ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಇಳಿಕೆಯಾಗುತ್ತಿದ್ದಂತೆ ಗೃಹಬಳಕೆಯ ಸಬ್ಸಿಡಿ ಸಹಿತ ಸಿಲಿಂಡರಿನ ದರ 6.52 ರೂಪಾಯಿಯಷ್ಟು ಇಳಿಕೆಯಾಗಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಗೃಹಬಳಕೆಯ ಸಿಲಿಂಡರಿನ ದರವನ್ನು ಕಡಿತಗೊಳಿಸಿದೆ. ಪರಿಷ್ಕೃತ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
Advertisement
Advertisement
14.2 ಕೆಜಿ ಸಿಲಿಂಡರಿನ ಬೆಲೆ 507.42 ರೂಪಾಯಿ ಆಗಿದ್ದು, ದರ ಇಳಿಕೆಯಿಂದ 500.90 ರೂಪಾಯಿ ಆಗಿದೆ. ಸಬ್ಸಿಡಿ ಸಿಲಿಂಡರಿನ ದರಗಳು ಏರಿಳಿಕೆ ಕಾಣುತ್ತಲೇ ಇರುತ್ತವೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲೂ 133 ರೂಪಾಯಿ ಇಳಿಕೆಯಾಗಿದೆ. ಪ್ರತಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ದೆಹಲಿ ಮಾರುಕಟ್ಟೆಗೆ ಈ ಮೊದಲು 942.50 ರೂಪಾಯಿ ಇತ್ತು. ನೂತನ ದರ ಪರಿಷ್ಕರಣೆಯಿಂದಾಗಿ 809.50 ರೂಪಾಯಿಗೆ ಇಳಿದಿದೆ.
Advertisement
ಸಬ್ಸಿಡಿ ಸಹಿತ ಸಿಲಿಂಡರ್ ಪಡೆದ ಗ್ರಾಹಕರ ಖಾತೆಗೆ ಡಿಸೆಂಬರ್ ತಿಂಗಳಿನಲ್ಲಿ 308.60 ರೂ. ಜಮೆ ಆಗಲಿದ್ದರೆ, ನವೆಂಬರ್ ನಲ್ಲಿ 433.66 ರೂ. ಜಮೆ ಆಗಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv