ಬೆಂಗಳೂರು/ಮಂಗಳೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೆ ಮಹತ್ವದ ವಿಚರವೊಂದು ಸಿಕ್ಕಿದೆ. ಶಂಕಿತ ಶಾರೀಕ್‍ನಿಂದ ಸಹೋದರಿಯರ ಅಕೌಂಟ್ (Sisters Bank Account) ಗೆ ಲಕ್ಷ ಲಕ್ಷ ಹಣ ಹೋಗಿರುವುದು ಬಯಲಾಗಿದೆ.
ಇಷ್ಟೊಂದು ಹಣ ಶಾರೀಕ್‍ಗೆ ಬರುತ್ತಿದ್ದಿದ್ದು ಎಲ್ಲಿಂದ..?, ಭಾರತವನ್ನು ಟಾರ್ಗೆಟ್ ಮಾಡಿ ವಿದೇಶದಿಂದ ಫಂಡಿಂಗ್ ಮಾಡಲಾಗ್ತಿದ್ಯಾ..?, ಶಾರೀಕ್‍ಗೂ ವಿದೇಶದಿಂದಲೇ ಫಂಡಿಂಗ್ ಎಂಬ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ; ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಮಾಸ್ಟರ್ ಪ್ಲಾನ್- ಶಾರಿಕ್ ವಿಚಾರಣೆಗೆ ಎನ್‍ಐಎ ಸಿದ್ಧತೆ
ಈಗಾಗಲೇ ಅರಾಫತ್ ಕೂಡ ದುಬೈ (Dubai) ನಲ್ಲಿ ನೆಲೆ ಊರಿದ್ದಾನೆ. ಭಾರತವನ್ನು ಟಾರ್ಗೆಟ್ ಮಾಡೋದಕ್ಕೆ ವಿದೇಶದಿಂದ ಮೊದಲಿಂದಲೂ ಫಡಿಂಗ್ ಆಗ್ತಿದೆ. ಈಗಲೂ ಕೂಡ ಅದೇ ವಿಚಾರದಲ್ಲಿ ಫಡಿಂಗ್ ಆಗಿದೆ ಅನ್ನೋ ಅನುಮಾನ ಶುರುವಾಗಿದೆ. ಹೀಗಾಗಿ ಪೊಲೀಸರು ಈ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಇತ್ತ ಮಂಗಳೂರಿನ ಆತ್ಮಾಹುತಿ ಬಾಂಬ್ ಹಿಂದಿನ ರಹಸ್ಯ ಬಯಲಾಗಿದ್ದು, ತನ್ನ ಸ್ನೇಹಿತ ಮಾಝ್ ಬಂಧನ ಸಹಿಸಲಾಗದೇ ಶಾರೀಕ್ ಈ ಕೃತ್ಯ ಎಸಗಿದ್ದಾನೆ. ಜಬೀವುಲ್ಲಾನ ಬಂಧನ ಬಳಿಕ ಯಾಸೀನ್, ಮಾಝ್‍ನನ್ನು ಬಂಧಿಸಲಾಗಿತ್ತು. ಈ ಮೂವರು ಸೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ರು. ಮಾಝ್ ಬಂಧನ ಬೆನ್ನಲ್ಲೇ ಶಾರೀಕ್ ಪ್ರತೀಕಾರಕ್ಕೆ ಇಳಿದಿದ್ದ. ಅಲ್ಲದೇ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಈ ಮೂವರು ಹೊಂದಿದ್ದರು ಎಂಬುದಾಗಿ ತಿಳಿದುಬಂದಿದೆ.