ರಾಯಚೂರು: ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್‌ರಿಂದ ಇಲ್ಲಿನ ಗುತ್ತಿಗೆದಾರರಿಗೆ ಪರ್ಸೆಂಟೇಜ್ ಕಿರಿಕಿರಿಯಿದೆ ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಗಂಭೀರ ಆರೋಪ ಮಾಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯಂತಹ ಪ್ರಕರಣಗಳು ರಾಯಚೂರಿನಲ್ಲಿಯೂ ನಡೆಯುವ ಆತಂಕವಿದೆ. ಕಾಮಗಾರಿ ಪರ್ಸೆಂಟೇಜ್ ಕಮಿಷನ್ ಹಾವಳಿ ರಾಯಚೂರಲ್ಲೂ ತಾಂಡವವಾಡುತ್ತಿದೆ. ಶಿವರಾಜ್ ಪಾಟೀಲ್ 40 ರಿಂದ 50 ಪರ್ಸೆಂಟೇಜ್ ಕೇಳುತ್ತಿದ್ದಾರೆ. ಲಾಭದಾಯಕ ಕಾಮಗಾರಿಗಳು ಶಾಸಕರ ಸಹೋದರರೇ ಮಾಡುತ್ತಿದ್ದಾರೆ. ಅಪೆಂಡೆಕ್ಸ್ ಸಿ ನಾನ್ ಪ್ಲಾನ್ಡ್ ಎಕ್ಸ್ಪೆಂಡಿಚರ್ ಅಡಿ ಬಿಜೆಪಿ ಕಾರ್ಯಕರ್ತರಿಗೆ, ಗುತ್ತಿಗೆದಾರರಿಗೆ ಕೆಲಸ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ನೈತಿಕ ಸ್ಥೈರ್ಯ ಕುಗ್ಗಿಸೋದು ಕಾಂಗ್ರೆಸ್ ಕನಸು: ಕೆಜಿ ಬೋಪಯ್ಯ
Advertisement
Advertisement
ಅನುದಾನವೇ ಇಲ್ಲದ ಕೆಲಸ ಮಾಡುವ ಕಾರ್ಯಕರ್ತರು ಹಾಗೂ ಗುತ್ತಿಗೆದಾರರು ಶಾಸಕರ ಹಿಂದೆ ಅಲೆದಾಡುವಂತಾಗಿದೆ. ಬಿಲ್ ನಿಲ್ಲಿಸಿ ಅವರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯಂತೆ ಇಲ್ಲೂ ಅನಾಹುತಗಳಾಗುವ ಭಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್
Advertisement
ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿಯೂ ಶಾಸಕರು ಹಲವರಿಗೆ 3-4 ಕೋಟಿ ರೂ.ಯ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ರಾಯಚೂರು ನಗರಾಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಕಾಮಗಾರಿ ಎಲ್ಲಿ ನಡೆದಿವೆ ಎಂಬುವುದು ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ ಈ ಹಿಂದೆ ನೇರವಾಗಿ ಆರೋಪ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅವರ ತಪ್ಪು ಒಪ್ಪಿಕೊಂಡಂತೆ ಕಾಣುತ್ತಿದೆ ಎಂದು ರವಿ ಬೋಸರಾಜು ಆರೋಪಿಸಿದ್ದಾರೆ.