ಜಕಾರ್ತ: ಇಂಡೋನೇಷ್ಯಾ ಸಂಸ್ಥಾಪಕ ಪಿತಾಮಹ ಮತ್ತು ಮೊದಲ ಅಧ್ಯಕ್ಷ ಸುಕರ್ಣೋ ಅವರ ಮೂರನೇ ಪುತ್ರಿ ಸುಕ್ಮಾವತಿ ಸುಕರ್ಣೋ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದುದಾಗಿ ಘೋಷಿಸಿದ್ದಾರೆ.
ಅಜ್ಜಿ ದಿವಂಗತ ಇಡಾ ನ್ಯೋಮನ್ ರೈ ಶ್ರಿಂಬೆನ್ ಅವರ ಪ್ರಭಾವವೇ ಸುಕ್ಮಾವತಿ ಮತಾಂತರಕ್ಕೆ ಪ್ರಮುಖ ಎನ್ನಲಾಗುತ್ತಿದೆ. ಇಂಡೋನೇಷ್ಯಾ ನ್ಯಾಷನಲ್ ಪಾರ್ಟಿ ಸಂಸ್ಥಾಪಕಿಯೂ ಸುಕ್ಮಾವತಿ ಆಗಿದ್ದಾರೆ. ಅಕ್ಟೋಬರ್ 26ರಂದು ಸುಕ್ಮಾವತಿಯವರು ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಬಾಲಿ ಅಗುಂಗ್ ಸಿಂಗರಾಜದಲ್ಲಿ ಸುಧಿ ವಡಾನಿಯು ಹೆಸರಿನ ಹಿಂದೂ ಸಮಾರಂಭ ಆಯೋಜಿಸಲಾಗಿದ್ದು, ಇಲ್ಲೇ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ. ಉತ್ತರ ಬಾಲಿಯಲ್ಲಿರುವ ತನ್ನ ಅಜ್ಜಿಯ ಮನೆಯ ಬಳಿ ನಿರ್ಮಿಸಲಾದ ಆಕೆಯ ದಿವಂಗತ ತಂದೆಯ ಸ್ಮಾರಕವೂ ಇದೆ. ಇನ್ನು ಮತಾಂತರ ಸಮಾರಂಭ ಆಯೋಜಿಸಲಾದ ದಿನದಂದು ಸುಕ್ಮಾವತಿ ತಮ್ಮ 70 ನೇ ಹುಟ್ಟುಹಬ್ಬವನ್ನೂ ಆಚರಿಸಲಿದ್ದಾರೆ. ಇದನ್ನೂ ಓದಿ: ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!
Advertisement
Advertisement
ಸುಕ್ಮಾವತಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರಕ್ಕೆ ಸುಕ್ಮಾವತಿ ಸಹೋದರರು ಮತ್ತು ಸಹೋದರಿ, ಮಾಜಿ ಅಧ್ಯಕ್ಷೆ ಮೇಗಾವತಿ ಸೂಕರ್ಣಪುತ್ರಿ, ಗುಂಟೂರು ಸೂಕರ್ಣಪುತ್ರ ಮತ್ತು ಗುರು ಸೂಕರ್ಣಪುತ್ರ ಒಪ್ಪಿಗೆ ಇದೆ ಎನ್ನಲಾಗಿದೆ. ಈ ಮತಾಂತರವನ್ನು ಆಕೆಯ ಮಕ್ಕಳೂ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!
Advertisement
Advertisement
ಕಂಜೆಂಗ್ ಗುಸ್ತಿ ಪಂಗೆರನ್ ಅದಿಪತಿ ಆರ್ಯ ಮಂಗ್ಕುನೆಗೆರಾ ಅವರನ್ನು ವಿವಾಹವಾಗಿದ್ದ ಸುಕ್ಮಾವತಿ 1948ರಲ್ಲಿ ವಿಚ್ಛೇದನ ಪಡೆದಿದ್ದರು. 2018ರಲ್ಲಿ ಇಂಡೋನೇಷ್ಯಾ ಫ್ಯಾಷನ್ ವೀಕ್‍ನಲ್ಲಿ ಕವನವೊಂದನ್ನು ಓದುತ್ತಾ, ಇಲ್ಲಿನ ಮುಸ್ಲಿಮರು ಧರಿಸುವ ದುಪ್ಪಟಾಗಿಂತ ಸಾಂಪ್ರದಾಯಿಕ ಹೇರ್‍ಬನ್ ಹೆಚ್ಚು ಸುಂದರವಾಗಿದೆ ಎಂದಿದ್ದರು. ಇದು ಭಾರೀ ವಿವಾದಕ್ಕೀಡಾಗಿ ಇಂಡೋನೇಷ್ಯಾ ಮುಸ್ಲಿಮರ ಕ್ಷಮೆಯಾಚಿಸಿದ್ದರು.