– ಸರ್ಕಾರ ವಜಾಕ್ಕೆ ರಾಜ್ಯಪಾಲರಿಗೆ ಕಾಂಗ್ರೆಸ್ ಆಗ್ರಹ
– ಹೊರ ರಾಜ್ಯದವರಿಗೆ ಗುತ್ತಿಗೆ ನೀಡಲಾಗುತ್ತಿದೆ
ಬೆಂಗಳೂರು: ಬಿಟ್‍ಕಾಯಿನ್ ಹಗರಣದ ಆರೋಪದ ಬೆನ್ನಲ್ಲೇ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಈಗ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಕೇಳುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಆರೋಪಿಸಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಲೆಟರ್ ಹೆಡ್‌ನಲ್ಲಿ ಬಿಜೆಪಿ ಸರ್ಕಾರದಲ್ಲಿನ ಕಮಿಷನ್ ದಂಧೆ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Advertisement
ಲೋಕೋಪಯೋಗಿ ಇಲಾಖೆ, ಸಣ್ಣ ಮತ್ತು ಬೃಹತ್ ನೀರಾವರಿ ಕಾಮಗಾರಿ, ಪಂಚಾಯತ್‍ರಾಜ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆದಾರರು ಅನಾರೋಗ್ಯಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಮ್ಮ ಚುನಾಯಿತ ಪ್ರತಿನಿಧಿಗಳೇ ನಮ್ಮ ರಾಜ್ಯದ ಗುತ್ತಿಗೆಯನ್ನು ಹೊರರಾಜ್ಯದವರಿಗೆ ಕೊಡಿಸುತ್ತಿದ್ದಾರೆ. ರಸ್ತೆ, ಕಟ್ಟಡ ಕಾಮಗಾರಿ ತೆಗೆದುಕೊಳ್ಳದ ಪರಿಸ್ಥಿತಿ ನಿರ್ಮಿಸಲಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಇಂದಿನಿಂದ 3 ದಿನ ಚಂಡಮಾರುತ ಮಳೆ – ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ
Advertisement
Advertisement
ರಾಜ್ಯದಲ್ಲಿನ ಈ ಅನಾರೋಗ್ಯಕರ ಪರಿಸ್ಥಿತಿಯಿಂದ ಗುತ್ತಿಗೆದಾರರು ಗುತ್ತಿಗೆ ಕಾಮಗಾರಿ ಕೈಬಿಟ್ಟಿದ್ದಾರೆ. ನಿಜವಾದ ಬೇಡಿಕೆಯಿಂದ ವಂಚಿತರಾಗಿರುವ 1 ಲಕ್ಷ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Advertisement
ಕಮಿಷನ್‍ಗಾಗಿ ಸಚಿವರು, ಲೋಕಸಭಾ ಸಂಸದರು, ಶಾಸಕರು, ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಪ್ರಧಾನಿ ಬರೆದಿರುವ ಪತ್ರದಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಇದನ್ನೂ ಓದಿ: ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ ತಪ್ಪಾಗಿದೆ: ಹಂಸಲೇಖ
ಪತ್ರದಲ್ಲಿ ಏನಿದೆ?
ಇಲಾಖಾ ಸಚಿವರಿಂದ ಟೆಂಡರ್ ಅನುಮೋದನೆಗೆ 5% ಕಮಿಷನ್‌ಗೆ ಕಿರುಕುಳ. ಕೆಲ ಸಂಸದರಿಗೆ ಕಾಮಗಾರಿ ಆರಂಭಕ್ಕೆ ಮುನ್ನ 2% ಕಮಿಷನ್‌ಗೆ ಟಾರ್ಚರ್ ನೀಡುತ್ತಿದ್ದಾರೆ. ಜಿಲ್ಲೆ, ತಾಲೂಕು ಮಟ್ಟದಲ್ಲೂ ಶಾಸಕರು ಪರ್ಸೆಂಟೇಜ್‍ಗೆ ಒತ್ತಾಯ ಮಾಡುತ್ತಿದ್ದಾರೆ.
ಕಟ್ಟಡ ಕಾಮಗಾರಿಗೆ 5%, ರಸ್ತೆ ಕಾಮಗಾರಿಗೆ 10% ಕೊಡಬೇಕು. ಪ್ಯಾಕೇಜ್ ಸಿಸ್ಟಮ್‍ನಿಂದ ನೆರೆ ರಾಜ್ಯದ ಗುತ್ತಿಗೆದಾರರಿಗೆ ಲಾಭವಾಗುತ್ತಿದೆ. ಅಂದಾಜು ಖರ್ಚಿನಲ್ಲಿ 10% ಕೊಡುವವರಿಗೆ ಶಾಸಕರು ಟೆಂಡರ್ ಕೊಡಿಸ್ತಿದ್ದಾರೆ. ನೊಂದಾಯಿತ ಗುತ್ತಿಗೆದಾರರಿಗೆ ಟೆಂಡರ್ ಕೊಡುತ್ತಿಲ್ಲ.
