– ಗುತ್ತಿಗೆದಾರರ ಹೋರಾಟಕ್ಕೆ ಹೆಚ್‍ಡಿಕೆ ಬೆಂಬಲ
ಬೆಂಗಳೂರು: ಬಿಬಿಎಂಪಿ ಬಾಕಿ ಬಿಲ್ ನೀಡುವ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಿಧಿಸಿರುವ ನಿಯಮಗಳ ವಿರುದ್ಧ ಗುತ್ತಿಗೆದಾರರ ಸಂಘ (Contractors Association) ಹೊರಾಟಕ್ಕೆ ಮುಂದಾಗಿದೆ.
Advertisement
ಸರ್ಕಾರ ತಡೆಹಿಡಿದ ಹಣ ಬಿಡುಗಡೆ ಮಾಡುವವರೆಗೂ ಬೆಂಗಳೂರಿನ ಎಲ್ಲಾ ಕಾಮಗಾರಿಗಳನ್ನು ಬಂದ್ ಮಾಡಲು ಗುತ್ತಿಗೆದಾರರ ಸಂಘ ತೀರ್ಮಾನಿಸಿದೆ. ಹಣ ಸ್ಥಗಿತ ಆದಾಗಲೇ 60% ಕಾಮಗಾರಿ ಸ್ಥಗಿತ ಆಗಿತ್ತು. ಕೇವಲ 40% ಕಾಮಗಾರಿ ನಡೆಯುತ್ತಿದ್ದವು. ಸರ್ಕಾರದಿಂದ 2,700 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಈಗ ಹಣ ಬಿಡುಗಡೆ ಮಾಡುವವರೆಗೂ ಆ ಕಾಮಗಾರಿಗಳನ್ನು ಸ್ಥಗಿತ ಮಾಡುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ ಸಿಐಡಿ ತನಿಖೆಗೆ
Advertisement
ವಿವಿಧ ಕಾಮಗಾರಿಗಳ 2700 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿಯ ಬಾಕಿ ಬಿಲ್ ನೀಡಲು 26 ಅಂಶಗಳ ಮಾಹಿತಿ ಸಲ್ಲಿಕೆಯನ್ನು ಡಿ.ಕೆ ಶಿವಕುಮಾರ್ ಕಡ್ಡಾಯ ಮಾಡಿದ್ದಾರೆ.
Advertisement
Advertisement
ಈ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು (HD Kumaraswamy) ಗುತ್ತಿಗೆದಾರರ ಸಂಘದ ಅಧ್ಯಕ್ಷರು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಕಳೆದ 26 ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ತಾವು ಮಾಡಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಮಾಡಿಲ್ಲ. ಮುಖ್ಯ ಆಯುಕ್ತರು ಬಿಲ್ ಪಾವತಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಬಿಲ್ ಬಾಕಿ ಉಳಿಸಿಕೊಂಡು ಈಗ ತನಿಖೆ ಆಗಬೇಕು ಎನ್ನುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ನಮಗೆ ಸ್ಪಂದಿಸುತ್ತಿಲ್ಲ. ಈಗಾಗಲೇ ಹಲವು ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಮಂಗಳೂರಿನಲ್ಲಿ ಒಬ್ಬ ಗುತ್ತಿಗೆದಾರ ಹಾಗೂ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪಾಲಿಕೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ತಮ್ಮ ಸಂಕಟ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಗುತ್ತಿಗೆದಾರರಿಗೆ ಹೆಚ್‍ಡಿಕೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ. ಗುತ್ತಿಗೆದಾರರ ಬಾಕಿ ಹಣ ತಡೆ ಹಿಡಿಯುವುದು ಸರಿಯಲ್ಲ. ಹಣ ಬಿಡುಗಡೆ ಮಾಡದಿದ್ದರೆ ನಿಮ್ಮ ಜೊತೆ ನಾನು ಧರಣಿ ಕೂರುತ್ತೇನೆ. ಈ ಬಗ್ಗೆ ಯಾರು ಹೆದರಬೇಕಿಲ್ಲ. ಈ ವಿಚಾರವಾಗಿ ಯಾರು ದುಡಕಬೇಡಿ. ನಿಮ್ಮ ಪರವಾಗಿ ನಾನು ನಿಲ್ಲುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ದಯಾಮರಣ ಕೋರಿ ಅರ್ಜಿಯನ್ನು ಗುತ್ತಿಗೆದಾರರು ಅಸ್ರ್ತವಾಗಿಸಿಕೊಂಡಿದ್ದಾರೆ. ಈ ವಿಚಾರವಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘದಿಂದ ರಾಜ್ಯಪಾಲರಿಗೆ ಮಂಗಳವಾರ ಅರ್ಜಿ ನೀಡಲು ಸಂಘ ನಿರ್ಧರಿಸಿದೆ. ಇದನ್ನೂ ಓದಿ: ಹೆಚ್ಚಿನ ಅನುದಾನ ನಿರೀಕ್ಷೆ ಮಾಡಬೇಡಿ – ಜಿಲ್ಲಾವಾರು ಶಾಸಕರ ಜೊತೆ ಸಿಎಂ ಸಭೆ
Web Stories