ಬೆಂಗಳೂರು: ಸಿಲಿಕಾನ್ ಸಿಟಿಯ ಕೊಡಿಗೆಹಳ್ಳಿಯ ಗೂಡಾಂಜನೇಯ ದೇವಸ್ಥಾನದಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ದೇವಾಲಯದ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿ ಕೆಲಕಾಳ ಗಲಾಟೆಯೂ ನಡೆಯಿತು.
ಎನ್‍ಜಿಓವೊಂದರ ಸದಸ್ಯರು ನಾಲ್ಕು ದಿನಗಳಿಂದ ಸುಮಾರು ಮೂವತ್ತರಿಂದ ನಲವತ್ತು ಜನರನ್ನು ದೇವಾಸ್ಥಾನದ ಕಲ್ಯಾಣ ಮಂಟಪದಲ್ಲಿ ಕೂಡಿಹಾಕಿದ್ದಾರೆ. ಸ್ಥಳೀಯ ಜನ ಇದ್ರಿಂದ ಕುತೂಹಲಗೊಂಡು ನೋಡಿದಾಗ ಕ್ರಿಶ್ಚಿಯನ್ ಮತದ ಭೋದನೆ ನಡೆಯತ್ತಿತ್ತು ಅಂತಾ ಆರೋಪಿಸಿ ಕಲ್ಯಾಣಮಂಟಪದ ಬಾಗಿಲು ಮುರಿದು ಒಳಹೊಕ್ಕು ಗಲಾಟೆ ಮಾಡಿದ್ದಾರೆ. ಅಲ್ಲಿದ್ದ ಎನ್‍ಜಿಓ ದವರ ಮೇಲೆಯೂ ಹಲ್ಲೆ ನಡೆಸಿದ್ದಾರೆ.
ಸರ್ಕಾರ ಹಾಗೂ ನಾವು ಜಂಟಿಯಾಗಿ ಜೀತಕ್ಕಿಟ್ಟ ಕಾರ್ಮಿಕರನ್ನು ರಕ್ಷಿಸಿ ಇಲ್ಲಿ ಕರೆತಂದಿದ್ದೇವೆ. ಒರಿಸ್ಸಾಗೆ ರೈಲು ಸಿಗದ ಕಾರಣ ಇಲ್ಲಿ ಇಟ್ಟಿದ್ದೇವೆ ಅಂತಾ ಎನ್‍ಜಿಓ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಜನರು ಮಾತ್ರ ನಂಬೋದಕ್ಕೆ ತಯಾರಿರಲಿಲ್ಲ, ಜಿಲ್ಲಾಡಳಿತದ ಅಧಿಕಾರಿಗಳು ಕೂಡ ಇವರು ಕಾರ್ಮಿಕರನ್ನು ರಕ್ಷಣೆ ಮಾಡಿ ಇಲ್ಲಿ ಇಟ್ಟಿದ್ದೇವೆ. ಮತಾಂತರ ನಡೆದ್ರೇ ತನಿಖೆ ನಡೆಸುತ್ತೇವೆ ಅಂತಾ ತಿಳಿಸಿದ್ದಾರೆ.