Bengaluru City

ಗಣೇಶ ಹಬ್ಬದ ಬೆನ್ನಲ್ಲೇ ಜನರಿಗೆ ಗುಡ್ ನ್ಯೂಸ್- ಅಡುಗೆ ಎಣ್ಣೆ ದರ ಇಳಿಕೆ

Published

on

Share this

ಬೆಂಗಳೂರು: ಗಣೇಶ ಹಬ್ಬದ ಬೆನ್ನಲ್ಲೇ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌ ನೀಡಿದೆ. ಅಡುಗೆ ಎಣ್ಣೆಯ ಮೇಲಿನ ಆಮದು ಸುಂಕ ಇಳಿಕೆ ಮಾಡಿ ಕೇಂದ್ರ ಸರ್ಕಾರ ಜನರಿಗೆ ಕೊಂಚ ರಿಲೀಫ್‌ ನೀಡಿದೆ.

ನಿನ್ನೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಮದು ಸುಂಕ ಕಡಿತಕ್ಕೆ ನಿರ್ಧರಿಸಲಾಗಿದೆ. ಕಚ್ಛಾ ತೈಲದ ಸೆಸ್‌ ಸೇರಿದಂತೆ ಇತರೆ ಸುಂಕಗಳನ್ನು ಕೂಡಾ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಇದರಿಂದಾಗಿ ಮುಂಬರುವ ಅಕ್ಟೋಬರ್‌ನಿಂದ ಅಡುಗೆ ಎಣ್ಣೆಯ ದರ ಇಳಿಕೆಯಾಗುವ ನಿರೀಕ್ಷೆ ಇದೆ.

ಖಾದ್ಯ ತೈಲ ಬೆಲೆಗಳನ್ನು ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು 2.5%ಕ್ಕೆ ಇಳಿಸಿದೆ. ಅಲ್ಲದೇ ಸಂಸ್ಕರಿಸಿದ ತಾಳೆ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ ಸುಂಕವನ್ನು 32.5%ಗೆ ಇಳಿಸಲಾಗಿದೆ. ಸರ್ಕಾರ ಸುಂಕಗಳ ಇಳಿಕೆಯ ನಷ್ಟವನ್ನು ಭರಿಸುವ ಮೂಲಕ 4,600 ಕೋಟಿ ರೂ. ಮೌಲ್ಯದ ಪ್ರಯೋಜನಗಳನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಿದೆ.

ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಖಾದ್ಯ ತೈಲ ಲಭ್ಯತೆಯನ್ನು ಖಾತರಿಪಡಿಸುವ ಸಲುವಾಗಿ, ಭಾರತ ಸರ್ಕಾರವು 2021ರ ಸೆಪ್ಟೆಂಬರ್ 10ರಿಂದ ಅಧಿಸೂಚನೆ ಸಂಖ್ಯೆ 42/2021(ಕಸ್ಟಮ್ಸ್) ಮೂಲಕ (i) ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು 2021 ಸೆಪ್ಟೆಂಬರ್ 11ರಿಂದ ಜಾರಿಗೆ ಬರುವಂತೆ 2.5%ಗೆ ಹಾಗೂ (ii) ಸಂಸ್ಕರಿಸಿದ ತಾಳೆ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ ಸುಂಕವನ್ನು 11.09.2021ರಿಂದ ಜಾರಿಗೆ ಬರುವಂತೆ 32.5% ಗೆ ಇಳಿಸಿದೆ.

