ಮಂಗಳೂರು: ದೈವಕ್ಕೆ ಗಂಧಪ್ರಸಾದವನ್ನು ತಯಾರು ಮಾಡಿಕೊಡುವ ಕೆಲಸವನ್ನು ನಮ್ಮ ಕುಟುಂಬ ಮಾಡುತ್ತಿದೆ. ಹೀಗಾಗಿ ಗ್ರಾಮದ ದೈವಗಳೇ ನಮ್ಮ ಊರನ್ನು ಕಾಪಾಡಿವೆ. ಮಂಗಳೂರಿನಲ್ಲಿ ನಡೆಯಬಹುದಾಗಿದ್ದ ಒಂದು ದೊಡ್ಡ ಅನಾಹುತವನ್ನು ತಪ್ಪಿಸಿವೆ ಎಂದು ಕುಕ್ಕರ್ ಬ್ಲಾಸ್ಟ್ (Cooker Blast) ಆದ ಆಟೋ ಚಾಲಕನ ಸಹೋದರ ಹೇಳಿದ್ದಾರೆ.
Advertisement
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ (Mangaluru Cooker Bomb Blast) ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಆಟೋ ಚಾಲಕ ಪುರುಷೋತ್ತಮ್ ಸಹೋದರ ನಾಗೇಶ್ ಮಾತನಾಡಿ, ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ದೊಡ್ಡ ಮಗಳಿಗೆ ಮೇ ತಿಂಗಳಲ್ಲಿ ಮದುವೆ ಫಿಕ್ಸ್ ಆಗಿದೆ. ಪುರುಷೋತ್ತಮ್ ಹಾರ್ಟ್ ಪೇಷಂಟ್ (Heart Patient) ಅವರಿಗೆ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್‌ಗೆ ನಿಷೇಧಿತ PFI ಲಿಂಕ್ – ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್
Advertisement
Advertisement
ಫ್ಯಾಮಿಲಿಯಿಂದ ಒಬ್ಬರನ್ನು ಮಾತ್ರ ಆಸ್ಪತ್ರೆಯ ಒಳಗೆ ಬಿಡುತ್ತಾರೆ. ಪೊಲೀಸ್ ಅಧಿಕಾರಿಗಳ ತನಿಖೆ ಆಗುವ ತನಕ ರಿಕ್ಷಾ ಕೂಡ ವಾಪಸ್ ಸಿಗುವುದು ಕಷ್ಟ. ಪುರುಷೋತ್ತಮ್ ಗೆ ಓಪನ್ ಹಾರ್ಟ್ ಸರ್ಜರಿಯಾಗಿತ್ತು. ಈಗ ಮೂರ್ ನಾಲ್ಕು ತಿಂಗಳಿಂದ ಆಟೋರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಗ್ರಾಮದೈವ ಮಹಾಕಾಳಿ ಮತ್ತು ಕೊರಗಜ್ಜ ನಮ್ಮನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಿದರು.
Advertisement
ನಮ್ಮ ಕುಟುಂಬ ಸನ್ನಿಧಾನದಲ್ಲಿ ಬೂಳ್ಯ ಕೊಡುವ ಕೆಲಸ ಮಾಡುತ್ತಿದೆ. ದೈವಸ್ಥಾನದ ಚಾಕರಿ ಮಾಡುವ ಕೆಲಸವನ್ನು ಮಾಡುತ್ತಾ ಬರುತ್ತಿದ್ದೇವೆ. ನಮ್ಮನ್ನ ಕಾಪಾಡಿದ್ದು, ದೊಡ್ಡ ಅನಾಹುತವನ್ನು ತಪ್ಪಿಸಿದ್ದು ಕೂಡ ಆ ದೈವಗಳೇ ಎಂದು ನಾಗೇಶ್ ತಿಳಿಸಿದರು.