ಬೆಂಗಳೂರು: 15% ಆರೋಪ ಮಾಡಿ ಯೂಟರ್ನ್ ಹೊಡೆದ ಗುತ್ತಿಗೆದಾರರ (Contractors) ವಿರುದ್ಧ ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ಹೌದು. ರಾತ್ರೋ ರಾತ್ರಿ ಮಾಜಿ ಶಾಸಕರೊಬ್ಬರ ಮಧ್ಯಸ್ಥಿಕಯಲ್ಲಿ ಸಂಧಾನ ಮಾಡಿದ್ದಾರೆ ಎಂದು ಹೆಚ್ಡಿಕೆ ಹೊಸ ಆರೋಪ ಮಾಡಿದ್ದಾರೆ. ಅಂದು ಆರೋಪ ಮಾಡಿ ಇಂದು ಉಲ್ಟಾ ಹೊಡೆದಿದ್ದು ಕಂಟ್ರಾಕ್ಟರ್ಸ್ ಯಾಕೆ..?, ಗುತ್ತಿಗೆದಾರರ ನಡುವೆ ರಾತ್ರೋ ರಾತ್ರಿ ಸಂಧಾನ ಮಾಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಆದರೆ ಕುಮಾರಸ್ವಾಮಿ ಹಾಕಿದ ಸಂಧಾನದ ಬಾಂಬ್ ನಿಜವೋ? ಸುಳ್ಳೋ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ 1 ಕೋಟಿಗೂ ಆಧಿಕ ಅರ್ಜಿ ಸಲ್ಲಿಕೆ
Advertisement
Advertisement
ಈ ಮೂಲಕ ರಾತ್ರೋ ರಾತ್ರಿ ಸಂಧಾನ ಮಾಡಿದ ಮಾಜಿ ಶಾಸಕ ಯಾರು?, ಆ ಮಾಜಿ ಶಾಸಕ ಡಿಸಿಎಂ ಡಿಕೆಶಿವಕುಮಾರ್ (DK Shivakumar) ಆಪ್ತರಾ?, ಗುತ್ತಿಗೆದಾರರಿಗೆ ಬಿಲ್ ಬಾಕಿ ಭರವಸೆ ಕೊಟ್ಟು ಸಂಧಾನ ಮಾಡಿದ್ರಾ?, ಆರೋಪ ವಾಪಸ್ ಪಡೆಯದೇ ಇದ್ದರೆ ಬಿಲ್ ಬಿಡುಗಡೆ ಮಾಡೊಲ್ಲ ಅಂತ ಬೆದರಿಕೆ ಹಾಕಿದ್ರಾ?, ಆ ಶಾಸಕನ ಬೆದರಿಕೆಗೆ ಯೂಟರ್ನ್ ಗೆ ಗುತ್ತಿಗೆದಾರರು ಉಲ್ಟಾ ಹೊಡೆದ್ರಾ ಎಂಬೆಲ್ಲ ಪ್ರಶ್ನೆ ಎದ್ದಿದೆ.
Advertisement
Web Stories