ಬಳ್ಳಾರಿ: ಪಕ್ಕದ ಮನೆಯ ಗೃಹಿಣಿಯೊಬ್ಬರು ಸ್ನಾನ ಮಾಡುತ್ತಿರುವ ಹಾಗೂ ಬಟ್ಟೆ ಬದಲಾಯಿಸುತ್ತಿರೋ ವಿಡಿಯೋ ಮಾಡಿರುವ ಆರೋಪವೊಂದು ಪೊಲೀಸ್ ಪೇದೆಯ ವಿರುದ್ಧ ಕೇಳಿಬಂದಿದ್ದು, ಇದೀಗ ಪೇದೆ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಹೊಸಪೇಟೆ ಟೌನ್ ಪೊಲೀಸ್ ಠಾಣೆಯ ಪೇದೆಯೊಬ್ಬ, ಹೊಸಪೇಟೆ ಪಟ್ಟಣದ ಪಟೇಲ್ ನಗರದ ನಿವಾಸಿಯಾಗಿರುವ ಗೃಹಿಣಿಯೊಬ್ಬರಿಗೆ ಕಳೆದ 2 ವರ್ಷದಿಂದ ಆಕೆ ಸ್ನಾನ ಮಾಡೋ, ಬಟ್ಟೆ ಬದಲಾಯಿಸುವ ಫೋಟೋ ಹಾಗೂ ವಿಡಿಯೋ ರೆರ್ಕಾಡ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಗೃಹಿಣಿ ಪತಿ ಪೊಳಿಸರಿಗೆ ದೂರು ನೀಡಿದ್ದಾರೆ.
Advertisement
ದೂರಿನಲ್ಲಿ ಏನಿದೆ?: 2 ವರ್ಷದ ಹಿಂದೆ ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಪತ್ನಿಗೆ ಗೊತ್ತಿಲ್ಲದಂತೆ ಆಕೆ ಬಟ್ಟೆ ಬದಲಾಯಿಸುತ್ತಿರುವ ಮತ್ತು ಸ್ನಾನ ಮಾಡುತ್ತಿರುವ ಫೋಟೋ, ವಿಡಿಯೋವನ್ನು ಪೇದೆ ಮಾಡಿದ್ದಾನೆ. ಬಳಿಕ ಅದನ್ನು ಆಕೆಗೆ ತೋರಿಸಿ ಯಾರಿಗಾದರೂ ಹೇಳಿದರೆ ಸಂಬಂಧಿಕರಿಗೆ, ಸ್ನೇಹಿತರಿಗೆ, ಪೇಸ್ ಬುಕ್ ಮತ್ತು ವಾಟ್ಸಪ್ ಗೆ ಅಪ್ಲೋಡ್ ಮಾಡುತ್ತೇನೆ. ನಾನು ಹೇಳಿದ ಹಾಗೆ ಕೇಳು ಎಂದು ಹೇಳಿದ್ದಾನೆ. ಒಂದು ವೇಳೆ ನಿನ್ನ ಪತಿಗೆ ಹೇಳಿದರೆ ಆತನ ಅಂಗಡಿಯಲ್ಲಿ ಗಾಂಜಾ ಇಟ್ಟು ಕೇಸ್ ಬುಕ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
Advertisement
Advertisement
ನಿನ್ನ ಗಂಡನನ್ನು ಬಿಟ್ಟು ಬಿಡು, ನಾನು ನಿನ್ನ ಮದವೆ ಮಾಡಿಕೊಳ್ಳುತ್ತೇನೆ. ನಾನು ನಿನ್ನ ಪ್ರೀತಿಸುತ್ತೇನೆ. ಅವನಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಅಸಭ್ಯವಾಗಿ ಸಂದೇಶ ಕಳುಹಿಸಲು ಪ್ರಾರಂಭಿಸಿದನು. ಒಂದು ವೇಳೆ ನೀನು ಬರದಿದ್ದರೆ ನಿನ್ನ ಗಂಡನನ್ನ ಸುಮ್ಮನೆ ಬಿಡುವುದಿಲ್ಲ. ಅಷ್ಟೇ ಅಲ್ಲದೇ ಈ ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತೇನೆ ಎಂದು ಸುಮಾರು 8 ತಿಂಗಳಿಂದ ದೌರ್ಜನ್ಯ ಮಾಡುತ್ತಿದ್ದಾನೆ. ಕೊನೆಗೆ ಪತ್ನಿ ನನಗೆ ವಿಚಾರ ತಿಳಿಸಿದ್ದಳು. ನಂತರ ಆತನ ಬಳಿ ನಾನು ಮಾತನಾಡಿದ್ದೆ. ಆದರೆ ನನ್ನ ಬಳಿ ಹಣ ತೆಗೆದುಕೊಂಡು ಮತ್ತೆ ಅದೇ ರೀತಿ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆಯ ಪತಿ ಉಲ್ಲೇಖಿಸಿದ್ದಾರೆ.
Advertisement
ಈ ಬಗ್ಗೆ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೇದೆ ವೆಂಕಟೇಶ ವಿರುದ್ಧ ಪ್ರಾಣ ಬೆದರಿಕೆ ಹಾಗೂ ಬ್ಲಾಕಮೇಲ್ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಪೇದೆ ವೆಂಕಟೇಶ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪೋಲಿ ಪೇದೆ ವೆಂಕಟೇಶ ಪರಾರಿಯಾಗಿದ್ದಾನೆ. ಈ ಘಟನೆಯ ಕುರಿತು ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.