ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗರಡಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್. ಮತ್ತೋರ್ವ ಸಚಿವ ಬಿ.ಸಿ. ಪಾಟೀಲ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಗೆಳೆಯನಿಗಾಗಿ ಪಾತ್ರ ಮಾಡಿದೆ ಎಂದಿದ್ದಾರೆ ಸೋಮಶೇಖರ್. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?
Advertisement
“ನನಗೆ ನಟನೆಯ ಗಂಧಗಾಳಿ ಗೊತ್ತಿಲ್ಲ. ಗೆಳೆಯ ಪಾಟೀಲರು ಅವರ ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಗೆಳೆಯನ ಪ್ರೀತಿಗಾಗಿ ಬಣ್ಣ ಹಚ್ಚಿದೆ. ನಾನು ಪಾತ್ರ ಮಾಡುತ್ತಿರುವುದರಿಂದ ಬೇರೊಬ್ಬ ನಟನ ಅವಕಾಶ ಕಸಿದುಕೊಂಡೆ ಅನಿಸುತ್ತಿದೆ’ ಎಂದಿದ್ದಾರೆ ಸಚಿವರು. ಇದನ್ನೂ ಓದಿ : ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?
Advertisement
Advertisement
ಈ ಸಿನಿಮಾದಲ್ಲಿ ಅವರು ಸೋಮಣ್ಣ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ. ಅದು ಬಿ.ಸಿ. ಪಾಟೀಲ್ ಗೆಳೆಯನ ಪಾತ್ರವೇ ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಪಾಟೀಲ್ ರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದನ್ನೂ ಓದಿ : ರಣಬೀರ್ ಮತ್ತು ಆಲಿಯಾ ಮದ್ವೆ ಡೇಟ್ ಮತ್ತೆ ಬದಲು: ಪ್ರಣಯ ಹಕ್ಕಿಗಳ ಪ್ರಲಾಪ
Advertisement
“ಬೆಳಗ್ಗೆ ನಿರ್ದೇಶಕ ಯೋಗರಾಜ್ ಭಟ್ಟರು ನನ್ನ ಪಾತ್ರವನ್ನು ವಿವರಿಸಿದರೆ, ಡೈಲಾಗ್ ಹೇಳಿದರು. ಅವರು ಏನು ಹೇಳಿದರೋ ಅಷ್ಟನ್ನು ಮಾಡಿದ್ದೇನೆ. ಅದರಾಚೆ ನನಗೆ ನಟನೆ ಬಾರದು. ಪ್ರೇಕ್ಷಕರು ನನ್ನ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ’ ಎನ್ನುವುದು ಸೋಮಶೇಖರ್ ಮಾತು. ಇದನ್ನೂ ಓದಿ : ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?
ಬೆಂಗಳೂರಿನ ಜಿ.ವಿ ಅಯ್ಯರ್ ಸ್ಟುಡಿಯೋದಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಬಿ.ಸಿ.ಪಾಟೀಲ್, ಸೋಮಶೇಖರ್, ಚಿತ್ರದ ನಾಯಕ ಯಶಸ್ ಸೂರ್ಯ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್
ಅಂದಹಾಗೆ ಗಾಳಿಪಟ 2 ಸಿನಿಮಾದ ನಂತರ ಯೋಗರಾಜ್ ಭಟ್ ನಿರ್ದೇಶನ ಮಾಡಿರುವ ಚಿತ್ರವಿದು. ಹಳ್ಳಿ ಸೊಗಡಿನಲ್ಲಿ ಕಥೆಯನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು. ಇಂತಹ ಕಥೆಯನ್ನು ಅವರು ಇದೇ ಮೊದಲ ಬಾರಿಗೆ ಆಯ್ಕೆ ಮಾಡಿಕೊಂಡಿದ್ದಾರಂತೆ ಯೋಗರಾಜ್ ಭಟ್.