ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ‘ಕೂಲಿ’ (Coolie) ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಗಿಂತ ಹೆಚ್ಚು ಅವರ ಸಂಭಾವನೆ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಈ ಚಿತ್ರಕ್ಕೆ ತಲೈವಾ 150 ಕೋಟಿ ರೂ. ಹಾಗೂ ನಿರ್ದೇಶಕ ಲೋಕೇಶ್ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ.
ತಲೈವಾಗೆ ವಯಸ್ಸು 74 ವರ್ಷವಾದ್ರೂ ಅವರಿಗಿರುವ ಚಾರ್ಮ್ ಮತ್ತು ಸಿನಿಮಾ ಮೇಲಿನ ಕ್ರೇಜ್ ಫ್ಯಾನ್ಸ್‌ಗೆ ಕಮ್ಮಿಯಾಗಿಲ್ಲ. ಹೀಗಾಗಿಯೇ ಕೂಲಿ ಸಿನಿಮಾದಲ್ಲಿ ನಟಿಸಲು 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದಷ್ಟೇ ಅಲ್ಲ, ಈ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ (Lokesh Kanagaraj) ಕೂಡ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಇದನ್ನೂ ಓದಿ: ವಿದೇಶಕ್ಕೆ ಶೂಟಿಂಗ್ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ
ಈ ಸಿನಿಮಾ ರಿಲೀಸ್‌ಗೂ ಮೊದಲೇ ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಮ್ಯೂಸಿಕ್ ರೈಟ್ಸ್‌ನಿಂದ 240 ಕೋಟಿ ರೂ. ಅಧಿಕ ಗಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:ಹಿರಿಯ ನಟ ಅನಂತ್ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ
ಈ ಸಿನಿಮಾದಲ್ಲಿ ತಲೈವಾ ಜೊತೆ ನಾಗಾರ್ಜುನ ಅಕ್ಕಿನೇನಿ, ರಿಯಲ್ ಸ್ಟಾರ್ ಉಪೇಂದ್ರ, ಶ್ರುತಿ ಹಾಸನ್, ರೆಬಾ, ಪೂಜಾ ಹೆಗ್ಡೆ, ಆಮೀರ್ ಖಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಈ ಚಿತ್ರ ಆ.14ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ.