ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಯಶಸ್ಸು ಸಿಗದೇ ಇದ್ದರೂ ಅವಕಾಶಗಳ ಕೊರತೆಯಿಲ್ಲ. ಹೀಗಿರುವಾಗ ‘ಕೂಲಿ’ ಸಿನಿಮಾದಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿರುವ ಪೂಜಾ ಈಗ ಸಂಭಾವನೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಲೈವಾ ಜೊತೆ ಸೊಂಟ ಬಳುಕಿಸಲು 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.
Advertisement
ಇತ್ತೀಚೆಗಷ್ಟೇ ‘ಕೂಲಿ’ (Coolie) ಚಿತ್ರತಂಡ ಪೂಜಾ ಹೆಗ್ಡೆ ಸಿನಿಮಾದ ಭಾಗವಾಗುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಚಿತ್ರದಲ್ಲಿ ಸ್ಪೆಷಲ್ ಡ್ಯಾನ್ಸ್ ಮಾಡಲು ನಟಿಯನ್ನು ಸಂಪರ್ಕಿಸಿದ ಸಮಯದಲ್ಲಿ 2 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದಕ್ಕೆ ಚಿತ್ರತಂಡವು ಕೂಡ ಒಪ್ಪಿಗೆ ನೀಡಿ 2 ಕೋಟಿ ರೂ. ಸಂಭಾವನೆಯನ್ನು ಪೂಜಾಗೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಶ್ರೇಯಾ ಘೋಷಾಲ್ ಎಕ್ಸ್ ಅಕೌಂಟ್ ಹ್ಯಾಕ್: ಲಿಂಕ್ ಕ್ಲಿಕ್ ಮಾಡದಂತೆ ಫ್ಯಾನ್ಸ್‌ಗೆ ಗಾಯಕಿ ಎಚ್ಚರಿಕೆ
Advertisement
Advertisement
ಇನ್ನೂ ಈ ಹಿಂದೆ ‘ಜೈಲರ್’ ಸಿನಿಮಾದಲ್ಲಿ ತಲೈವಾ ಮತ್ತು ತಮನ್ನಾ ಡ್ಯಾನ್ಸ್ ಸಖತ್ ಕಿಕ್ ಕೊಟ್ಟಿತ್ತು. ಕಾವಾಲಯ್ಯ ಸಾಂಗ್ ಸೂಪರ್ ಹಿಟ್ ಆಗಿತ್ತು. ಅದೇ ಶೈಲಿಯಲ್ಲಿ ರಜನಿಕಾಂತ್ (Rajinikanth) ಮತ್ತು ಪೂಜಾ ಹೆಗ್ಡೆ ಸಾಂಗ್ ಶೂಟ್ ಮಾಡುವ ಪ್ಲಾö್ಯನ್ ಚಿತ್ರತಂಡಕ್ಕಿದೆ. ಈ ಸಾಂಗ್ ಕೂಡ ಹಿಟ್ ಆಗಲಿದೆ ಎಂಬುದು ನಿರ್ಮಾಪಕರ ಊಹೆ.
Advertisement
ಅವಕಾಶವಿದ್ದರೂ ಸಕ್ಸಸ್ ಸಿಗದೇ ಒದ್ದಾಡುತ್ತಿರುವ ಪೂಜಾ ಹೆಗ್ಡೆಗೆ ಈ ಕೂಲಿ ಸಿನಿಮಾದ ಐಟಂ ಸಾಂಗ್ ಕೆರಿಯರ್‌ನಲ್ಲಿ ತಿರುವು ನೀಡುತ್ತಾ? ಮುಂದೆ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.