ಮಡಿಕೇರಿ: ಮಳೆಗಾಲ ಆರಂಭವಾದೊಡನೆ ಜಿಲ್ಲೆಯಲ್ಲಿ ಜಲಪಾತಗಳು ಭೋರ್ಗರೆಯುತ್ತವೆ. ವಿರಾಜಪೇಟೆ ಸಮೀಪದ `ಚೇಲಾವರ’ ಫಾಲ್ಸ್ ಈಗ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರು ಖುಷಿಯೊಂದಿಗೆ ನೀರಿನಾಟ ಆಡುತ್ತಿದ್ದಾರನಿಸರ್ಗ ರಮಣೀಯ ಕೊಡಗು ಜಿಲ್ಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಜಲಪಾತಗಳಿವೆ. ಮಳೆಗಾಲ ಆರಂಭವಾಯಿತೆಂದರೆ ಅವುಗಳು ಭೋರ್ಗರೆಯುತ್ತಾ ಧುಮ್ಮಿಕುತ್ತವೆ. ದಟ್ಟ ಕಾನನದ ನಡುವೆ ರುದ್ರನರ್ತನಗೈಯುತ್ತಿರುವ ಚೇಲಾವರ ಜಲಪಾತದ ಸೊಬಗು ಕಣ್ಣಿಗೊಂದು ಹಬ್ಬ!.
ದಟ್ಟ ಕಾನನದ ನಡುವೆ ಬೆಳ್ಳಗಿನ ಹಾಲ್ನೋರೆ ಸೂಸುತ್ತಿರುವ ಚೇಲಾವರ ಫಾಲ್ಸ್ ಮಡಿಕೇರಿಯಿಂದ 30 ಕಿ.ಮೀ. ದೂರದ ಚೆಯ್ಯಂಡಾಣೆ ಗ್ರಾಮದಲ್ಲಿದೆ. ಈ ಜಲಪಾತ ಸುಮಾರು 150 ಅಡಿ ಎತ್ತರದಿಂದ ಬೀಳುವ ದೃಶ್ಯ ನೋಡುಗರ ಮನಸ್ಸನ್ನು ಮುದಗೊಳಿಸುತ್ತಿದೆ.
Advertisement
ಈ ಫಾಲ್ಸ್‍ನ ವಿಶೇಷತೆಯೆಂದರೆ ಜಲಪಾತದ ಕೆಳಗೂ ಹಾಗೂ ಮೇಲಕ್ಕೂ ಸಲೀಸಾಗಿ ತೆರಳಬಹುದು. ಇದುವರೆಗೂ ಪ್ರವಾಸಿಗರ ಕಣ್ಣಿಗೆ ಬೀಳದೆ ಎಲೆಮರೆಯ ಕಾಯಿಯಂತೆ ಮೂಲೆ ಸೇರಿದ್ದ ಈ ಜಲಪಾತ ಕೆಲ ವರ್ಷಗಳಿಂದ ಜನಪ್ರಿಯಗೊಂಡ ಹಿನ್ನೆಲೆಯಲ್ಲಿ ಈಗ ಪ್ರವಾಸಿಗರು ಇಲ್ಲಿಗೆ ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ. ಪ್ರಕೃತಿಯ ಸೊಬಗನ್ನು ಆಸ್ವಾದಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ.
Advertisement
ವಿಕೇಂಡ್‍ನಲ್ಲಂತೂ ಪ್ರವಾಸಿಗರು ಮುಗಿ ಬಿದ್ದಿದ್ದು, ಜಲಪಾತ ವೀಕ್ಷಣೆ ಮಾಡುತ್ತಾರೆ. ಬಳಿಕ ಸನಿಹದಲ್ಲಿರುವ ಬೆಟ್ಟಕ್ಕೆ ತೆರಳಿ ಪ್ರಕೃತಿ ರಮಣೀಯವನ್ನು ಸವಿಯುತ್ತಿದ್ದಾರೆ. ಮಳೆಗಾಲದ ವೀಕೆಂಡ್ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ತಾಣದ ಜೊತೆಗೆ ಮಡಿಕೇರಿಗೆ ಬಂದು ಅಬ್ಬಿಫಾಲ್ಸ್ ನೋಡಬಹುದು ಅಷ್ಟೇ ಅಲ್ಲದೇ ಮುಗಿಲುಪೇಟೆಗೆ ಭೇಟಿ ನೀಡಬಹುದು. ಮತ್ತೆ ತಡಯಾಕೆ ಒಮ್ಮೆ ನೀವು ಈ ಚೇಲಾವರ ಫಾಲ್ಸ್ ಗೆ ಭೇಟಿ ನೀಡಿ.
Advertisement
Advertisement