Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘ ಸ್ನಾನ ಮಾಡೋದು ಅವಮಾನದ ಲಕ್ಷಣ: ಹೆಗ್ಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘ ಸ್ನಾನ ಮಾಡೋದು ಅವಮಾನದ ಲಕ್ಷಣ: ಹೆಗ್ಡೆ

Bengaluru City

ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘ ಸ್ನಾನ ಮಾಡೋದು ಅವಮಾನದ ಲಕ್ಷಣ: ಹೆಗ್ಡೆ

Public TV
Last updated: February 18, 2018 3:39 pm
Public TV
Share
3 Min Read
HEGDE
SHARE

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಭಾಷೆಯ ಕುರಿತಂತೆ ನೀಡಿದ್ದ ಹೇಳಿಕೆ ಸುದ್ದಿಯಾಗುತ್ತಿದ್ದಂತೆಯೇ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಸ್ಪಷ್ಟನೆ ನೀಡಿದ್ದಾರೆ.

ಭಾಷೆಯ ಕುರಿತು ಮಾತನಾಡಿದರ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನಿಡಿದ್ದಾರೆ. ಅಲ್ಲದೇ ಅದರ ಜೊತೆಗೆ ಒಂದು ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.

ಫೇಸ್‍ಬುಕ್ ನಲ್ಲಿ ಬರೆದುಕೊಂಡಿರೋದೇನು?: ಮಾತೃ ಭಾಷೆಯ ಉಳಿವು ಪ್ರಶ್ನೆಯಲ್ಲ. ಬದಲಿಗೆ ಇಂದು ಅವು ಗಟ್ಟಿಯಾಗಿ ಇನ್ನು ಹಲವಾರು ತಲೆಮಾರಿಗೆ ಶ್ರೀಮಂತವಾಗಿ ಧಾರೆಯೆರೆಯುವ ಒಂದು ಸುವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಿದೆ. ಇಂದು ಬಹುತೇಕ ಭಾಷೆಯ ಬಗ್ಗೆ ಹೋರಾಟ ಕೇವಲ ವೈಯಕ್ತಿಕ ಮತ್ತು ರಾಜಕೀಯ ಕೀಳು ದೊಂಬರಾಟವಾಗಿ ಮಾರ್ಪಟ್ಟಾಗಿರುವುದು ಪ್ರಸ್ತುತ ನಮ್ಮ ಸಮಾಜದ ಒಂದು ದೊಡ್ಡ ದುರಂತ. ಆಂಗ್ಲ ಮಾಧ್ಯಮದ ಪ್ರಭಾವ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆ. ಶುದ್ಧವಾಗಿ ಕನ್ನಡ ಭಾಷೆ ಮಾತನಾಡುವುದು ಸಹ ಇಂದು ಒಂದು ಅಪರೂಪದ ಕಲೆಯಾಗಿ ನೋಡಲಾಗುತ್ತಿದೆ ಮತ್ತು ಇಂದಿನ ತಲೆಮಾರಿನ ಹಲವರಿಗೆ ಶುದ್ಧ ಕನ್ನಡ ಅರ್ಥವಾಗದಿರುವ ಭಾಷೆಯು ಹೌದು. ಕನ್ನಡ ಸಂಭಾಷಣೆಯಲ್ಲಿ ಆಂಗ್ಲ ಮತ್ತು ಇನ್ನಿತರ ಭಾಷೆಯ ಕಲಸು ಮಿಶ್ರಿತ ಮಾಡದಿದ್ದರೆ ಸಂವಹನ ಪೂರ್ಣಗೊಳ್ಳುವುದಿಲ್ಲ ಮತ್ತು ಅದು ಒಂದು sಣಚಿಣus ನಿರ್ಮಾಣ ಮಾಡುವುದಿಲ್ಲವೆನ್ನುವುದು ಸಹ ಇಂದಿನ ಹದೆಗೆಟ್ಟ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದು ಹೆಚ್ಚಾಗಿ ಬೆಂಗಳೂರು ನಗರದಲ್ಲಿ ಕಂಡು ಬರುತ್ತಿದ್ದ ಒಂದು ನಕಾರಾತ್ಮಕ ಬೆಳವಣಿಗೆ. ಇಂದು ಬೇರೆ ಗ್ರಾಮಾಂತರ ಹಳ್ಳಿ- ಪಟ್ಟಣಗಳಿಗೆ ಸಹ ದಟ್ಟವಾಗಿ ವ್ಯಾಪಿಸುತ್ತಿದೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ತಿರುಗಿ ಬಿದ್ದ ಶಾಸಕ ಸುರೇಶ್ ಕುಮಾರ್

ಭಾಷೆಯ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಮೆರೆಯಬೇಕಾದವರು ಇಂದು ಅದನ್ನು ಕಡೆಗಣಿಸುತ್ತಿದ್ದೇವೆ. ಇಂದು ಹಲವಾರು ಭಾರತೀಯರ ಮನೆಮಾತು ಆಂಗ್ಲ ಭಾಷೆಯಾಗಿ ಬದಲಾಗಿದೆ. ಹಾಗಾದರೆ ನಮ್ಮ ಎಲ್ಲ ಭಾರತೀಯ ಭಾಷೆಗಳು ನಮ್ಮ ಇಂದಿನ ಸ್ಥಿತಿ-ಗತಿಗೆ ಸಮರ್ಥವಲ್ಲವೇ? ನಮ್ಮ ಕನ್ನಡದಷ್ಟು ವೈವಿಧ್ಯ ಚೆಲುವನ್ನು ಇನ್ನೆಲ್ಲಿ ಕಾಣಲು ಸಾಧ್ಯ? ನಗರಗಳಲ್ಲಿ ಇಂದು ಅಂತರರಾಷ್ಟ್ರೀಯ ಶಾಲೆಗಳಲ್ಲಿ ನಮ್ಮ ಮಾತೃ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಐರೋಪ್ಯ ಭಾಷೆಗಳ ಹೇರಿಕೆ ನಡೆಯುತ್ತಿದೆ. ಈ ಭಾಷೆಗಳು ಇಂದು ಯುರೋಪ್ ಖಂಡದ ಆಯಾ-ಪ್ರದೇಶ ದೇಶಗಳಲ್ಲೇ ಅವನತಿಯತ್ತ ಸಾಗುತ್ತಿದೆ. ಮೂಲ ಜನಸಂಖ್ಯೆ ಕುಸಿತ, ವಲಸೆ ಭಾಷೆಯ ಬೆಳೆಯುತ್ತಿರುವ ಪ್ರಭಾವ, ಬದಲಾಗುತ್ತಿರುವ ಜನಸಂಖ್ಯೆ ಪರಿವರ್ತನೆ, ಇಂದು ಈ ಖಂಡದ ಪ್ರಮುಖ ಸವಾಲಾಗಿದೆ. ಆದರೆ ನಾವು ಇಂದು, ಅರ್ಥವಾಗದ ಮತ್ತು ನಮ್ಮ ಪರಂಪರೆಗೆ ಯಾವುದೇ ಸಂಬಂಧವಿಲ್ಲದ ಈ ವಿದೇಶಿ ಭಾಷೆಗಳಿಗೆ ಮನ್ನಣೆ ನೀಡುತ್ತಿದ್ದೇವೆ. ಹಾಗೂ ನಮ್ಮ ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘಸ್ನಾನ ಮಾಡಿಸುತ್ತಿರುವುದು ಅವಮಾನದ ಲಕ್ಷಣವೆಂದೇ ಪರಿಗಣಿಸುತ್ತೇನೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ನಟ ಜಗ್ಗೇಶ್ ಟಾಂಗ್

ಭಾಷೆ ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ. ಇಂದು ಕನ್ನಡಿಗರಿಗೆ ಸಿಗುತ್ತಿರುವ ಸ್ಥಾನ-ಮಾನ, ಮರ್ಯಾದೆ ಎಲ್ಲವೂ ನಮ್ಮ ಶ್ರೀಮಂತ ಪರಂಪರೆಯ ಬಳುವಳಿಯಿಂದ ಬಂದದ್ದು. ಅದನ್ನು ನಾವು ಹೆಮ್ಮೆಯಿಂದ ಬಳಸಿ, ಉಳಿಸಿ ಇನ್ನಷ್ಟು ಮೆರುಗುಗೊಳಿಸುವುದು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಶುದ್ಧ ಕನ್ನಡ ಬಳಕೆ ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡುವುದು ಹಾಗೂ ಸಂವಹನದಲ್ಲಿ ಹೆಚ್ಚಿನ ಆಲೋಚನೆಯ ನಿಖರತೆಯನ್ನು ತಲುಪಬಹುದಾಗಿದೆ.

ವಿಡಿಯೋದಲ್ಲೇನಿದೆ?: ಇದಷ್ಟು ಹೇಳಲು ಕಾರಣ ನಮ್ಮ ಕೆಲವು ದೃಶ್ಯ ಮಾಧ್ಯಮದವರು ಭಾಷೆಗೆ ಸಂಬಂಧಿಸಿದಂತೆ ಪುತ್ತೂರಿನ ಕಾರ್ಯಕ್ರಮ ಒಂದರಲ್ಲಿ ನನ್ನ ಮಾತು ಮತ್ತು ಆಲೋಚನೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿರುವುದ್ದಕ್ಕೆ ಹೃದಯಪೂರ್ವಕ ಸ್ವಾಗತ. ಹೀಗೆ ಕಳೆದ 2 ದಶಕಕ್ಕೂ ಹೆಚ್ಚಿನ ನನ್ನ ರಾಜಕಾರಣದ ಜೀವನದ ಉದ್ದಕ್ಕೂ ಸದಾ ನನ್ನ ಬಗ್ಗೆ ವಿಷಕಾರುತ್ತಲೇ ನನ್ನನ್ನು ಅನಾವರಣಗೊಳಿಸಿದ ಈ ಕೆಲವು ಮಾಧ್ಯಮದ ಮಂದಿಗೆ ಈ ವಿಷಯವನ್ನು ಇನ್ನು ಹೆಚ್ಚಾಗಿ ನಿಮ್ಮ ಅಪ್ರಬುದ್ಧ ಭಾಷೆಯಲ್ಲೇ ಚರ್ಚೆ ಮುಂದುವರಿಸುವಂತೆ ಶುಭ ಕೋರುತ್ತೇನೆ. ಅನಂತ ಧನ್ಯವಾದಗಳು ಅಂತ ಹೇಳಿದ್ದಾರೆ.

https://www.youtube.com/watch?v=tlNDCv9myi4&feature=youtu.be

https://www.youtube.com/watch?v=jE4xn6DpZhY

https://www.youtube.com/watch?v=24frMpm0HGY

TAGGED:ananth kumar hegdebengalurucentral ministerministerpublictvputturvivekananda collegeಅನಂತ್ ಕುಮಾರ್ ಹೆಗ್ಡೆಕೇಂದ್ರ ಸಚಿವಕೌಶಲ್ಯಾಭಿವೃದ್ಧಿ ಸಚಿವಪಬ್ಲಿಕ್ ಟಿವಿಪುತ್ತೂರುಬೆಂಗಳೂರುವಿವೇಕಾನಂದ ಕಾಲೇಜು
Share This Article
Facebook Whatsapp Whatsapp Telegram

Cinema news

Ram Charan Mob At Hospital
ರಾಮ್ ಚರಣ್ ತಳ್ಳಾಟ ನೂಕಾಟ..ಆಸ್ಪತ್ರೆ ಅನ್ನೋದನ್ನೂ ನೋಡದ ಜನ
Cinema Latest Top Stories
yash mother pushpa compound demolition 1
ಯಶ್‌ ತಾಯಿ ಸೈಟ್‌ ಜಟಾಪಟಿ – ಒಂದೇ ಜಾಗಕ್ಕೆ ಎರಡೆರಡು ದಾಖಲೆ ನೀಡಿ ಅಧಿಕಾರಿಗಳ ಯಡವಟ್ಟು?
Cinema Districts Hassan Karnataka Latest Sandalwood States Top Stories
Rashmika Mandanna Vijay Devarakonda
ಫೆ.2 ಕ್ಕೆ ರಶ್ಮಿಕಾ-ವಿಜಯ್ ಮದುವೆ? ಫೇಕ್ ನ್ಯೂಸ್ ಶುರುವಾಗಿದ್ದು ಎಲ್ಲಿಂದ?
Cinema Latest Top Stories
Actress Jayamala
ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷೆಯಾಗಿ ಹಿರಿಯ ನಟಿ ಜಯಮಾಲಾ ಪದಗ್ರಹಣ
Cinema Latest Sandalwood Top Stories

You Might Also Like

CJ Roy 4
Bengaluru City

ಎಲ್ಲಾ ವ್ಯವಹಾರವನ್ನು ಕೈಯಲ್ಲೇ ಬರೆದಿಟ್ಟುಕೊಳ್ಳುತ್ತಿದ್ದ ಸಿಜೆ ರಾಯ್‌

Public TV
By Public TV
17 minutes ago
Gypsy 3
Districts

ಯಪ್ಪಾ… ಸೌಂಡು – ಸಾರ್ವಜನಿಕರಿಗೆ ಕಿರಿಕಿರಿ ಮಾಡ್ತಿದ್ದ ಜಿಪ್ಸಿ ವಶಕ್ಕೆ ಪಡೆದ ಪೊಲೀಸರು

Public TV
By Public TV
42 minutes ago
People criticised tariffs but our patience yielded results PM Narendra Modi on US trade deal
Latest

ಜನರು ಸುಂಕಗಳನ್ನು ಟೀಕಿಸಿದರು, ಆದರೆ ನಮ್ಮ ತಾಳ್ಮೆಗೆ ಫಲ ಸಿಕ್ಕಿತು: ಮೋದಿ

Public TV
By Public TV
43 minutes ago
air india flight bomb threat
Latest

ಫ್ಯೂಯಲ್ ಕಂಟ್ರೋಲ್‌ ಸ್ವಿಚ್‌ನಲ್ಲಿ ದೋಷ; ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಹಾರಾಟ ಸ್ಥಗಿತ

Public TV
By Public TV
1 hour ago
bse share market
Latest

ಟ್ರೇಡ್‌ ಡೀಲ್‌| 15 ನಿಮಿಷದಲ್ಲೇ ಹೂಡಿಕೆದಾರರ ಸಂಪತ್ತು 13 ಲಕ್ಷ ಕೋಟಿ ವೃದ್ಧಿ

Public TV
By Public TV
1 hour ago
Brother murders younger brother over property dispute in Davanagere
Crime

ಜಮೀನು ಒತ್ತುವರಿ ವಿಚಾರಕ್ಕೆ ಗಲಾಟೆ – ತಮ್ಮನ ತಲೆ ಒಡೆದು ಕೊಂದ ಅಣ್ಣ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?