oil rate

ಇದೇ ಅಧಿಸೂಚನೆಯಲ್ಲಿ ಕಚ್ಚಾ ತಾಳೆ ಎಣ್ಣೆಯ ಮೇಲಿನ ಕೃಷಿ ಸೆಸ್ ಅನ್ನು ಶೇ.17.5ರಿಂದ ಶೇ.20ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರವು 2021 ಸೆಪ್ಟೆಂಬರ್ 10ರ ಅಧಿಸೂಚನೆ ಸಂಖ್ಯೆ 43/2021(ಕಸ್ಟಮ್ಸ್) ಮೂಲಕ ಹಣಕಾಸು ಸಚಿವಾಲಯದ (ಕಂದಾಯ ಇಲಾಖೆ), 2021 ಜೂನ್ 29ರ ಅಧಿಸೂಚನೆ ಸಂಖ್ಯೆ 34/2021( ಕಸ್ಟಮ್ಸ್) ಅನ್ನು ರದ್ದುಗೊಳಿಸಿದೆ. ಆದರೆ, ಈ ರದ್ದತಿಗೆ ಮೊದಲು ಮಾಡಲಾದ ಅಥವಾ ಕೈಬಿಡಲಾದ ಅಂಶಗಳಿಗೆ ಇದು ಅನ್ವಯವಾಗುವುದಿಲ್ಲ. ಆ ಮೂಲಕ ಇತ್ತೀಚಿನ ಆಮದು ಸುಂಕ (11.09.2021ರಿಂದ ಅನ್ವಯವಾಗುವಂತೆ) ಮುಂದಿನ ಆದೇಶಗಳವರೆಗೆ ಇನ್ನೂ ಜಾರಿಯಲ್ಲಿರಲಿದೆ.

2021-22ರ ಅವಧಿಯಲ್ಲಿ ಅಂತರರಾಷ್ಟ್ರೀಯ ಖಾದ್ಯ ತೈಲಗಳ ಬೆಲೆಗಳು ಗಗನಕ್ಕೇರಿದ್ದು, ಆ ಮೂಲಕ ಖಾದ್ಯ ತೈಲಗಳ ದೇಶೀಯ ಬೆಲೆಗಳ ಹೆಚ್ಚಳಕ್ಕೂ ಕಾರಣವಾಗಿದ್ದು ಗಮನಾರ್ಹ. ಇದು ಹಣದುಬ್ಬರ ಮತ್ತು ಗ್ರಾಹಕರ ದೃಷ್ಟಿಕೋನದಿಂದ ಗಂಭೀರ ಕಳವಳಕ್ಕೆ ಕಾರಣವಾಯಿತು. ಖಾದ್ಯ ತೈಲಗಳ ಮೇಲಿನ ಆಮದು ಸುಂಕವು ಖಾದ್ಯ ತೈಲಗಳ ವೆಚ್ಚದ ಮೇಲೆ ಮತ್ತು ಆ ಮೂಲಕ ಮೂಲಕ ದೇಶೀಯ ಬೆಲೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

ಈ ಬೆಲೆಗಳ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ, ಭಾರತ ಸರ್ಕಾರವು ಫೆಬ್ರವರಿ 2021 ಮತ್ತು ಆಗಸ್ಟ್ 2021ರ ನಡುವೆ ಸರಣಿ ಕ್ರಮಗಳನ್ನು ಕೈಗೊಂಡಿತ್ತು.

ಅವುಗಳಲ್ಲಿ ಈ ಕೆಲವು ಸೇರಿವೆ:
1. ಆಮದು ಸುಂಕದ ಪುನರ್‌ವ್ಯವಸ್ಥೆ (ಸುಧಾರಣೆ)
ಸರ್ಕಾರವು ದಿನಾಂಕ 29 ಜೂನ್, 2021ರ ಅಧಿಸೂಚನೆ ಸಂಖ್ಯೆ 34/2021 (ಕಸ್ಟಮ್ಸ್) ಮೂಲಕ ಕಚ್ಚಾ ತಾಳೆ ಎಣ್ಣೆಯ ಮೇಲಿನ ಸುಂಕವನ್ನು 30.06.2021ರಿಂದ 10%ಗೆ ಇಳಿಸಿದೆ . ಇದು 30 ಸೆಪ್ಟೆಂಬರ್, 2021ರವರೆಗೆ ಅನ್ವಯವಾಗಲಿದೆ.

