡುವಿನಲ್ಲಿದ್ದ ಬಾಲಕಿಗೆ ಬೇಕಾಗಿದ್ದು, ಸೂಕ್ತ ತುರ್ತು ಚಿಕಿತ್ಸೆಯೇ ಹೊರತು ಬಿಡಿಗಾಸಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ ಎಂದು ವಿವರಿಸಿದ್ದಾರೆ.
ಇನ್ನೂ ಬಾಲಕಿಯ ಈ ಸ್ಥಿತಿಗೆ ಕಾರಣರಾದವರು ಯಾರು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆಕೆಯ ಮೇಲೆ ಅತ್ಯಾಚಾರ ಎಸಗಿ, ಮಾರಣಾಂತಿಕವಾಗಿ ಥಳಿಸಿ, ಅರೆಬೆತ್ತಲೆ ಮಾಡಿ ಎಸೆದು ಹೋಗಿದ್ದು ಯಾರು ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ
ಪೊಲೀಸರ ಕಣ್ಗಾವಲಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಗಂಭೀರ ಗಾಯಗಳಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಚೇತರಿಕೆ ಕಂಡ ಕೂಡಲೇ ಪೊಲೀಸರು ಆಕೆಯಿಂದ ಮಾಹಿತಿ ಸಂಗ್ರಹಿಸಲಿದ್ದಾರೆ.
ಸಂತ್ರಸ್ತ ಬಾಲಕಿಯು ಮಧ್ಯ ಪ್ರದೇಶದ ಉಜ್ಜಯಿನಿಯಿಂದ 700 ಕಿಮೀ ದೂರದಲ್ಲಿ ಇರುವ ಗ್ರಾಮದವಳು ಎಂದು ತಿಳಿದು ಬಂದಿದೆ. ಆಕೆ ತನ್ನ ಅಜ್ಜ ಹಾಗೂ ಅಣ್ಣನ ಜೊತೆ ನೆಲೆಸಿದ್ದಳು. ಶಾಲೆಗೆ ಹೋಗಿದ್ದ ಬಾಲಕಿ ಮನೆಗೆ ಬಂದಿಲ್ಲ ಎಂದು ಆಕೆಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Web Stories