ಮೈಸೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಇದೀದ ಪ್ರಮುಖ ಆರೋಪಿ ಶಾರೀಕ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
Advertisement
ಶಂಕಿತ ಉಗ್ರನಿಗೆ ಮೈಸೂರಿ (Mysuru) ನಲ್ಲಿ ರೂಂ ಬಾಡಿಗೆ ನೀಡಿದ್ದ ಮನೆ ಮಾಲೀಕನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಂಕಿತ ಉಗ್ರನಿಗೆ ಮೊಬೈಲ್ (Mobile) ಗಳನ್ನು ನೀಡಿದ್ದ ಮೊಬೈಲ್ ಅಂಗಡಿ ಮಾಲೀಕ ಹಾಗೂ ಅಂಗಡಿಯಲ್ಲಿದ್ದ ಇನ್ನೊಬ್ಬ ನೌಕರ ಕೂಡ ವಶಕ್ಕೆ ಪಡೆಯಲಾಗಿದೆ. ಮೈಸೂರು ಪೊಲೀಸರು ಮೂವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರ ಪೋಲಿಸ್ ಆಯುಕ್ತ ರಮೇಶ್ ಮಂಗಳೂರಿಗೆ ತೆರಳಿದ್ದಾರೆ. ಇದನ್ನೂ ಓದಿ: ಗ್ರಾಮ ದೈವಗಳೇ ನಮ್ಮ ಊರನ್ನು ಕಾಪಾಡಿವೆ- ಕುಕ್ಕರ್ ಬ್ಲಾಸ್ಟ್ ಆದ ಆಟೋ ಚಾಲಕನ ಸಹೋದರನ ಮಾತು
Advertisement
Advertisement
ಇತ್ತ ಶಾರಿಕ್ (Shariq) ಜೊತೆಗೆ ನಿರಂತರ ಸಂಪರ್ಕ ಇದ್ದ ಮೂವರು ಶಂಕಿತರು ವಶಕ್ಕೆ ಪಡೆಯಲಾಗಿದ್ದು, ಏನೆಲ್ಲಾ ಮಾತನಾಡಿದ್ರು. ಬೇರೆ ಏನಾದ್ರು ವಿಚಾರಗಳು ತಿಳಿದಿವೆಯಾ ಎಂದು ವಿಚಾರಣೆ ನಡೆಸಲಗುತ್ತಿದೆ. ಶಾರಿಕ್ ಜೊತೆಗೆ ಯಾಕೆ ನಿರಂತರ ಸಂಪರ್ಕದಲ್ಲಿ ಇದ್ದರು. ಏನಾದ್ರು ಸಹಾಯ ಮಾಡಲಾಗಿದೆಯಾ…? ಹೀಗೆ ಬೇರೆ ಬೇರೆ ಆಯಾಮದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಶಿವಮೊಗ್ಗ ಕೇಸ್ ಹಾಗೂ ಮಂಗಳೂರು ಬ್ಲಾಸ್ಟ್ ಕೇಸ್ ಎರಡೂ ಇಂಟರ್ ಲಿಂಕ್ ಆಗಿದೆ. ಪ್ರಕರಣ ಸಂಬಂಧ ಶಿವಮೊಗ್ಗದಲ್ಲಿ ಮೂರು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪಬ್ಲಿಕ್ ಟಿವಿಗೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.