ಬೆಂಗಳೂರು: ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನದ ಬಗ್ಗೆ ಇದೀಗ ಬಿಬಿಎಂಪಿ ಉಲ್ಟಾ ಹೊಡೆದಿದೆ.
ಚಾಮರಾಜಪೇಟೆ ಈದ್ಗಾ ಮೈದಾನವು ಆಟದ ಮೈದಾನವಾಗಿದ್ದು, ಬಿಬಿಎಂಪಿ ಆಸ್ತಿ ಆಗಿದೆ ಎಂದು ಈ ಹಿಂದೆ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಹೇಳಿದ್ದರು. ಇದೀಗ ಈ ಮಾತಿಗೆ ಉಲ್ಟಾ ಹೊಡೆದಿದ್ದು, ಈದ್ಗಾ ಮೈದಾನದ ಮಾಲೀಕರು ಸೂಕ್ತ ದಾಖಲೆ ಒದಗಿಸಿ ಖಾತೆ ಮಾಡಿಸಿಕೊಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ.
ನಮಗೂ ಈದ್ಗಾ ಮೈದಾನಕ್ಕೂ ಸಂಬಂಧ ಇಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಮೈದಾನ ಇಲ್ಲ ಎಂದು ಕಮಿಷನರ್ ತಿಳಿಸಿದ್ದಾರೆ. ಇದೀಗ ಬಿಬಿಎಂಪಿ ಈ ನಿರ್ಧಾರದಿಂದ ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಏನಾಗಿತ್ತು:
ವಕ್ಫ್ ಬೋರ್ಡ್ ಕೊಟ್ಟ ದಾಖಲೆಗಳು ಸಿಟಿ ಸರ್ವೆ ಮಾಲೀಕತ್ವದ ಕಲಂನಲ್ಲಿ ಬಿಬಿಎಂಪಿಯದು ಎಂದು ಉಲ್ಲೇಖ ಆಗಿತ್ತು. ಈ ದಾಖಲೆ ಪ್ರಕಾರ ಸಿಟಿ ಸರ್ವೆಯಲ್ಲಿ ಪಾಲಿಕೆ ಆಸ್ತಿ ಎಂದಿದ್ದರೂ ಯಾರು ಕೇಸ್ ಹಾಕಿ ಕೊಂಡಿಲ್ಲ. 1964 ಸಿಟಿ ಸರ್ವೆ ದಾಖಲೆ ಪ್ರಕಾರ ಯಾರು ಆಸ್ತಿ ವಿವಾದ ತೆಗೆದಿರಲಿಲ್ಲ. ಇದೀಗ ದಾಖಲೆಗಳ ಪರಿಶೀಲನೆ ವೇಳೆ ಪಾಲಿಕೆ ಆಸ್ತಿಯಲ್ಲ ಎಂದು ಸ್ಪಷ್ಟವಾಗಿದೆ.
ಸುಪ್ರಿಂಕೋರ್ಟ್‍ಗೆ ಮುಸ್ಲಿಂ ಸಮುದಾಯ ವ್ಯಕ್ತಿಯೊಬ್ಬರು ಮನವಿ ಸಲ್ಲಿಸಿದ್ದರು. ಆಗ ಪಾಲಿಕೆಯೂ ಈ ಬಗ್ಗೆ ದಾಖಲೆ ಒದಗಿಸುವ ಕೆಲಸ ಮಾಡಿತ್ತು. ಟ್ರಯಲ್ ಕೋರ್ಟ್‍ನಲ್ಲಿ ಪಾಲಿಕೆ ಪರ ಆಗಿತು. ಹೈಕೋರ್ಟ್, ಸುಪ್ರಿಂಕೋರ್ಟ್ ಎರಡರಲ್ಲೂ ಹೋರಾಟ ಮಾಡಿತ್ತು. ಈ ವೇಳೆ ಆಟದ ಮೈದಾನ ಪಾಲಿಕೆಯದು ಎಂದು ಮನವಿ ಮಾಡಲಾಗಿತ್ತು.
ಎಲ್ಲ ಖಾತೆಗಳ ಪರಿಶೀಲನೆ ಕಾನೂನು ಮೊರೆ ಪ್ರಕಾರ ಪಾಲಿಕೆ ಮಾಡಿದೆ. 1962ನಲ್ಲಿ ಸುಪ್ರಿಂಕೋರ್ಟ್ ಆರ್ಡರ್ ಆಗಿದೆ. 1965ರಲ್ಲಿ ವಕ್ಫ್ ಬೋರ್ಡ್‌ನಲ್ಲಿ 2.5 ಎಕರೆ ಈದ್ಗಾ ಮೈದಾನ ಎಂದು ತೋರಿಸಲಾಗಿತ್ತು. 1974 ಸಿಟಿ ಸರ್ವೆಯಿಂದ ನೋಟಿಸ್ ಬರುತ್ತದೆ. ಸಿಟಿ ಸರ್ವೆ ಮುಂದೆ ವಕ್ಫ್ ಬೋರ್ಡ್ ಹಾಜರು ಆಗಿರಲಿಲ್ಲ ಆದರೆ ಪಾಲಿಕೆ ಆಗಿತ್ತು. ಪರಿಣಾಮ ಬಿಬಿಎಂಪಿ ಮೈದಾನ ಎಂದು ಉಲ್ಲೇಖ ಆಗಿದೆ ಆದರೆ ಇದೀಗ ಪಾಲಿಕೆ ನಮಗೂ ಈದ್ಗಾ ಮೈದಾನಕ್ಕೂ ಸಂಬಂಧ ಇಲ್ಲ ಎನ್ನುತ್ತಿದೆ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
Live Tv