ಕೇವಲ 17,000 ಜನಸಂಖ್ಯೆ ಇರುವ ಕುಕ್‌ ಐಲ್ಯಾಂಡ್‌ ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ!

Public TV
1 Min Read
island

ವಿಲ್ಲಿಂಗ್‌ಟನ್‌: ಹತ್ತಿರತ್ತಿರ ಕಳೆದ ಎರಡು ವರ್ಷಗಳಿಂದ ಕೊರೊನಾ ವೈರಸ್‌ ಸಾಂಕ್ರಾಮಿಕ ನಾನಾ ರೂಪಾಂತರಗಳೊಂದಿಗೆ ವಿಶ್ವವನ್ನು ಕಾಡುತ್ತಿದೆ. ಕೋವಿಡ್‌ ಹೊಡೆತಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲೂ ಐಲ್ಯಾಂಡ್‌ ದೇಶವೊಂದರಲ್ಲಿ ಎರಡು ವರ್ಷಗಳ ನಂತರ ಮೊಟ್ಟ ಮೊದಲ ಕೋವಿಡ್‌ ಪ್ರಕರಣ ವರದಿಯಾಗಿದೆ.

ಹೌದು, ದಕ್ಷಿಣ ಫೆಸಿಫಿಕ್‌ ಭಾಗದ ಅಂಚಿನಲ್ಲಿರುವ ಕುಕ್‌ ಐಲ್ಯಾಂಡ್‌ ದೇಶದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್‌-19 ಪ್ರಕರಣವೊಂದು ದೃಢಪಟ್ಟಿದೆ. ಇದನ್ನೂ ಓದಿ: ಓಮಿಕ್ರಾನ್‌: ದಕ್ಷಿಣ ಆಫ್ರಿಕಾದಿಂದ ಆಗಮಿಸಿ ನಾಪತ್ತೆಯಾಗಿದ್ದ 10 ಮಂದಿಯಲ್ಲಿ 9 ಪ್ರಯಾಣಿಕರು ಪತ್ತೆ

CORONA 3 1

ಈ ದೇಶದಲ್ಲಿರುವ ಜನಸಂಖ್ಯೆ ಕೇವಲ 17,000. ಜಾಗತಿಕವಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಪಡೆದ ದೇಶಗಳ ಪಟ್ಟಿಯಲ್ಲಿ ಕುಕ್‌ ಐಲ್ಯಾಂಡ್‌ ಕೂಡ ಸೇರಿದೆ. ಈ ದೇಶದಲ್ಲಿ ಶೇ. 96 ರಷ್ಟು ಮಂದಿ ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ.

ಕುಟುಂಬದವರೊಂದಿಗೆ ದೇಶಕ್ಕೆ ವಿಮಾನದಲ್ಲಿ ಬಂದಿಳಿದಿದ್ದ 10 ವರ್ಷದ ಬಾಲಕನಿಗೆ ಕೋವಿಡ್‌ ದೃಢಪಟ್ಟಿದೆ. ಬಾಲಕನನ್ನು ಕ್ವಾರಂಟೈನ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ನ್ಯೂಜಿಲೆಂಡ್‌ನಿಂದ ಬಂದಿದ್ದಾರೆ ಎನ್ನಲಾಗಿದೆ ಎಂದು ಪ್ರಧಾನಿ ಮಾರ್ಕ್‌ ಬ್ರೌನ್‌ ತಿಳಿಸಿದ್ದಾರೆ. ಇದನ್ನೂ ಓದಿ: ವೀಡಿಯೋ: ಏರ್‌ ಪೋರ್ಟ್‍ನಲ್ಲಿ ಸ್ವಾಗತಿಸಲು ಬಂದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ತಾಯಿ!

FotoJet 9 2

ಕೊರೊನಾ ಸಾಂಕ್ರಾಮಿಕ ಕಾಣಿಸಿಕೊಂಡ ನಂತರ ಈ ದೇಶದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿಕೊಂಡಿತ್ತು. ಈಗ ಮತ್ತೆ ನ್ಯೂಜಿಲೆಂಡ್‌ನೊಂದಿಗೆ ಜ.14ರಿಂದ ವಿಮಾನ ಪ್ರಯಾಣಕ್ಕೆ ಅವಕಾಶ ಕಲ್ಪಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *