ಪಾಟ್ನಾ: ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆ, ವರ್ಷಕ್ಕೂ ಮುನ್ನವೇ ಕಾವು ಪಡೆದುಕೊಳ್ಳುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ರಾಮಯಣ (Ramayana) ಮತ್ತು ಮಹಾಭಾರತಕ್ಕೆ (Mahabharata) ಹೋಲಿಸಿದ್ದು ನಿತೀಶ್ ಕುಮಾರ್ (Nitish Kumar) ಅವರನ್ನು ರಾಮನಿಗೆ (Rama) ಹೋಲಿಸಿದರೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ರಾವಣನಿಗೆ (Ravana) ಹೋಲಿಸಿ ಪೋಸ್ಟರ್ ಹಾಕಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.
Advertisement
ಪಾಟ್ನಾದ ಆರ್‌ಜೆಡಿ (RJD) ಕಚೇರಿ ಮುಂಭಾಗ ಮತ್ತು ಆರ್‌ಜೆಡಿ ನಾಯಕಿ ರಾಬ್ರಿ ದೇವಿ ನಿವಾಸದ ಮುಂದೆ ಈ ಪೋಸ್ಟರ್ ಹಾಕಲಾಗಿದೆ. 2024ರ ಚುನಾವಣೆಯಲ್ಲಿ ಬಿಜೆಪಿಯ ಸೋಲು ಮತ್ತು ಮಹಾಮೈತ್ರಿಕೂಟದ ಗೆಲುವನ್ನು ವಿವರಿಸಲು ಎರಡು ಹಿಂದೂ ಪುರಾಣಗಳಾದ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಬಳಸಿಕೊಳ್ಳಲಾಗಿದೆ. ಪೋಸ್ಟರ್‌ನಲ್ಲಿ ನಿತೀಶ್ ಕುಮಾರ್ (ಮಹಾಘಟಬಂಧನ ನಾಯಕ) ಅವರನ್ನು ಭಗವಾನ್ ರಾಮ/ಕೃಷ್ಣ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ/ಕಂಸ ಎಂದು ಉಲ್ಲೇಖಿಸಲಾಗಿದೆ. ರಾಮಾಯಣದಲ್ಲಿ ರಾಮ ರಾವಣನನ್ನು ಹೇಗೆ ಸೋಲಿಸಿದನೊ ಮತ್ತು ಮಹಾಭಾರತದಲ್ಲಿ ಕೃಷ್ಣನು ಕಂಸನನ್ನು ಹೇಗೆ ಸೋಲಿಸಿದನೊ ಅದೇ ರೀತಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟವು 2024ರ ಲೋಕಸಭೆ ಚುನಾವಣೆಯಲ್ಲಿ ಪಿಎಂ ಮೋದಿಯನ್ನು ಸೋಲಿಸುತ್ತದೆ ಎಂದು ಪೋಸ್ಟರ್‌ನಲ್ಲಿ ಚಿತ್ರಿಸಲಾಗಿದೆ. ಇದನ್ನೂ ಓದಿ: ಮುಂದಿನ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ
Advertisement
Advertisement
ಪೋಸ್ಟರ್ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮೃತುಂಜಯ್ ತಿವಾರಿ, ಈ ಪೋಸ್ಟರ್‌ಗಳನ್ನು ಯಾರು ಹಾಕಿದ್ದಾರೆಂದು ನಮಗೆ ತಿಳಿದಿಲ್ಲ. ಇವುಗಳನ್ನು ಆರ್‌ಜೆಡಿ ಅಧಿಕೃತಗೊಳಿಸಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ತಯಾರಿ ಬಿಹಾರದಿಂದ ಪ್ರಾರಂಭವಾಗಿದ್ದು, ಎಲ್ಲಾ ವಿರೋಧ ಪಕ್ಷಗಳು ಒಂದಾಗಿವೆ. ಬಿಜೆಪಿ, ಬಡವರು, ಯುವಕರು ಮತ್ತು ರೈತರ ವಿರುದ್ಧದ ಪಕ್ಷ, ನಮ್ಮದು ಅದರ ವಿರುದ್ಧದ ಹೋರಾಟವಾಗಿದೆ ಎಂದರು. ಈ ಪೋಸ್ಟರ್‌ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ, ಶಾ ಸಭೆ – ಜನವರಿ ಅಂತ್ಯಕ್ಕೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ?
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k