ಜಮ್ಮು: ಅಮರನಾಥ ಯಾತ್ರಾ ಶಿಬಿರದಲ್ಲಿ ಮಹಿಳಾ ಭಕ್ತೆಯೊಬ್ಬರು ಸ್ನಾನ ಮಾಡುತ್ತಿದ್ದಾಗ ಅದನ್ನು ವಿಡಿಯೋ ಮಾಡಿದ್ದ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಬಂಧಿಸಿ ಬಿಡುಗಡೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.
ತಾರಿಕ್ ಅಹ್ಮದ್ ಬಂಧಿತ ಪೊಲೀಸ್ ಕಾನ್‌ಸ್ಟೇಬಲ್. ಭಾರತೀಯ ರಿಸರ್ವ್ ಪೊಲೀಸ್ ಪಡೆಯ 19 ನೇ ಬೆಟಾಲಿಯನ್ ನಲ್ಲಿ ಆರೋಪಿ ತಾರಿಕ್ ಅಹ್ಮದ್ ಸೇವೆ ಸಲ್ಲಿಸುತ್ತಿದ್ದನು. ಇದೀಗ ಈತನ ವಿರುದ್ಧ ರಣ್ಬೀರ್ ದಂಡ ಸಂಹಿತೆಯ ಪ್ರಕಾರ ತ್ರಿಕುಟಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement
Advertisement
ಮಹಿಳೆ ಅಮರನಾಥ್ ಯಾತ್ರೆಗೆ ಬಂದಿದ್ದರು. ಬುಧವಾರ ರಾತ್ರಿ ರೈಲ್ವೇ ನಿಲ್ದಾಣದ ಬಳಿ ಶಿಬಿರದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ತಾರಿಕ್, ತನ್ನ ಮೊಬೈಲ್‍ನಲ್ಲಿ ಮಹಿಳೆಗೆ ತಿಳಿಯದಂತೆ ವಿಡಿಯೋ ಮಾಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ತಕ್ಷಣ ಕಿರುಚಾಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement
ತ್ರಿಕುಟಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಾರಿಕ್ ನನ್ನು ಬಂಧಿಸಿದ್ದಾರೆ. ನಂತರ ಜಾಮೀನಿನ ಮೂಲಕ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.