ಬೆಂಗಳೂರು: ಮಳೆ (Rain In Bengaluru) ಬಂದರೂ ಶೆಕೆ ಫೀಲ್ ಆಗ್ತಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಮಂದಿಗೆ ಇಂದು ಕೊಂಚ ರಿಲೀಫ್ ಸಿಕ್ಕಿದೆ.
ಹೌದು. ಸದ್ಯ ಬೆಂಗಳೂರು ವಾತಾವರಣ ಕೂಲ್ ಕೂಲ್ ಆಗಿದ್ದು, ಊಟಿಯಂತಾಗಿದೆ. ಭಾನುವಾರ ರಾತ್ರಿಯಿಂದ ಬೆಂಗಳೂರಿನಲ್ಲಿ ಮಳೆ ಆರಂಭವಾಗಿದೆ. ರಾತ್ರಿ ಶುರುವಾಗಿ ಬಿಡುವು ನೀಡಿದ್ದ ವರುಣ, ಇಂದು ಬೆಳ್ಳಂಬೆಳಗ್ಗೆಯೇ ಎಂಟ್ರಿ ಕೊಟ್ಟಿದ್ದಾನೆ.
ಬೆಳಗ್ಗೆ 6:30 ರಿಂದ ತುಂತುರು ಮಳೆ ಆರಂಭವಾಗಿದ್ದು, ಜಿಟಿ, ಜಿಟಿ ಮಳೆಗೆ ಬೆಂಗಳೂರಿನ ವಾತಾವರಣ ಸಂಪೂರ್ಣ ಕೂಲ್ ಕೂಲ್ ಆಗಿದೆ. ನಗರದ ಬಹುತೇಕ ಕಡೆ ತುಂತುರು ಮಳೆಯಾಗುತ್ತಿದೆ. ಈ ಮಳೆ ಒಂದೆಡೆ ಖುಷಿ ನಿಡಿದರೆ, ಇನ್ನೊಂದೆಡೆ ಕೆಲಸಕ್ಕೆ ತೆರಳುವವರು ವಾರದ ಮೊದಲ ದಿನವೇ ಕಿರಿಕಿರಿ ಅನುಭವಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬಹು ನಿರೀಕ್ಷಿತ ಮೆಟ್ರೋ ಸಂಚಾರ ಆರಂಭ
ಒಟ್ಟಿನಲ್ಲಿ ಹವಾಮಾನ ಇಲಾಖೆ (Weather Department) ಕೂಡ ಇನ್ನೂ ನಾಲ್ಕು ದಿನ ಮಳೆಯಾಗುವ ಮುನ್ಸೂಚನೆ ನೀಡಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]