ಜನಪ್ರತಿನಿಧಿಗಳ ಮೂಲಕ ಹೊರರಾಜ್ಯದ ಗುತ್ತಿಗೆದಾರರು ಭಾರೀ ಲಾಬಿ ಮಾಡುತ್ತಿದ್ದು, ಇದರಿಂದ ಸ್ಥಳೀಯ ನೈಜ ಗುತ್ತಿಗೆದಾರರ ಜೀವನ ಸಂಕಷ್ಟಕ್ಕೆ ಒಳಗಾಗಿದೆ. ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್‍ನಲ್ಲಿ ಅನ್ಯಾಯ ಆಗುತ್ತಿದ್ದು ಸ್ಥಳೀಯ ಗುತ್ತಿಗೆದಾರರು 25%-30% ಕಮಿಷನ್ ಕೊಡಬೇಕು.
ಕೆಲಸ ಆರಂಭಕ್ಕೆ ಮುನ್ನವೇ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದುಡ್ಡು ಕೊಡಬೇಕು. ಕೆಲಸ ಮುಗಿದ ಬಾಕಿ ಬಿಲ್ ಬಿಡುಗಡೆಗೂ 5%-6% ಕಮಿಷನ್ ಕೂಡ ಕೊಡಬೇಕು. ಇದು ಒಳ್ಳೆ ಗುತ್ತಿಗೆದಾರರ ಕೆಲಸದ ಮೇಲೆ ಪರಿಣಾಮ ಬೀರುತ್ತಿದ್ದು, ಪ್ರಾಮಾಣಿಕ, ಉತ್ಸಾಹಿ ಗುತ್ತಿಗೆದಾರರಿಗೆ ಅನ್ಯಾಯ ಆಗುತ್ತಿದೆ.
ಇವರ ಕಾಟದಿಂದ ದೇಶಕ್ಕೆ ಅತಿದೊಡ್ಡ ನಷ್ಟವಾಗುತ್ತಿದ್ದರೂ ಕಾನೂನು ಕ್ರಮ ಆಗುತ್ತಿಲ್ಲ. ರಾಜ್ಯ ಸರ್ಕಾರ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳುವ ಇರಾದೆ ತೋರಿಸುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ತುರ್ತಾಗಿ ಕ್ರಮ ತೆಗೆದುಕೊಂಡು 1 ಲಕ್ಷಕ್ಕೂ ಹೆಚ್ಚು ಗುತ್ತಿಗೆದಾರರ ಸಹಾಯಕ್ಕೆ ಬರಬೇಕಿದೆ.
ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಅನ್ನೋ ಮಾತು ಬಿಜೆಪಿ ವಿಷಯದಲ್ಲಿ ಅಪ್ಪಟ ಸತ್ಯ. ಕಾಮಗಾರಿಗಳಿಗೆ 40% ಕಮಿಷನ್ ಪಡಿತಿರೋ ಈ ಸರ್ಕಾರ ತಾನು ಪಾರದರ್ಶಕ ಎಂದು ರಾಜಾರೋಷವಾಗಿ ಹೇಳ್ತಿದೆ. ಗುತ್ತಿಗೆದಾರರ ಪ್ರಕಾರ ಕಾಮಗಾರಿಯ 56ರಿಂದ 57% ಪರ್ಸೆಂಟ್ ಹಣ ಬಿಜೆಪಿ ನಾಯಕರ ಜೇಬಿಗಿಳಿಯುತ್ತಿದೆ. #FourtyPercentSarkar
1/3 pic.twitter.com/86XHEQXALp
— DK Shivakumar (@DKShivakumar) November 25, 2021
ಸರ್ಕಾರವನ್ನು ವಜಾಗೊಳಿಸಿ:
ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘವೇ ಶೇ.40ರಷ್ಟು ಕಮಿಷನ್ ದಂಧೆ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‍ರನ್ನು ಭೇಟಿ ಆಗಿ `ರಾಜ್ಯದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ’ ಒತ್ತಾಯಿಸಿದರು. ಬಳಿಕ ಮಾತಾಡಿದ ಸಿದ್ದರಾಮಯ್ಯ `ರಾಜ್ಯದ ಇತಿಹಾಸದಲ್ಲಿ ಗುತ್ತಿಗೆದಾರರು ಸರ್ಕಾರದ ವಿರುದ್ಧ ಹೀಗೆ ಪತ್ರ ಬರೆದಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದರು.
ಆರೋಪಗಳ ಪತ್ರ ಪ್ರಧಾನಿ ಅವರನ್ನು ತಲುಪಿದ್ದರೂ ಕ್ರಮ ಕೈಗೊಳ್ಳದೆ ಜಾಣ ಮೌನವಹಿಸಿರುವುದೇಕೆ? ಇಂಥ ಭ್ರಷ್ಟ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಆಗ್ರಹಿಸಿ ಇಂದು ಶಾಸಕಾಂಗ ಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ನೀಡಿದೆ.#FourtyPercentSarkar
3/3
— DK Shivakumar (@DKShivakumar) November 25, 2021
ಆರೋಪ ಸುಳ್ಳು:
ಆರೋಪಗಳೆಲ್ಲವೂ ಸುಳ್ಳು ಎಂದು ಸಿಎಂ ಬೊಮ್ಮಾಯಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ನಡುವೆ ಪತ್ರ ಸಂಬಂಧ ತನಿಖೆ ನಡೆಸುವಂತೆ ಮುಖ್ಯಕಾರ್ಯದರ್ಶಿಗೆ ಸಿಎಂ ಸೂಚಿಸಿದ್ದಾರೆ.