ಕಲಬುರಗಿ: ಈ ಸರ್ಕಾರದಲ್ಲಿ ಹಣ ಕೊಡದೇ ಯಾವುದೇ ಕೆಲಸ ಕೊಡಲ್ಲ. ಯುವಕರು ಸರ್ಕಾರಿ ನೌಕರಿ ಪಡೆಯಬೇಕು ಅಂದ್ರೆ ಲಂಚ ಕೊಡಬೇಕು. ಯುವತಿಯರು ನೌಕರಿ ಪಡೆಯಬೇಕು ಅಂದ್ರೆ ಮಂಚ ಹತ್ತಬೇಕಾಗಿದೆ. ಹೀಗಾಗಿ ಸದ್ಯ ರಾಜ್ಯದಲ್ಲಿರುವುದು ಲಂಚ ಹಾಗೂ ಮಂಚದ ಸರ್ಕಾರವಾಗಿದೆ ಎಂದು ಬಿಜೆಪಿ ಟೀಕಿಸುವ ಭರದಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ನಡೆದ ಅಕ್ರಮ ಕುರಿತು ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ 40% ಪರ್ಸೆಂಟ್ ಗಾಗಿ ಓರ್ವ ಸಚಿವ ರಾಜೀನಾಮೆ ನೀಡಿದ್ರೆ, ನೌಕರಿ ಕೇಳಿದ ಯುವತಿಗೆ ಮಂಚಕ್ಕೆ ಕರೆದು ಓರ್ವ ಸಚಿವ ರಾಜೀನಾಮೆ ನೀಡಿದ್ದ ಉದಾಹರಣೆಗಳಿವೆ ಎಂದರು. ಈ ಮೂಲಕ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೋಳಿಗೆ ಪರೋಕ್ಷವಾಗಿ ನೀಡಿದರು.
Advertisement
Advertisement
ಸರ್ಕಾರದಲ್ಲಿ ಇರುವ ಉದ್ಯೋಗಗಳನ್ನು ಸರ್ಕಾರ ಯಾಕೆ ಭರ್ತಿ ಮಾಡ್ತಿಲ್ಲ. ಭರ್ತಿ ಮಾಡಲು ಮುಂದಾದ್ರೆ ಅಕ್ರಮಗಳು ಹೊರಗೆ ಬತುತ್ತಿವೆ. ಈ ಸರ್ಕಾರದಲ್ಲಿ ಪ್ರತಿ ಹುದ್ದೆ ಸಹ ಮಾರಾಟಕ್ಕಿವೆ. ಎಸ್ ಡಿಎ ಹುದ್ದೆಗೆ 1300 ಹುದ್ದೆಗೆ ಬ್ಲೂ ಟೂತ್ ಅಕ್ರಮ ನಡೆಸಿರುವುದು ದೃಢಪಟ್ಟಿದೆ. ಈ ಪರೀಕ್ಷೆಯಲ್ಲಿ ಕೇವಲ ಮೂರು ಜನ ಡಿಬಾರ್ ಮಾಡಲಾಗಿದೆ ಎಂದರು. ಇದನ್ನೂ ಓದಿ: ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದ್ದು, ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ: ನ್ಯಾ.ಸಂತೋಷ್ ಹೆಗ್ಡೆ
Advertisement
ಕೆಪಿಟಿಸಿಎಲ್ 1492 ಹುದ್ದೆಗಳನ್ನು ಕರೆಯಲಾಗಿತ್ತು. ಈ ಹುದ್ದೆಗಳಿಗೆ 3 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದರು. ಈ ಪರೀಕ್ಷೆಗೆ ಅಕ್ರಮಕ್ಕಾಗಿ ಗೋಕಾಕ್ ನಿಂದ ವ್ಯಕ್ತಿ ಆಗಮಿಸಿದ. ಈ ಬಗ್ಗೆ ಸಿಐಡಿ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಸರ್ಕಾರ ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ ಅಂತಾ ಹೇಳಿತ್ತು. ಹಾಗಿದ್ರೆ ಗೋಕಾಕ್‍ನಲ್ಲಿ ಯಾಕೆ ಅಭ್ಯರ್ಥಿಯನ್ನು ಬಂಧಿಸಿದ್ರಿ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಕಲಬುರಗಿಯಲ್ಲಿ ಸಹ ಅಕ್ರಮ ನಡೆಸುವುದಕ್ಕೆ ಒಂದು ತಂಡ ಆಗಮಿಸಿತ್ತು. ಈ ಬಗ್ಗೆ ಸಿಐಡಿ ಅವರು ಸರ್ಕಾರಕ್ಕೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ಸರ್ಕಾರ ಯಾಕೆ ಸ್ವಯಂಪ್ರೇರಿತ ಕೇಸ್ ದಾಖಲಿಸುತ್ತಿಲ್ಲ. ಕೂಡಲೇ ಕಲಬುರಗಿ ಅಕ್ರಮ ನಡೆಸಲು ಬಂಧವರನ್ನು ಸಹ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.