ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವೀಟ್ ಮೂಲಕ ಕಾಲೆಳೆಯಲು ಹೋಗಿ ತಾನೆ ಟ್ರೋಲ್ ಆಗುತ್ತಿರುವ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಈಗ ಮತ್ತೆ ಟ್ರೋಲ್ ಆಗಿದ್ದಾರೆ.
ಬುಧವಾರ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲರ 182 ಅಡಿ ಎತ್ತರದ ಏಕತಾ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ನರೇಂದ್ರ ಮೋದಿಯವರು ಪ್ರತಿಮೆ ಕಾಲ ಬಳಿ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ನಟಿ ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿ ಕಾಲೆಳೆಯಲು ಹೋಗಿದ್ದಾರೆ.
Advertisement
https://twitter.com/divyaspandana/status/1057842482975817728
Advertisement
ರಮ್ಯಾ ಟ್ವಿಟ್ಟರ್ ನಲ್ಲಿ, ಪುತ್ಥಳಿಯ ಬಳಿ ಮೋದಿ ನಿಂತಿರುವ ಚಿತ್ರವನ್ನು ಹಾಕಿ, ಹಕ್ಕಿ ಗಲೀಜು ಮಾಡಿದೆಯೇ? ಎಂಬ ಅಡಿಬರವನ್ನು ಹಾಕಿ ಪ್ರಶ್ನಿಸಿದ್ದರು.
Advertisement
ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಮ್ಯಾರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‍ನಲ್ಲಿರುವ ಎಲ್ಲಾ ನಾಯಕರ ಸಂಸ್ಕೃತಿಯು ಹೀಗೆಯೇ? ರಾಹುಲ್ ಗಾಂಧಿ ಹೀಗೆ ಮಾಡಿ ಎಂದು ನಿಮಗೆ ಸಲಹೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
Advertisement
Ummm no, it is the values of the Congress that are dropping.
Historical disdain for Sardar Patel + Pathological dislike for @narendramodi = Such language.
Clearly, @RahulGandhi’s politics of 'love'! https://t.co/1TPCY7Fs4d
— BJP (@BJP4India) November 1, 2018
ಸಾಂವಿಧಾನಿಕ ಸ್ಥಾನವಾದ ಪ್ರಧಾನಿ ಹುದ್ದೆ ಹೊಂದಿರುವ ವ್ಯಕ್ತಿಗೆ ನೀವು ಕೊಡುಗ ಗೌರವ ಇದೆಯೇ? ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ಮೋದಿಯವರಿಗೆ ನೀವು ಅವಮಾನ ಮಾಡಿದ್ದೀರಿ ಎಂದು ಇನ್ನೂ ಕೆಲವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಮತ್ತೆ ಟ್ವೀಟ್‍ನಲ್ಲಿ ರಮ್ಯಾ, ನನ್ನ ವಿರುದ್ಧ ಟೀಕೆ ಮಾಡುವ ಮುನ್ನ, ಕನ್ನಡಿ ಮುಂದೆ ನಿಮ್ಮನ್ನು ನೀವು ನೋಡಿಕೊಳ್ಳಿ. ನನಗೆ ಅನಿಸಿದ್ದನ್ನು ನಾನು ಹೇಳಿದ್ದೇನೆ. ನಿಮ್ಮ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಈ ಬಗ್ಗೆ ನಾನು ಏನನ್ನು ಸ್ಪಷ್ಟಪಡಿಸುವುದಿಲ್ಲವೆಂದು ಬರೆದುಕೊಂಡಿದ್ದಾರೆ.
When you’re done huffing & puffing take a breath & hold a mirror to yourselves. My views are mine. I don’t give two hoots about yours. I’m not going to clarify what I meant and what I didn’t cos you don’t deserve one.
— Ramya/Divya Spandana (@divyaspandana) November 1, 2018
Outrageous, is this the Congress Culture,to abuse others,abuse our PM? We can be critical but not abuse; Shame on you; @RahulGandhi Rahul is this what Congress is all about? Would you too like being abused like this by other official spokesperson @Jairam_Ramesh Not Done! https://t.co/F77XHns8Ao
— Mohandas Pai (@TVMohandasPai) November 1, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv