RRR ಚಿತ್ರದಂತೆ 3 ವರ್ಷ ಕಾಯಿಸಲ್ಲ: ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್

Public TV
1 Min Read
Lokesh Kanagaraj 1

ಕಾಲಿವುಡ್‌ನ ಸಕ್ಸಸ್‌ಫುಲ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಪ್ರಸ್ತುತ ‘ಕೂಲಿ’ (Coolie) ಸಿನಿಮಾದಲ್ಲಿ ರಜನಿಕಾಂತ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ನಡುವೆ ಅವರು ನೀಡಿರುವ ಹೇಳಿಕೆಯೊಂದು ವೈರಲ್ ಆಗ್ತಿದೆ. ‘ಆರ್‌ಆರ್‌ಆರ್’ (RRR) ಚಿತ್ರದಂತೆ 3 ವರ್ಷ ಕಾಯಿಸಲ್ಲ ಎಂದು ನಿರ್ದೇಶಕ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಡ್ರ್ಯಾಗನ್’ ಹೀರೋಗೆ ಜೊತೆಯಾದ ಕೃತಿ ಶೆಟ್ಟಿ- ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್

rajinikanth lokesh kanagaraj

ಸಂದರ್ಶನವೊಂದರಲ್ಲಿ ನಿರ್ದೇಶಕ ಮಾತನಾಡಿ, ಕೂಲಿ ಸೇರಿದಂತೆ ಯಾವುದೇ ಸಿನಿಮಾ ಆಗಿದ್ರೂ ನಾನು 6ರಿಂದ 8 ತಿಂಗಳಲ್ಲಿ ಮುಗಿಸುತ್ತೇನೆ. ಕಲಾವಿದರು ನನ್ನ ಸಿನಿಮಾದಲ್ಲಿ ನಟಿಸುವ ಜೊತೆ ಬೇರೆಯೊಂದು ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ರೆ, ನನ್ನ ಚಿತ್ರಕ್ಕೂ ತೊಂದರೆ ಆಗುತ್ತದೆ. ಹೀಗಾಗಿ ಕಲಾವಿದರು ನನ್ನ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಬೇಕು ಎಂದರು. ಇದನ್ನೂ ಓದಿ:‘ಬಿಗ್ ಬಾಸ್’ ಫ್ರೆಂಡ್ಸ್ ಜೊತೆ ಮೋಕ್ಷಿತಾ ಫಾರಿನ್ ಟ್ರಿಪ್

lokesh kanakaraj

‘ಆರ್‌ಆರ್‌ಆರ್’ ಸಂಸ್ಥೆಯ ಚಿತ್ರದ ನಿರ್ಮಾಣ ಸಂಸ್ಥೆಯಂತೆ ನಾನು ಒಂದು ಚಿತ್ರವನ್ನು 3 ವರ್ಷಗಳವರೆಗೆ ಮಾಡಲ್ಲ, ನಟರನ್ನು ಕಾಯಿಸಲ್ಲ. ಕಲಾವಿದರು ಯಾರೇ ಆಗಿರಲಿ ಅವರಿಗೆ 3 ವರ್ಷಗಳು ಒಂದು ಚಿತ್ರಕ್ಕೆ ಸಮಯ ಮೀಸಲಿಡೋದು ಕಷ್ಟವಾಗುತ್ತದೆ. ನನ್ನ ಸಿನಿಮಾದಲ್ಲಿ ನಟಿಸುವ ಕಲಾವಿದರು ಆಯಾ ಸಮಯದಲ್ಲಿ ಅದೇ ಪಾತ್ರಗಳಲ್ಲಿ ಜೀವಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

Lokesh Kanagaraj 2ಸದ್ಯ ಲೋಕೇಶ್ ನೀಡಿರುವ ಈ ಹೇಳಿಕೆ ವೈರಲ್ ಆಗಿದೆ. ಸಂದರ್ಶನದಲ್ಲಿ ರಾಜಮೌಳಿ ಹೆಸರನ್ನು ಹೇಳದೇ ಲೋಕೇಶ್ ಟಾಂಗ್ ಕೊಟ್ರಾ ಎಂಬ ಮಾತುಗಳು ಚರ್ಚೆಗೆ ಗ್ರಾಸವಾಗಿದೆ.

ಅಂದಹಾಗೆ, ತಲೈವಾ ನಟನೆಯ ‘ಕೂಲಿ’ ಚಿತ್ರ ಆಗಸ್ಟ್ 14ರಂದು ರಿಲೀಸ್ ಆಗ್ತಿದೆ. ತಲೈವಾ ಜೊತೆ ರಮ್ಯಾ ಕೃಷ್ಣ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಚಿತ್ರದಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಿದ್ದಾರೆ.

Share This Article