2) ಸರ್ಕಾರವು, 2021ರ ಜೂನ್ 30ರ ಡಿಜಿಎಫ್‍ಟಿ’ಯ ಅಧಿಸೂಚನೆ ಸಂಖ್ಯೆ 10/2015-2020 ಮೂಲಕ ಸಂಸ್ಕರಿತ ತಾಳೆ ಎಣ್ಣೆಯ ಆಮದು ನೀತಿಯನ್ನು ತಿದ್ದುಪಡಿ ಮಾಡಿತು. ತಕ್ಷಣದಿಂದ ಜಾರಿಗೆ ಬರುವಂತೆ ತಾಳೆ ಎಣ್ಣೆಯ ಆಮದನ್ನು “ನಿರ್ಬಂಧಿತ” ಸ್ಥಿತಿಯಿಂದ “ಮುಕ್ತ” ಸ್ಥಿತಿಗೆ ಬದಲಾಯಿಸಲಾಯಿತು. ಇದು 31.12.2021ರ ವರೆಗೆ ಜಾರಿಯಲ್ಲಿರಲಿದೆ.

ಇದಲ್ಲದೆ, ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಕೇರಳದ ಯಾವುದೇ ಬಂದರಿನ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.
3) ಸರ್ಕಾರವು ದಿನಾಂಕ 19 ಆಗಸ್ಟ್ 2021ರ ಅಧಿಸೂಚನೆ ಸಂಖ್ಯೆ 40/2021- (ಕಸ್ಟಮ್ಸ್) ಮೂಲಕ ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು ಶೇ.7.5ಕ್ಕೆ ಮತ್ತು ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು 20.08.2021ರಿಂದ ಜಾರಿಗೆ ಬರುವಂತೆ ಶೇ.37.5ಕ್ಕೆ ಇಳಿಸಿದೆ. ದಿನಾಂಕ ಜೂನ್ 29, 2021ರ ಹಣಕಾಸು ಸಚಿವಾಲಯದ (ಕಂದಾಯ ಇಲಾಖೆ) ಅಧಿಸೂಚನೆಗೆ(ಸಂಖ್ಯೆ: 34/2021-ಕಸ್ಟಮ್ಸ್) ತಿದ್ದುಪಡಿ ಮೂಲಕ ಈ ಇಳಿಕೆ ಮಾಡಲಾಗಿದೆ.

4) ಅಬಕಾರಿ, ಎಫ್.ಎಸ್.ಎಸ್, ಎ.ಐ, ಪಿಪಿ & ಕ್ಯೂ, ಡಿ.ಎಫ್.ಪಿ.ಡಿ ಮತ್ತು ಡಿ.ಒ.ಸಿ.ಎಗಳಿಂದ ವಿವಿಧ ಬಂದರಿನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಇದನ್ನೂ ಓದಿ: ನೈಟ್ ಕರ್ಫ್ಯೂ ಹೊತ್ತಲ್ಲಿ ಯುವಜನತೆಯ ಮೋಜು ಮಸ್ತಿ – ಪೊಲೀಸರ ಮುಂದೆಯೇ ಬಿಂದಾಸ್ ಸುತ್ತಾಟ

5) ಕೋವಿಡ್-19 ಕಾರಣದಿಂದಾಗಿ ಆಮದು ಮಾಡಿಕೊಂಡ ಖಾದ್ಯ ತೈಲಗಳ ಸಾಗಣೆಯಲ್ಲಿ ಆಗಿರುವ ವಿಳಂಬವನ್ನು ಸರಿಪಡಿಸಿ, ಸರಬರಾಜು ತ್ವರಿತಗೊಳಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ), ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಪ್ಲಾಂಟ್ ಕ್ವಾರಂಟೈನ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಗ್ರಾಹಕ ವ್ಯವಹಾರಗಳು ಮತ್ತು ಅಬಕಾರಿ ಇಲಾಖೆಗಳು ಈ ಸಮಿತಿಯ ಭಾಗವಾಗಿವೆ. ಈ ಸಮಿತಿಯು ವಾರಕ್ಕೊಮ್ಮೆ ಆಮದು ಮಾಡಿದ ಖಾದ್ಯ ತೈಲಗಳ ಸರಕುಗಳನ್ನು ಪರಿಶೀಲಿಸಿ, ಕಾರ್ಯದರ್ಶಿ (ಆಹಾರ) ಅಧ್ಯಕ್ಷತೆಯ ‘ಕೃಷಿ ಸರಕುಗಳ ಅಂತರ ಸಚಿವಾಲಯ ಸಮಿತಿ’ಗೆ ವರದಿ ನೀಡುತ್ತದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications